ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರ ಹೇಳಿಕೆ !
ಗೌಹಾಟಿ (ಆಸ್ಸಾಂ) – ಗೌಹಟ್ಟಿಯಲ್ಲಿ ಮಿಯಾ ವ್ಯಾಪಾರಿಗಳಿಂದ ತರಕಾರಿಗಳ ದರಗಳು ಹೆಚ್ಚಾಗಿವೆ. ಅವರು ಆಸ್ಸಾಮಿ ವ್ಯಾಪಾರಿಗಳಿಗೆ ಹೆಚ್ಚಿನ ಬೆಲೆಯ ತರಕಾರಿಗಳನ್ನು ಮಾರುತ್ತಿದ್ದಾರೆ. ವಾಸ್ತವಿಕವಾಗಿ ಹಳ್ಳಿಗಳಲ್ಲಿ ತರಕಾರಿಗಳು ಕಡಿಮೆ ಬೆಲೆಗೆ ಸಿಗುತ್ತಿದೆ. ಒಂದು ವೇಳೆ ಆಸ್ಸಾಮಿ ವ್ಯಾಪಾರಿಗಳು ತರಕಾರಿಗಳನ್ನು ಮಾರುತ್ತಿದ್ದರೆ, ಅವರು ಆಸ್ಸಾಮಿ ಜನರಿಂದ ತರಕಾರಿಗಳಿಗೆ ಹೆಚ್ಚಿನ ಬೆಲೆಯನ್ನು ವಸೂಲಿ ಮಾಡುತ್ತಿರಲಿಲ್ಲ ಎಂದು ಆಸ್ಸಾಂನ ಭಾಜಪ ಸರಕಾರದ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರು ಹೇಳಿದ್ದಾರೆ. ಅಸ್ಸಾಂ ನಲ್ಲಿ ಬಂಗಾಲಿ ಮುಸಲ್ಮಾನರಿಗೆ ಹೆಚ್ಚಿನವರು ಮಿಯಾ ಎಂದು ಕರೆಯುತ್ತಾರೆ ಅವರು ಮೂಲಃ ಬಾಂಗ್ಲಾದೇಶಿಯವರಾಗಿದ್ದಾರೆ.
ಎಂ.ಐ.ಎಂ. ಅಧ್ಯಕ್ಷ ಮತ್ತು ಶಾಸಕ ಅಸದುದ್ದೀನ ಓವೈಸಿಯವರು ಮುಖ್ಯಮಂತ್ರಿ ಸರಮಾ ಇವರ ಹೇಳಿಕೆಗಳನ್ನು ಟೀಕಿಸಿದ್ದಾರೆ. ಅವರು, ದೇಶದಲ್ಲಿ ಒಂದು ಗುಂಪಿದೆ, ಅದು ತನ್ನ ಮನೆಯ ಎಮ್ಮೆಯ ಹಾಲು ಕೊಡದೇ ಇರುವ ಬಗ್ಗೆ ಮತ್ತು ಕೋಳಿ ಮೊಟ್ಟೆ ನೀಡದೇ ಇರುವ ಬಗ್ಗೆ ಮುಸಲ್ಮಾನರನ್ನು ದೋಷಿಸುತ್ತಾರೆ. ಹೆಚ್ಚಿನವರು ತಮ್ಮ ಸೋಲನ್ನು ಮುಸಲ್ಮಾನರ ಮೇಲೆ ಹಾಕುತ್ತಿದ್ದಾರೆ. ಪ್ರಧಾನಮಂತ್ರಿ ಮೋದಿಯವರ ವಿದೇಶಿ ಮುಸಲ್ಮಾನರ ಬಗ್ಗೆ ವಿಶೇಷ ಸ್ನೇಹ ಮುಂದುವರಿದಿದೆ. ಮೋದಿಯವರು ಅವರಿಂದ ಟೊಮೆಟೊ, ಪಾಲಕ, ಬಟಾಟೆ ಮುಂತಾದವುಗಳನ್ನು ತರಿಸಿಕೊಂಡು ಕಾರ್ಯವನ್ನು ನಿರ್ವಹಿಸಬೇಕು ಎಂದು ಟೀಕಿಸಿದರು. (ಯಾವುದೇ ರಾಜ್ಯದ ಮುಖ್ಯಮಂತ್ರಿ ಒಂದು ವೇಳೆ ಈ ರೀತಿ ಹೇಳಿಕೆ ನೀಡುತ್ತಿದ್ದರೆ, ಅದರ ಹಿಂದೆ ಏನಾದರೂ ಕಾರಣವಿರುತ್ತದೆ; ಆದರೆ ಓವೈಸಿಯವರಂತಹ ಮುಖಂಡರಿಗೆ ತಮ್ಮ ಧರ್ಮಬಾಂಧವರು ಶುದ್ಧರಾಗಿದ್ದಾರೆ ಎಂದೇ ಅನಿಸುತ್ತದೆ ! – ಸಂಪಾದಕರು)
#Assam Chief Minister Himanta Biswa Sarma has attracted flak for blaming the ‘Miya’ people for the inflated prices of vegetables in the State.https://t.co/5uf2NaxPGZ
— The Hindu (@the_hindu) July 15, 2023
ಸಂಪಾದಕೀಯ ನಿಲುವು`ಮುಖ್ಯಮಂತ್ರಿ ಸರಮಾ ಇವರು ಹೇಳುತ್ತಿರುವುದು, ದೇಶದ ಇತರೆ ಭಾಗಗಳಲ್ಲಿಯೂ ನಡೆಯುತ್ತಿದೆಯೇ?’, ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಆವಶ್ಯಕತೆಯಿದೆ ! ಹಾಗೆ ಇದ್ದರೂ ಅಂತಹ ವ್ಯಾಪಾರಿಗಳನ್ನು ಯಾರಾದರೂ ಬಹಿಷ್ಕಾರ ಮಾಡುವಂತೆ ಕರೆ ನೀಡಿದರೇ ಆಶ್ಚರ್ಯ ಪಡಬಾರದು. |