ಮುರಾದಾಬಾದ (ಉತ್ತರಪ್ರದೇಶ) – ಪಾಕಿಸ್ತಾನದಿಂದ ನೇಪಾಳ ಮಾರ್ಗವಾಗಿ ಭಾರತಕ್ಕೆ ಬಂದಿರುವ ಸೀಮಾ ಹೈದರ್ ಮತ್ತು ಸಚಿನ್ ಮೀನಾ ಇವರ ಪ್ರಕರಣ ಚರ್ಚೆಯಲ್ಲಿ ಇರುವಾಗ ಉತ್ತರ ಪ್ರದೇಶದಲ್ಲಿನ ಮುರಾದಾಬಾದದಿಂದ ಇಂತಹದೇ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ. ಸೀಮಾ ಹೈದರ್ ನಂತೆ ಬಾಂಗ್ಲಾದೇಶದಲ್ಲಿನ ಜೂಲಿ ಎಂಬ ಓರ್ವ ಮುಸಲ್ಮಾನ ಮಹಿಳೆಯು ಫೇಸ್ಬುಕ್ ಮೂಲಕ ಭಾರತದಲ್ಲಿನ ಹಿಂದೂ ಟ್ಯಾಕ್ಸಿ ಚಾಲಕ ಅಜಯನ ಪರಿಚಯ ಮಾಡಿಕೊಂಡು ನಂತರ ಅವನನ್ನು ಪ್ರೀತಿಯ ಬಲೆಗೆ ಸಿಲುಕಿಸಿ ನಂತರ ಜೂಲಿ ಆಕೆಯ ೧೧ ವರ್ಷದ ಮಗಳು ಹಲಿಮಾ ಇವಳ ಜೊತೆಗೆ ಮುರಾದಾಬಾದಿಗೆ ತಲುಪಿದಳು. ಜೂಲಿ ಇಸ್ಲಾಂ ತ್ಯಜಿಸಿ ಹಿಂದೂ ಧರ್ಮ ಸ್ವೀಕರಿಸಿ ಅಜಯನ ಜೊತೆಗೆ ವಿವಾಹವಾದಳು. ವಿವಾಹದ ಒಂದು ವರ್ಷದ ನಂತರ ಅಂದರೆ ೩ ತಿಂಗಳ ಹಿಂದೆ ಆಕೆ ಅಜಯನ ವಿಸಾ. ನವೀಕರಣದ ನೆಪ ಹೇಳಿ ಭಾರತ ಬಾಂಗ್ಲಾದೇಶದ ಗಡಿಗೆ ಕರೆದುಕೊಂಡು ಹೋದಳು ಮತ್ತು ಅಲ್ಲಿಂದ ಆಕೆ ಅಜಯನ ವೀಸಾ ಮತ್ತು ಪಾಸ್ಪೋರ್ಟ್ ಇಲ್ಲದೆ ಬಾಂಗ್ಲಾದೇಶಕ್ಕೆ ಕರೆದುಕೊಂಡು ಹೋದಳು. (ಇದಕ್ಕೆ ಕಾರಣಕರ್ತರಾಗಿರುವ ಅಧಿಕಾರಿಗಳಿಗೆ ತಕ್ಷಣ ಜೈಲಿಗೆ ಹಾಕಬೇಕು ! – ಸಂಪಾದಕರು)
Another #SeemaHaider case? #Bangladesh’s Julie marries #Moradabad’s Ajay, cross border love story takes mysterious turnhttps://t.co/l4XT5S6DbL
— DNA (@dna) July 18, 2023
ನಾಲ್ಕು ದಿನಗಳ ಹಿಂದೆ ಅಜಯನು ತನ್ನ ಸಹೋದರಿಯ ಜೊತೆಗೆ ಮೊಬೈಲ್ ಮೂಲಕ ಸಂಪರ್ಕಿಸಿ ಅವನು ತೊಂದರೆಯಲ್ಲಿ ಇರುವುದಾಗಿ ಹೇಳಿದನು. ಅದರ ನಂತರ ತಕ್ಷಣವೇ ರಕ್ತದ ಕಲೆಗಳಿಂದ ಕೂಡಿರುವ ಅಜಯನ ಒಂದು ಛಾಯಾಚಿತ್ರ ಇವರಿಗೆ ದೊರೆತಿದೆ. ಈ ಪ್ರಕರಣದಲ್ಲಿ ಅಜಯನ ತಾಯಿ ತಂದೆ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಇದು ಕೂಡ ಲವ್ ಜಿಹಾದವೇ ಆಗಿದೆ ! ಇಂತಹ ಘಟನೆಗಳನ್ನು ತಡೆಯುವುದಕ್ಕಾಗಿ ಹಿಂದೂಗಳ ಸರ್ತಕರಾಗಿರುವುದು ಹಾಗೂ ಸರಕಾರದಿಂದ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ ! |