ಇದುವರೆಗೆ ಉತ್ತರಾಖಂಡದಲ್ಲಿ ೪೨೯ ಅಕ್ರಮ ಗೋರಿಗಳ ನೆಲಸಮ !

೪೫೫ ಹೆಕ್ಟೇರ್ ಭೂಮಿ ಅತಿಕ್ರಮಣ ಮುಕ್ತ !

(ಮಜಾರ ಎಂದರೆ ಮುಸಲ್ಮಾನ ಫಕೀರರ ಗೋರಿ)

ನೆಲಸಮಗೊಳಿಸುವ ಕಾರ್ಯಾಚರಣೆಯ ಭಾಗವಾಗಿ ದೇವಭೂಮಿಯಲ್ಲಿ ಅಕ್ರಮ ಮಜರ್ ಗಳನ್ನು ನೆಲಸಮಗೊಳಿಸಲಾಗಿದೆ

ದೆಹರಾಡೂನ್ (ಉತ್ತರಾಖಂಡ) – ಕಳೆದ ಕೆಲವು ವಾರಗಳಿಂದ ರಾಜ್ಯದಲ್ಲಿ ಅಕ್ರಮ ಗೋರಿಗಳ ಮೇಲೆ ಆಡಳಿತ ಕ್ರಮ ಕೈಗೊಳ್ಳುತ್ತಿದೆ. ಇಲ್ಲಿಯವರೆಗೆ ೪೨೯ ಗೋರಿಗಳನ್ನು ಕೆಡವಲಾಗಿದೆ; ಆದರೆ ಅದೇ ಸಮಯದಲ್ಲಿ, ೪೨ ಅಕ್ರಮ ದೇವಾಲಯಗಳು ಮತ್ತು ೨ ಗುರುದ್ವಾರಗಳನ್ನು ಸಹ ನೆಲಸಮ ಮಾಡಲಾಗಿದೆ. ಈವರೆಗೆ ೪೫೫ ಎಕರೆ ಭೂಮಿಯನ್ನು ಅತಿಕ್ರಮಣಮುಕ್ತಗೊಳಿಸಲಾಗಿದೆ. ರಾಜ್ಯದಲ್ಲಿನ ಎಲ್ಲಾ ಸರಕಾರಿ ಜಮೀನುಗಳ ಅತಿಕ್ರಮಣವನ್ನು ಆದಷ್ಟು ಬೇಗ ತೆರವುಗೊಳಿಸುವಂತೆ ಮುಖ್ಯಮಂತ್ರಿ ಪುಷ್ಕರಸಿಂಗ್ ಧಾಮಿಯವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಹಾಗೆಯೇ ಈ ಭೂಮಿ ಮೇಲೆ ರಾಜ್ಯದಲ್ಲಿನ ಮತ್ತು ಹೊರ ರಾಜ್ಯಗಳಿಂದ ಎಷ್ಟು ಜನ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ ಎಂಬ ಅಂಕಿಅಂಶ ನೀಡುವಂತೆಯೂ ಆದೇಶಿಸಿದ್ದಾರೆ.

ಸಂಪಾದಕರ ನಿಲುವು

ಅಕ್ರಮ ಗೋರಿಗಳು ನಿರ್ಮಾಣ ಆಗುವವರೆಗೆ ಆಡಳಿತ ನಿದ್ದೆ ಮಾಡಿತ್ತೇ ? ಇದಕ್ಕೆ ಜವಾಬ್ದಾರ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಬೇಕು !