ಭದ್ರತೆಯ ವ್ಯಾಪಾರ ಮಾಡುವವರಿಗೆ ಮೊದಲು ದೇಶವೋ ಅಥವಾ ವಾಸನೆಯೋ ?’ – ಅಸದುದ್ದೀನ ಓವೈಸಿ

`ಮುಸಲ್ಮಾನರಿಗೆ ದೇಶ ಮೊದಲೋ ಅಥವಾ ಧರ್ಮ’ ಎಂದು ಪ್ರಶ್ನಿಸಿದಕ್ಕೆ ಅಸದುದ್ದೀನ್ ಓವೈಸಿಯವರಿಂದ ವಿಷಯ ಬದಲಾವಣೆ !

ಭಾಗ್ಯನಗರ (ತೇಲಂಗಾಣ) – ಗುಪ್ತಚರ ಇಲಾಖೆಯ ಉನ್ನತ ಹುದ್ದೆಗಳಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಅಧಿಕಾರಿ ಇಲ್ಲ. ಭಾಜಪ ಮುಸ್ಲಿಮರನ್ನು ಅನುಮಾನದಿಂದ ನೋಡುತ್ತಿದೆ. ಇದು ಅದರ ಪರಿಣಾಮವೇ ಆಗಿದೆ. ಗುಪ್ತಚರ ಇಲಾಖೆ ಮತ್ತು ರಾ (ರಿಸರ್ಚ ಅಂಡ್ ಅನಾಲಿಸಿಸ್ ವಿಂಗ್) ಇವೆರಡೂ ಸಂಸ್ಥೆಗಳು ಈಗ ಪೂರ್ಣವಾಗಿ ಬಹುಸಂಖ್ಯಾತರ (ಹಿಂದೂಗಳ) ಸಂಸ್ಥೆಯಾಗಿದೆ. ಇದರ ಕಾರಣ, ಭಾಜಪ ನಿರಂತರವಾಗಿ ಮುಸಲ್ಮಾನರಲ್ಲಿ ಅವರ ನಿಷ್ಠೆಯ ಪುರಾವೆಗಳನ್ನು ಕೇಳುತ್ತಿದೆ. ಅವರಿಗೆ ಸಮಾನ ಸ್ಥಾನಮಾನ ನೀಡಲಾಗುತ್ತಿಲ್ಲ ಎಂದು ಎಂ.ಐ.ಎಂ. ಪಕ್ಷದ ಅಧ್ಯಕ್ಷ ಮತ್ತು ಶಾಸಕ ಅಸದುದ್ದೀನ ಒವೈಸಿಯವರು ಜುಲೈ 23 ರಂದು ಟ್ವೀಟ್ ಮಾಡಿದ್ದರು. ಇದಕ್ಕೆ ದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತಪಡಿಸಲಾಯಿತು.

ಈ ವಿರೋಧದ ಬಳಿಕ ಒವೈಸಿಯವರು ಪುನಃ ಟ್ವೀಟ ಮಾಡಿ `ಭದ್ರತೆಯ ವ್ಯಾಪಾರ ಮಾಡುವವರಿಗೆ ದೇಶ ಮೊದಲೋ , ಅಥವಾ ವಾಸನೆಯೋ ?’ ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಅವರು ಹಿಂದೂ ಅಧಿಕಾರಿ ಕಾಮಕ್ಕೆ ಬಲಿಯಾಗಿ ಪಾಕಿಸ್ತಾನಕ್ಕೆ ಗೌಪ್ಯ ಮಾಹಿತಿಯನ್ನು ನೀಡುವಾಗ ಸಿಕ್ಕಿಬಿದ್ದಿರುವ ವಿಷಯವನ್ನು ಬೊಟ್ಟು ಮಾಡಿ ತೋರಿಸಿದ್ದಾರೆ.

1. ಪ್ರಸಿದ್ಧ ಕವಿ ಕುಮಾರ ವಿಶ್ವಾಸ ಇವರು ಓವೈಸಿಯವರನ್ನು ಉದ್ದೇಶಿಸಿ, `’ಕೇವಲ ಎರಡು ವಿಷಯಗಳನ್ನು ಹೇಳಿರಿ, ಇಸ್ಲಾಂ ಮತ್ತು ಭಾರತ ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡುವ ಸಮಯ ಬಂದರೆ, ನೀವು ಯಾವುದನ್ನು ಆಯ್ಕೆ ಮಾಡುತ್ತೀರಿ?’ ಹಾಗೆಯೇ ಕುರಾನ ಶರೀಫ ಮತ್ತು ಸಂವಿಧಾನಗಳಲ್ಲಿ ಒಂದು ವಿಷಯವನ್ನು ಆಯ್ಕೆ ಮಾಡುವ ಸಮಯ ಬಂದರೆ ನೀವು ಯಾವುದನ್ನು ಆಯ್ಕೆ ಮಾಡುತ್ತೀರಿ? ನಿಮ್ಮ ಉತ್ತರದ ಪ್ರತೀಕ್ಷೆಯಲ್ಲಿರುವ ಒಬ್ಬ ಭಾರತೀಯ ಸನಾತನಿ’ ಎಂದು ಕೇಳಿದ್ದರು.

2. ಅಸದುದ್ದೀನ ಒವೈಸಿಯವರು ತಮ್ಮ ಟ್ವೀಟ್ ಗೆ ವಿರೋಧ ವ್ಯಕ್ತವಾಗುತ್ತಿರುವುದನ್ನು ನೋಡಿ ಮತ್ತೊಂದು ಟ್ವೀಟ್ ಮಾಡಿ, ಮುಸಲ್ಮಾನರನ್ನು “ಧರ್ಮ ಮತ್ತು ದೇಶಗಳಲ್ಲಿ ಯಾವುದನ್ನು ಆಯ್ಕೆ ಮಾಡುತ್ತೀರಿ? ಎಂದು ಕೇಳಲಾಗುತ್ತದೆ. ಅದೇ ಸಮಯದಲ್ಲಿ ಇಂತಹ ಅನೇಕ ಜನರಿದ್ದಾರೆ. ಅವರು ದೇಶದ ಭದ್ರತೆಯ ಒಪ್ಪಂದ ಮಾಡುವಾಗ ಸಿಕ್ಕಿ ಬಿದ್ದಿದ್ದಾರೆ. ಐ.ಎಸ್.ಐ ಮಹಿಳೆಯರು ನಕಲಿ ಖಾತೆಯನ್ನು ತಯಾರಿಸಿ ಈ ಜನರನ್ನು ಅವರ ಜಾಲದಲ್ಲಿ ಸೆಳೆದುಕೊಳ್ಳುತ್ತಾರೆ. ಧರ್ಮದ ವಿಷಯ ದೂರವೇ ಉಳಿಯಿತು. ಯಾರಾದರೂ ಅವರನ್ನು ಕೇಳಿರಿ, ವಾಸನೆ ಮತ್ತು ದೇಶ ಇದರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ? ಎಂದು ಕೇಳಿದ್ದಾರೆ.

ಸಂಪಾದಕೀಯ ನಿಲುವು

ಭಾರತದ ರಕ್ಷಣೆಯನ್ನು ದುರ್ಬಲಗೊಳಿಸುವವರ ವಿರುದ್ಧ ಭಾರತ ಸರಕಾರ ಕಟಿಬದ್ಧವೇ ಆಗಿದೆ ! ಮುಸಲ್ಮಾನರಿಗೆ ದೇಶ ಮೊದಲು ಆಗಿದೆಯೋ ಅಥವಾ ಇಲ್ಲವೋ’ ಈ ಬಗ್ಗೆ ಓವೈಸಿಯವರು ವಿಷಯ ಬದಲಿಸುವ ನಿಲುವು ತಳೆಯುತ್ತಾರೆ ಎನ್ನುವುದು ಮಾತ್ರ ಸತ್ಯ !