
ಕೋಲಕಾತಾ – ಬಂಗಾಳದ `ಇಂಡಿಯನ್ ಸೆಕ್ಯುಲರ್ ಫ್ರಂಟ’ನ (ಐ.ಎಸ್.ಎಫ್.) ಶಾಸಕ ನೌಶಾದ ಸಿದ್ಧಕಿ ಮದುವೆಯ ಆಮಿಷವೊಡ್ಡಿ ಓರ್ವ ಮಹಿಳೆಯ ಮೇಲೆ ಅತ್ಯಾಚಾರ ಮಾಡಿರುವ ಆರೋಪವಿದೆ. ಈ ಪ್ರಕರಣದಲ್ಲಿ ಸಂತ್ರಸ್ತೆಯು ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಸಿದ್ಧಕಿಯ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಮಹಿಳೆಯು ಪೊಲೀಸರಿಗೆ ನೀಡಿದ ದೂರಿನಲ್ಲಿ, `ನೌಶಾದ ಸಿದ್ಧಕಿ ನನ್ನನ್ನು ತನ್ನ ಕಚೇರಿಯಲ್ಲಿ ಸುಮಾರು ಒಂದೂವರೆ ವರ್ಷಗಳ ಕಾಲ ಅಕ್ರಮವಾಗಿ ಬಂಧಿಸಿಟ್ಟಿದ್ದನು. ತದನಂತರ ಮದುವೆಯ ಆಮಿಷ ತೋರಿಸಿ ನನ್ನೊಂದಿಗೆ ದೀರ್ಘಕಾಲದ ವರೆಗೆ ಶಾರೀರಿಕ ಸಂಬಂಧವನ್ನು ಬೆಳೆಸಿದ್ದನು. ತದನಂತರ ಅವನು ನನ್ನೊಂದಿಗೆ ಬಹಳಷ್ಟು ಕಾಲ ದೈಹಿಕ ಸಂಬಂಧವನ್ನು ಹೊಂದಿದ್ದನು; ಆದರೆ ನಾನು ಮದುವೆಯ ವಿಷಯವನ್ನು ಪ್ರಸ್ತಾಪಿಸಿದಾಗ ಆತ ವಿರೋಧೀಸಿದನು. ನೌಶಾದ್ ಸಿದ್ಧಕಿಯು ತನ್ನ ಸಹಚರರ ನೆರವಿನಿಂದ ನನಗೆ ಬೆದರಿಕೆ ಹಾಕಲು ಪ್ರಾರಂಭಿಸಿದನು’ ಎಂದು ಹೇಳಿದ್ದಾಳೆ. ಸಂತ್ರಸ್ತೆಯು ತನ್ನ ಸಹೋದರನ ಸಹಾಯದಿಂದ ನ್ಯೂ ಟೌನ ಪೊಲೀಸ ಠಾಣೆಯಲ್ಲಿ ಸಿದ್ಧಕಿಯ ವಿರುದ್ಧ ದೂರನ್ನು ದಾಖಲಿಸಿದ್ದಾಳೆ. ಪೊಲೀಸರು ಆರೋಪಿಯ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. (ಕೇವಲ ತನಿಖೆಯನ್ನು ನಡೆಸಿ, ಅಲ್ಲಿಗೇ ನಿಲ್ಲಿಸದೇ ಆರೋಪಿಯನ್ನು ತಕ್ಷಣವೇ ಬಂಧಿಸುವುದು ಅಪೇಕ್ಷಿತವಿದೆ ! – ಸಂಪಾದಕರು) ಶಾಸಕ ನೌಶಾದ ಸಿದ್ಧಕಿಯು `ನಾನು ನಿರಪರಾಧಿಯಾಗಿದ್ದು ನನ್ನ ವಿರುದ್ಧ ಸಂಚನ್ನು ರಚಿಸಲಾಗಿದೆ’ ಎಂದು ಹೇಳಿದ್ದಾನೆ.
West Bengal: Indian Secular Front MLA Naushad Siddiqui booked for raping a woman under the false promise of marriagehttps://t.co/YVVFmKv2Ms
— HinduPost (@hindupost) July 7, 2023
‘ಝುಕತಿ ಹೆ ದುನಿಯಾ, ಝುಕಾನೆ ವಾಲಾ ಚಾಹಿಯೆ’ (‘ಪ್ರಪಂಚ ಬಗ್ಗುತ್ತದೆ, ಬಗ್ಗಿಸುವವನು ಬೇಕು ಅಷ್ಟೇ!’) – ಅಭಿಜಿತ್ ದೀಪಕೆ
ಪೋಷಕರು ಮತ್ತು ಹಿರಿಯರು ಇಂದಿನ ಯುವ ಪೀಳಿಗೆಯೊಂದಿಗೆ ಸಂವಾದ ನಡೆಸಬೇಕು! – ಪ.ಪೂ. ಸರಸಂಘಚಾಲಕ ಡಾ. ಮೋಹನ್ ಜಿ ಭಾಗವತ್
ಸರಕಾರದೊಂದಿಗೆ ರಾಜಿ ಮಾಡಿಕೊಳ್ಳಬೇಕಿದ್ದರೆ, ೨೬ ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುವ ಅಗತ್ಯವಿರಲಿಲ್ಲ! – Sonam Wangchuk
ನ್ಯಾಯಾಲಯವೆಂದರೆ ೨೪ ಗಂಟೆಗಳ ಕಾಲ ನಡೆಯುವ ಮನರಂಜನಾ ವಾಹಿನಿಯಲ್ಲ ! – Supreme Court
ಮುಖ್ಯ ಆರೋಪಿ ಬ್ರಿಜೇಂದ್ರ ಗುಪ್ತನನ್ನು ಬಿಹಾರದಿಂದ ಬಂಧಿಸಿದ ಪೊಲೀಸರು!
ಸಹಾರನ್ಪುರ (ಉತ್ತರ ಪ್ರದೇಶ) ಇಲ್ಲಿನ ಶಿವಮಂದಿರದಲ್ಲಿ ಕಳ್ಳತನ ! – ೩ ಮುಸ್ಲಿಮರ ಬಂಧನ