|

ಮೇರಠ (ಉತ್ತರ ಪ್ರದೇಶ) – ಇಲ್ಲಿನ ಶಾಸ್ತ್ರಿನಗರದಲ್ಲಿರುವ ಒಂದು ಹೋಟೆಲಿನಲ್ಲಿ ಮುಸ್ಲಿಂ ಹುಡುಗರಿಂದ ಹಿಂದೂ ಹುಡುಗಿಯರ ಬ್ರೈನ್ ವಾಶ್ ಮಾಡಲಾಗುತ್ತಿದ್ದು ಅಲ್ಲಿ ‘ಲವ್ ಜಿಹಾದ್’ಗಾಗಿ ಒಂದು ಕೇಂದ್ರವನ್ನು ನಡೆಸಲಾಗುತ್ತಿರುವ ಆರೋಪವನ್ನು ಮಾಡುತ್ತಾ ಭಜರಂಗದಳ ಕಾರ್ಯಕರ್ತರು ಅಲ್ಲಿ ದಾಳಿ ನಡೆಸಿದ್ದಾರೆ. ಇದರ ಮಾಹಿತಿ ಪಡೆದ ಪೊಲೀಸರು ಬಜರಂಗ ದಳದ ಆರೋಪದ ಮೇಲೆ ತನಿಖೆ ನಡೆಸಿದ್ದಾರೆ. ಈ ಹೋಟೆಲಿನ ಹೆಸರು ‘ಹಂಗರ್ ಹೆಡ್’ ಎಂದಾಗಿದೆ.
೧. ಭಜರಂಗದಳದ ಕಾರ್ಯಕರ್ತರು ರಾತ್ರಿಯ ಸಮಯದಲ್ಲಿ ಹೋಟೆಲ್ ಗೆ ಪ್ರವೇಶಿಸಿದಾಗ ಗೋಡೆಯೊಂದರ ಮೇಲೆ ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕನ ಹೆಸರು ಬರೆದಿರುವುದು ಕಂಡು ಬಂದಿತ್ತು. ಹಾಗೇಯೆ ಅಲ್ಲಿ ಕೆಲವು ಆಕ್ಷೇಪಾರ್ಹ ಬರಹಗಳೂ ಕಂಡುಬಂದವು.
೨. ಈ ಕುರಿತು ವಿಶ್ವ ಹಿಂದೂ ಪರಿಷತ್ತಿನ ಮಹಾನಗರ ಸಹ ಧರ್ಮ ಪ್ರಸಾರ ಪ್ರಮುಖ ಶ್ರೀ. ಅಶ್ವನಿ ಗುಪ್ತಾ ಇವರು, ಇಲ್ಲಿನ ಗೋಡೆಗಳ ಮೇಲೆ ಅಶ್ಲೀಲ ಬರಹಗಳನ್ನು ಬರೆಯಲಾಗಿತ್ತು. ಅಲ್ಲದೆ ಹೋಟೆಲಿನ ನೌಕರರ ಬಳಿ ಅಶ್ಲೀಲ ವಸ್ತುಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ೪ ಮಂದಿಯನ್ನು ಬಂಧಿಸಿದ್ದಾರೆ.
೩. ಈ ಹೋಟೆಲಿನ ಮಾಲಿಕ ಅರುಣ ಇವರು, ನಮ್ಮ ಹೋಟೆಲಿನಲ್ಲಿ ಹಾಕಿರುವ ಫಲಕದ ಮೇಲೆ ಹೋಟೆಲಿಗೆ ಭೇಟಿ ನೀಡುವವರ ಪ್ರತಿಕ್ರಿಯೆಯನ್ನು ಹಾಕಿರುತ್ತೇವೆ. (ತಮ್ಮ ಸ್ವಂತದ ಹೋಟೆಲಿನಲ್ಲಿ ಇಂತಹ ನೈಜ ಚಟುವಟಿಕೆಗಳು ನಡೆಯುತ್ತಿರುವಾಗ ಆ ವಿಷಯದ ಕುರಿತು ಈ ರೀತಿ ಹಿಂದೇಟು ಹಾಕುವ ಮಾಲೀಕನಿಗೆ ಹಿಂದೂಗಳು ಕಾನೂನುಬದ್ಧವಾಗಿ ಪ್ರಶ್ನೀಸಬೇಕಾಗಿದೆ ! – ಸಂಪಾದಕರು)
೪. ಪೊಲೀಸ್ ಇನ್ಸ್‌ಪೆಕ್ಟರ್ ಸುಬೋಧ್ ಸಕ್ಸೇನಾ ಅವರು ಹೋಟೆಲಿನ ಗೋಡೆಯ ಮೇಲೆ ಬರೆಯಲಾದ ಪಠ್ಯವನ್ನು ತೆಗೆದುಹಾಕುವಂತೆ ಅರುಣ್‌ಗೆ ಹೇಳಿದ್ದಾರೆ.
ಸಹಾರನ್ಪುರ (ಉತ್ತರ ಪ್ರದೇಶ) ಇಲ್ಲಿನ ಶಿವಮಂದಿರದಲ್ಲಿ ಕಳ್ಳತನ ! – ೩ ಮುಸ್ಲಿಮರ ಬಂಧನ
ನಿಮ್ಮಿಂದಾಗಿ ದೇಶದ ಅಪಕೀರ್ತಿಯಾಯಿತು, ಕೋಟ್ಯಂತರ ರೂಪಾಯಿ ನಷ್ಟವಾಯಿತು !
ಕಾಕ್ರೋಚ್ ಜನತಾ ಪಕ್ಷ ವಿದೇಶಿ ಶಕ್ತಿಗಳ ಬೆಂಬಲವಿರುವ ವ್ಯವಸ್ಥೆ !
‘ಮೋದಿ ಸರಕಾರವು ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ‘ರಾಷ್ಟ್ರದ ಶತ್ರುಗಳು’ ಎಂದು ಪರಿಗಣಿಸುತ್ತದೆ!’(ಅಂತೆ)
ಕಾಕ್ರೋಚ್ ಜನತಾ ಪಕ್ಷದ ಹೋರಾಟ ಮುಕ್ತಾಯ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಕೊನೆಗೂ ರಾಜೀನಾಮೆ !