ಯೋಗ ಋಷಿ ರಾಮದೇವಬಾಬಾ ಇವರ ಬ್ರಿಜಭೂಷಣ ಸಿಂಹ ಇವರ ಹೆಸರನ್ನು ಹೇಳದೇ ಆಗ್ರಹ

ಹರಿದ್ವಾರ (ಉತ್ತರಾಖಂಡ) – ದೇಶದ ಕುಸ್ತಿಪಟುಗಳು ಜಂತರಮಂತರನಲ್ಲಿ ಕುಳಿತುಕೊಂಡು ಕುಸ್ತಿ ಸಂಘಟನೆಯ ಅಧ್ಯಕ್ಷರ ಮೇಲೆ ಅಸಭ್ಯವರ್ತನೆ ಮತ್ತು ವ್ಯಭಿಚಾರಗಳ ಆರೋಪವನ್ನು ಮಾಡುವುದು ಅತ್ಯಂತ ಲಜ್ಜಾಸ್ಪದ ವಿಷಯವಾಗಿದೆ. ಇಂತಹ ವ್ಯಕ್ತಿಯನ್ನು ತಕ್ಷಣವೇ ಬಂಧಿಸಿ ಜೈಲಿಗೆ ಅಟ್ಟಬೇಕು ಎಂದು ಯೋಗ ಋಷಿ ರಾಮದೇವಬಾಬಾ ಇವರು ಕೋರಿದ್ದಾರೆ. ಕುಸ್ತಿ ಸಂಘಟನೆಯ ಅಧ್ಯಕ್ಷರಾಗಿರುವ ಬ್ರಿಜಭೂಷಣ ಸಿಂಹ ಇವರು ಭಾಜಪ ಶಾಸಕರಾಗಿದ್ದಾರೆ; ಆದರೆ ರಾಮದೇವಬಾಬಾ ಇವರು ಅವರ ಹೆಸರನ್ನು ಹೇಳದೆ ಅವರನ್ನು ಬಂಧಿಸಬೇಕೆಂದು ಕೋರಿದರು. ಕಳೆದ ಕೆಲವು ವಾರಗಳಿಂದ ಕುಸ್ತಿಪಟುಗಳು ಸಿಂಹರ ವಿರುದ್ಧ ಕ್ರಮ ಕೈಗೊಳ್ಳುವಂತೆ ಧರಣಿ ಆಂದೋಲನ ನಡೆಸುತ್ತಿದ್ದಾರೆ. ಸಿಂಹರು ಕುಸ್ತಿಪಟುಗಳ ಲೈಂಗಿಕ ಶೋಷಣೆ ನಡೆಸಿರುವ ಆರೋಪವನ್ನು ಮಾಡಿದ್ದಾರೆ. ಸಿಂಹರ ಮೇಲೆ ದೂರು ದಾಖಲಿಸಲಾಗಿದ್ದರೂ, ಅವರನ್ನು ಇದುವರೆಗೂ ಬಂಧಿಸಿರುವುದಿಲ್ಲ.
ರಾಮದೇವಬಾಬಾ ಮಾತನ್ನು ಮುಂದುವರಿಸಿ, ಪ್ರತಿದಿನ ಅಧ್ಯಕ್ಷರು ಮೇಲಿಂದ ಮೇಲೆ ತಾಯಿ, ಸಹೋದರಿ, ಪುತ್ರಿ ಇವರ ವಿಷಯದಲ್ಲಿ ನಿರರ್ಥಕವಾಗಿ ಮಾತನಾಡುತ್ತಿದ್ದಾರೆ. ಇದು ಅತ್ಯಂತ ನಿಂದನೀಯವಾಗಿದೆ, ಅಧರ್ಮವಾಗಿದೆ ಮತ್ತು ಪಾಪವಾಗಿದೆಯೆಂದು ಹೇಳಿದರು.
(ಸೌಜನ್ಯ: Oneindia News)
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ