`ದಿ ಕೇರಳ ಸ್ಟೋರಿ’ಯನ್ನು ಹೊಗಳಿದ ನಿರ್ದೇಶಕ ರಾಮ ಗೋಪಾಲ ವರ್ಮಾ !

ಬಾಲಿವುಡ್ ಗೆ ಛೀಮಾರಿ

ಮುಂಬಯಿ – ನಿರ್ದೇಶಕ ರಾಮ ಗೋಪಾಲ ವರ್ಮಾ ಇವರು `ದಿ ಕೇರಳ ಸ್ಟೋರಿ’ಯನ್ನು ಹೊಗಳುತ್ತಾ, ಬಾಲಿವುಡ್ ಗೆ ಛೀಮಾರಿ ಹಾಕಿದ್ದಾರೆ. ಈ ಸಂದರ್ಭದಲ್ಲಿ ವರ್ಮಾ ಅವರು, ”ನಾವು ಯಾವುದೇ ಒಂದು ಸುಳ್ಳು ವಿಷಯವನ್ನು ಜನರಿಗೆ ಮತ್ತು ನಮಗೆ ಹೇಳಿಕೊಳ್ಳುವಲ್ಲಿ ಎಷ್ಟು ಪಳಗಿರುತ್ತೇವೆಂದರೆ, ಯಾವಾಗ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಯಾರಾದರೂ ನಮಗೆ ಸತ್ಯವನ್ನು ಹೇಳಿದರೆ, ಆಗ ಮಾತ್ರ ನಮಗೆ ಆಘಾತವೇ ಆಗುತ್ತದೆ. `ದಿ ಕೇರಳ ಸ್ಟೋರಿ’ ಯ ಅಭೂತಪೂರ್ವ ಯಶಸ್ಸಿನ ಬಳಿಕ ಬಾಲಿವುಡ್ ನಲ್ಲಿ ಒಂದು ಸ್ಮಶಾನ ಮೌನ ಹರಡಿದೆಯೆನ್ನುವುದು ಇದರಿಂದ ಸ್ಪಷ್ಟವಾಗುತ್ತಿದೆ” ಎಂದು ಹೇಳಿದರು.

ಸುದೀಪ್ತೊ ಸೇನ ಇವರು ನಿರ್ದೇಶಿಸಿರುವ `ದಿ ಕೇರಳ ಸ್ಟೋರಿ’ ಚಲನಚಿತ್ರಕ್ಕೆ ಅಭೂತಪೂರ್ವ ಯಶಸ್ಸು ಲಭಿಸಿದ್ದು, ಈ ಚಿತ್ರವು 17 ದಿನಗಳಲ್ಲಿ 198 ಕೋಟಿ ರೂಪಾಯಿಗಳನ್ನು ಗಳಿಸಿದೆ. ಬೇಗನೆ ಅದು 200 ಕೋಟಿ ರೂಪಾಯಿಗಳನ್ನು ಗಳಿಸುವ ಸಾಧ್ಯತೆಯಿದೆಯೆಂದು ಹೇಳಲಾಗುತ್ತಿದೆ.