ಟಿ. ರಾಜಾ ಸಿಂಗ್‌ರವರು ಭಾಜಪದಿಂದ ಅಮಾನತು ಮಾಡಿರುವುದು ರದ್ದಾಗುವ ಸಾಧ್ಯತೆ !

ಟಿ. ರಾಜಾ ಸಿಂಗ್‌

ಭಾಗ್ಯನಗರ (ತೆಲಂಗಾಣ) – ಭಾಜಪದಿಂದ ಅಮಾನತುಗೊಂಡಿರುವ ಹಿಂದೂತ್ವನಿಷ್ಠ ಶಾಸಕ ಟಿ. ರಾಜಾ ಸಿಂಗ್‌ರವರ ಅಮಾನತು ಹಿಂಪಡೆಯಲು ಕೇಂದ್ರ ಸಚಿವ ಕಿಶನ್ ರೆಡ್ಡಿಯವರು ಮುಂದಾಗಿದ್ದಾರೆ. ಈ ಬಗ್ಗೆ ಟಿ. ರಾಜಾ ಸಿಂಗ್‌ರವರು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸಿದ ಪ್ರಕರಣದಲ್ಲಿ ಆಗಸ್ಟ್ ೨೦೨೨ ರಲ್ಲಿ, ಟಿ. ರಾಜಾ ಸಿಂಗ್ ಅವರನ್ನು ಭಾಜಪವು ೬ ವರ್ಷಗಳ ಕಾಲ ಪಕ್ಷದಿಂದ ಅಮಾನತುಗೊಳಿಸಿತ್ತು.

೧. ಎ.ಬಿ.ಎನ್ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರಿಗೆ ರಾಜಾ ಸಿಂಗ್ ಅವರ ಅಮಾನತಿನ ಕುರಿತು ಪ್ರಶ್ನೆ ಕೇಳಲಾಯಿತು. ಅದಕ್ಕೆ ರೆಡ್ಡಿಯವರು, ನಿಯಮಗಳ ಅಡಿಯಲ್ಲಿ ರಾಜಾ ಸಿಂಗ್ ಅವರನ್ನು ಅಮಾನತುಗೊಳಿಸಲಾಗಿತ್ತು ಆ ಅಮಾನತನ್ನು ೧೦೦ ಪ್ರತಿಶತ ಹಿಂಪಡೆಯಲಾಗುವುದು, ಈ ಬಗ್ಗೆ ಕೇಂದ್ರ ಅಧಿಕಾರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ. ಈ ಬಗ್ಗೆ ನಾನೂ ಚರ್ಚೆ ಮಾಡುತ್ತಿದ್ದೇನೆ. ಕೇಂದ್ರ ಅಧಿಕಾರಿಗಳಿಗೆ ಎಲ್ಲ ಮಾಹಿತಿ ನೀಡುತ್ತಿದ್ದೇನೆ. ಶೀಘ್ರದಲ್ಲೇ ನಿಗೂಢತೆ ಹೊರಬರಲಿದೆ ಎಂದು ರೆಡ್ಡಿ ಅವರು ಹೇಳಿದ್ದಾರೆ.

೨. ಈ ಬಗ್ಗೆ ಟಿ. ರೆಡ್ಡಿ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ನಾನೂ ಅಮಾನತುಗೊಂಡ ನಂತರವೂ ಭಾಜಪ ಪರ ಕೆಲಸ ಮಾಡುತ್ತಿದ್ದೆ. ಅಮಾನತು ರದ್ದಾದ ನಂತರ ಇನ್ನೂ ಹೆಚ್ಚಿನ ಕೆಲಸವನ್ನು ಮಾಡುತ್ತೇನೆ ಎಂದು ರಾಜಾ ಸಿಂಗ್ ಹೇಳಿದ್ದಾರೆ.