ಉಡುಪಿಯಲ್ಲಿ ೩ ಮತಾಂಧ ವಿದ್ಯಾರ್ಥಿನಿಯರ ದುಷ್ಕೃತ್ಯ !
ಉಡುಪಿ (ಕರ್ನಾಟಕ) – ಉಡುಪಿಯ ಅಂಬಲಪಾಡಿ ಬೈಪಾಸ್ ನಲ್ಲಿರುವ ನೇತ್ರ ಜ್ಯೋತಿ ಖಾಸಗಿ ಮಹಾವಿದ್ಯಾಲಯದ ೩ ಮುಸಲ್ಮಾನ ವಿದ್ಯಾರ್ಥಿನಿಯರು ಮಹಾವಿದ್ಯಾಲಯದ ಶೌಚಾಲಯದಲ್ಲಿ ಕ್ಯಾಮೆರಾ ಅಳವಡಿಸಿರುವುದು ಬೆಳಕಿಗೆ ಬಂದಿದೆ. ಇದರಿಂದ ಅವರು ಹಿಂದೂ ವಿದ್ಯಾರ್ಥಿನಿಯರ ಛಾಯಾಚಿತ್ರಗಳನ್ನು ತೆಗೆದು ಮುಸಲ್ಮಾನ ಹುಡುಗರಿಗೆ ಪ್ರಸಾರ ಮಾಡಿರುವ ಮಾಹಿತಿ ಬಹಿರಂಗವಾಗಿದೆ. ಅವರು ತೆಗೆದಿರುವ ಕೆಲವು ಛಾಯಾ ಚಿತ್ರಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಇಂತಹ ಘುಣಾಸ್ಪದ ಕೃತ್ಯ ನಡೆಸಿರುವುದು ೩ ವಿದ್ಯಾರ್ಥಿನಿಯರ ಬಗ್ಗೆ ತಿಳಿದ ನಂತರ. ಈ ೩ ವಿದ್ಯಾರ್ಥಿನಿಯರ ಜೊತೆಗೆ ಇತರ ವಿದ್ಯಾರ್ಥಿನಿಯರ ಮಾತಿನ ಚಕಮಕಿ ನಡೆಯಿತು. ಆ ಸಮಯದಲ್ಲಿ ಮಹಾವಿದ್ಯಾಲಯದ ವ್ಯವಸ್ಥಾಪಕ ಮಂಡಳಿ ಸದಸ್ಯರ ಹಸ್ತಕ್ಷೇಪದಿಂದ ವಿದ್ಯಾರ್ಥಿನಿಯರನ್ನುಶಾಂತಗೊಳಿಸಲಾಯಿತು. ಇದರ ನಂತರ ಈ ೩ ವಿದ್ಯಾರ್ಥಿನಿಯರನ್ನು ಮಹಾವಿದ್ಯಾಲಯದಿಂದ ಅಮಾನತುಗೊಳಿಸಲಾಯಿತು. ಇತರ ವಿದ್ಯಾರ್ಥಿನಿಯರು ಈ ೩ ವಿದ್ಯಾರ್ಥಿನಿಗಳ ಮೇಲೆ ಕಠೋರ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
Karnataka: Three girl students suspended for placing a mobile camera in the bathroom of a nursing home in Udupihttps://t.co/qAYnO1fR3L
— OpIndia.com (@OpIndia_com) July 22, 2023
೧. ಈ ೩ ವಿದ್ಯಾರ್ಥಿನಿಯರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿ ಸಂಘಟನೆಯಿಂದ ಪೊಲೀಸ ಅಧಿಕಾರಿ ಅಕ್ಷಯ ಹಾಕೆ ಇವರ ಬಳಿ ಬೇಡಿಕೆ ಸಲ್ಲಿಸಲಾಗಿದೆ.
೨. ಮಹಾವಿದ್ಯಾಲಯದ ವ್ಯವಸ್ಥಾಪಕ ಮಂಡಳದಿಂದ ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಲಾಗಿದೆ ; ಆದರೆ ಅವರ ವಿರುದ್ಧ ದೂರು ದಾಖಲಿಸಲಾಗಿಲ್ಲ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಸಂಪಾದಕೀಯ ನಿಲುವುಕೇವಲ ಮತಾಂಧ ಯುವಕರಷ್ಟೇ ಅಲ್ಲ, ಈಗ ಯುವತಿಯರು ಕೂಡ ಹಿಂದೂ ಯುವತಿಯರ ಜೀವನ ಹಾಳು ಮಾಡುವ ಅವಕಾಶಗಳನ್ನು ಹುಡುಕುತ್ತಿದ್ದಾರೆ ಎಂಬುದು ಪದೇಪದೇ ಕಂಡುಬರುತ್ತಿದೆ.. ಸರ್ವಧರ್ಮಸಮಭಾವದವರಿಗೆ ಇದರ ಬಗ್ಗೆ ಏನು ಹೇಳಲಿಕ್ಕಿದೆ ? |