ಜೈಪುರದ ಒಂದು ವಾರ್ಡ್‌ನಲ್ಲಿ ಹಿಂದೂಗಳ ಪಲಾಯನದ ಪೋಸ್ಟರ್ !

  • ಪಲಾಯನಕ್ಕೆ ಸ್ಥಳೀಯ ಕಾಂಗ್ರೆಸ್ ನಗರಸೇವಕ ಫರೀದ್ ಕುರೇಶ್ ಹೊಣೆ !

  • ಪಲಾಯಾನದ ವರದಿಗಳು ಗಾಳಿ ಸುದ್ಧಿ ಎಂಬುದು ಪೊಲೀಸರ ದಾವೆ

ಜೈಪುರ (ರಾಜಸ್ಥಾನ) – ಇಲ್ಲಿನ ಕಿಶನಪೋಲ್ ಪ್ರದೇಶದ ವಾರ್ಡ್ ಸಂಖ್ಯೆ ೬೯ ರ ಸ್ಥಳೀಯ ಕಾಂಗ್ರೆಸ್ ನಗರಸೇವಕ ಫರೀದ್ ಕುರೇಷಿಯುವರಿಂದ ಸ್ಥಳೀಯ ಹಿಂದೂಗಳು ತಾವು ಪಲಾಯನವಾಗುತ್ತಿರುವ ಪೋಸ್ಟರ್‌ಗಳನ್ನು ಎಲ್ಲೆಡೆ ಹಾಕಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರವನ್ನು ಭಾಜಪ ಟೀಕಿಸಿದೆ. ಮತ್ತೊಂದೆಡೆ, ಅಂತಹ ಯಾವುದೇ ಪಲಾಯನ ನಡೆದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ಪೋಸ್ಟರ್ ಅಂಟಿಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ವಾರ್ಡ್ ನಲ್ಲಿ ಓಂ ಪ್ರಕಾಶ್ ಪಾರೀಕ್ ವಾಸಿಸುತ್ತಾರೆ. ಕೆಲವು ದಿನಗಳ ಹಿಂದೆ ಅವರು ಕಾರ್ಪೊರೇಟರ್ ಕುರೇಷಿ ಅವರ ಸಂಬಂಧಿಯೊಬ್ಬರಿಗೆ ತಮ್ಮ ಮನೆಯನ್ನು ಮಾರಿದ್ದರು. ಇದಾದ ನಂತರವೇ ಇಲ್ಲಿ ಹಿಂದೂಗಳ ಪಲಾಯನದ ಪೋಸ್ಟರ್ ಗಳನ್ನು ಅಂಟಿಸಲಾಗಿತ್ತು. ಈ ಕರಪತ್ರಗಳನ್ನು ಯಾರು ಅಂಟಿಸಿದ್ದಾರೆ ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

೧. ಯಾವ ಪ್ರದೇಶದಲ್ಲಿ ಈ ಭಿತ್ತಿಚಿತ್ರಗಳನ್ನು ಅಂಟಿಸಿದ್ದಾರೆ ಆ ಪ್ರದೇಶವನ್ನು ‘ಪುರೋಹಿತ್ ಮೊಹಲ್ಲಾ’ ಎಂದು ಕರೆಯಲಾಗುತ್ತದೆ. ಇಲ್ಲಿ ಬಹುಸಂಖ್ಯಾತ ಹಿಂದೂಗಳು ವಾಸಿಸುತ್ತಿದ್ದಾರೆ. ನೆರೆಯ ಪ್ರದೇಶಗಳಲ್ಲಿ ಮುಸ್ಲಿಂ ಬಹುಸಂಖ್ಯಾತರಿದ್ದಾರೆ. ಪುರೋಹಿತ್ ಮೊಹಲ್ಲಾದಲ್ಲಿ ಹಂತಹಂತವಾಗಿ ಮುಸ್ಲಿಮರ ಸಂಖ್ಯೆಯನ್ನು ಹೆಚ್ಚಿಸಲು ಯತ್ನಿಸುತ್ತಿದ್ದಾರೆ ಎಂದು ಇಲ್ಲಿನ ಹಿಂದೂಗಳು ಆರೋಪಿಸಿದ್ದಾರೆ. ಇದಕ್ಕೆ ಕುರೇಷಿಯಯವರನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ.

೨. ಸ್ಥಳೀಯ ಹಿಂದೂ ಮಹಿಳೆಯು, ಇಲ್ಲಿ ನಮಗೆ ಅವಾಚ್ಯ ಪದಗಳಲ್ಲಿ ನಿಂದಿಸಲಾಗುತ್ತದೆ. ಅವರಿಗೆ, ಇಲ್ಲಿಂದ ನಾವು ಹೊರಟು ಹೋಗಬೇಕು ಎಂದೆನಿಸುತ್ತದೆ. ಹಿಂದೆ ನಮ್ಮ ಮಕ್ಕಳು ರಾತ್ರಿಯಲ್ಲಿಯೂ ಸಹಜವಾಗಿ ಹೊರಗೆ ಹೋಗಬಹುದಾಗಿತ್ತು; ಆದರೆ ಈಗ ಅವರು ಹೊರಬರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

೩. ಪೊಲೀಸರ ಪ್ರಕಾರ, ಈ ಪ್ರದೇಶದಲ್ಲಿ ಯಾವುದೇ ಪಲಾಯನದ ಘಟನೆ ನಡೆದಿಲ್ಲ. ಸಮಾಜಘಾತುಕರಿಂದ ವದಂತಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಹೇಳಿದರು.

ಸಂಪಾದಕರ ನಿಲುವು

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಮತ್ತು ಫರೀದ್ ಕುರೇಶ್ ಕಾಂಗ್ರೆಸ್ ನಗರಸೇವಕ ಆಗಿರುವುದರಿಂದ, ಹಿಂದೂಗಳ ಪಲಾಯನದ ಸುದ್ದಿ ನಿಜವೆಂದು ಭಾವಿಸುತ್ತಾರೆ ! ಕಾಂಗ್ರೆಸ್ ಎಂದರೆ ಹಿಂದೂ ದ್ವೇಷ !