ರಿಸರ್ವ್ ಬ್ಯಾಂಕ್‌ನ ಗವರ್ನರ್ ಶಕ್ತಿಕಾಂತ ದಾಸ ರವರಿಗೆ ‘ಗವರ್ನರ್ ಒಫ್ ದಿ ಇಯರ’ ಪ್ರಶಸ್ತಿ ನೀಡಿ ಸನ್ಮಾನ !

ನವದೆಹಲಿ – ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿರುವ ಶಕ್ತಿಕಾಂತ ದಾಸ ರವರಿಗೆ ‘ಲಂಡನ್ ಸೆಂಟ್ರಲ್ ಬ್ಯಾಂಕಿಂಗ್’ನ ವತಿಯಿಂದ ೨೦೨೩ನೇ ಸಾಲಿನ ‘ಗವರ್ನರ್ ಒಫ್ ದಿ ಇಯರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ೨೦೧೫ರಲ್ಲಿ ಆಗಿನ ಗವರ್ನರ್ ರಘುರಾಮ ರಾಜನರವರಿಗೂ ಇದೇ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಅವರ ನಂತರ ದಾಸರವರು ಈ ಪ್ರಶಸ್ತಿಯನ್ನು ಪಡೆದ ಎರಡನೇ ಭಾರತೀಯ ಗವರ್ನರ ಆಗಿದ್ದಾರೆ.

ದಾಸರವರು ೨೦೧೮ ರಲ್ಲಿ ಅಧಿಕಾರ ಸ್ವೀಕರಿಸಿದಾಗಿನಿಂದ ಅನೇಕ ಮಹತ್ತರ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಇತ್ತೀಚೆಗೆ ಅವರ ಅಧ್ಯಕ್ಷತೆಯಲ್ಲಿಯೇ ೨ ಸಾವಿರ ರೂಪಾಯಿ ನೋಟನ್ನು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಕರೋನಾದ ಸಮಯದಲ್ಲಿಯೂ ಭಾರತದ ಆರ್ಥಿಕ ವ್ಯವಸ್ಥೆಯನ್ನು ಸ್ಥಿರವಾಗಿಡುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಆರ್ಥಿಕ ಅಸ್ಥಿರತೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಅವರ ಪಾತ್ರವು ಮಹತ್ವದ್ದಾಗಿದೆ.