ಹಲವು ಪ್ರಕರಣಗಳು ಬಾಕಿ ಇರುವಾಗ ಒಂದು ಕಾಲ್ಪನಿಕ ವಿಚಾರದಲ್ಲಿ ನ್ಯಾಯಾಲಯದ ಸಮಯ ವ್ಯರ್ಥ ಮಾಡಲಾಗುತ್ತಿದೆ !

ಸಲಿಂಗ ವಿವಾಹ ವಿರೋಧಿಸಿ ಜೈನ ಆಚಾರ್ಯ ಶಿವ ಮುನಿ ಇವರಿಂದ ರಾಷ್ಟ್ರಪತಿಗಳಿಗೆ ಪತ್ರ

ಜೈನ ಆಚಾರ್ಯ ಶಿವ ಮುನಿ

ನವ ದೆಹಲಿ – ಕಳೆದ ಕೆಲವು ದಿನಗಳಿಂದ ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತು ಸರ್ವೋಚ್ಚ ನ್ಯಾಯಾಲಯವು ಪ್ರತಿದಿನ ವಿಚಾರಣೆ ನಡೆಸುತ್ತಿದೆ. ಸಲಿಂಗಕಾಮಿ ವಿವಾಹವನ್ನು ಈಗಾಗಲೇ ಹಿಂದೂ ಸಂಘಟನೆಗಳು, ಸಂತರು ಮುಂತಾದವರು ವಿರೋಧಿಸಿದ್ದಾರೆ. ಈಗ ಜೈನ ಮುನಿಗಳೂ ವಿರೋಧಿಸತೊಡಗಿದ್ದಾರೆ. ಜೈನ ಆಚಾರ್ಯ ಶಿವ ಮುನಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು ಇದನ್ನು ವಿರೋಧಿಸಿದ್ದಾರೆ. ‘ಹಲವು ಪ್ರಕರಣಗಳು ಬಾಕಿ ಇರುವಾಗ ಕಾಲ್ಪನಿಕ ವಿಚಾರದಲ್ಲಿ ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡುತ್ತಿರುವುದು ಅಯೋಗ್ಯವಾಗಿದೆ’ ಎಂದರು.

ಜೈನ ಆಚಾರ್ಯ ಶಿವ ಮುನಿಯವರು ಈ ಪತ್ರದಲ್ಲಿ ಮಂಸಿದ ಸೂತ್ರಗಳು

೧. ಸಲಿಂಗ ವಿವಾಹವನ್ನು ಕಾನೂನಿನ ಮೂಲಕ ಅನುಮೋದನೆ ನೀಡಬಾರದು. ಇಂದು ಭಾರತದಲ್ಲಿ ಹಲವಾರು ಸಮಸ್ಯೆಗಳಿದ್ದು ಅವುಗಳ ವಿರುದ್ದ ಹೋರಡಲಾಗುತ್ತಿರುವಾಗ ಸಲಿಂಗ ವಿವಾಹದಂತಹ ವಿಷಯಗಳನ್ನು ಚರ್ಚಿಸುವ ಅಗತ್ಯವಿಲ್ಲ. ಬಡತನ ನಿರ್ಮೂಲನೆ, ಎಲ್ಲರಿಗೂ ಶಿಕ್ಷಣ, ಮಾಲಿನ್ಯ ಮುಕ್ತ ಪರಿಸರ ಹಾಗೂ ಜನಸಂಖ್ಯೆ ನಿಯಂತ್ರಣಕ್ಕೆ ಶ್ರಮಿಸಬೇಕಿದೆ. ಸರ್ವೋಚ್ಚ ನ್ಯಾಯಾಲಯವು ಈ ಬಗ್ಗೆ ಯಾವುದೇ ತತ್ಪರತೆ ತೋರಿಸುವುದಿಲ್ಲ.

೨. ಭಾರತವು ಎಲ್ಲಾ ಧರ್ಮಗಳು, ಜಾತಿಗಳು ಮತ್ತು ಬುಡಕಟ್ಟುಗಳ ದೇಶವಾಗಿದೆ. ಶತಮಾನಗಳಿಂದ ಇಲ್ಲಿ ಸಲಿಂಗ ವಿವಾಹಕ್ಕೆ ಒಪ್ಪಿಗೆ ನೀಡಿಲ್ಲ. ಮದುವೆಯು ಮಾನವನ ಪ್ರಗತಿಗೆ ಸಂಬಂಧಿಸಿದೆ.

೩. ಸಲಿಂಗಕರ ಹಕ್ಕುಗಳನ್ನು ಈಗಾಗಲೇ ಸರ್ವೋಚ್ಚ ನ್ಯಾಯಾಲಯ ರಕ್ಷಿಸಿದೆ. ಸಲಿಂಗ ವಿವಾಹವು ಮೂಲಭೂತ ಹಕ್ಕು ಅಲ್ಲ, ಆದರೆ ಶಾಸನಬದ್ಧ ಹಕ್ಕಾಗಿದೆ. ವಿಶೇಷ ವಿವಾಹ ಕಾಯ್ದೆಯಡಿ ಇದನ್ನು ಗುರುತಿಸಬಾರದು. ಈ ಕಾಯಿದೆಯು ಮಹಿಳೆಯರು ಮತ್ತು ಪುರುಷರಿಗಾಗಿದೆ.

೪. ಮದುವೆ ಒಂದು ಸಾಮಾಜಿಕ ಸಂಸ್ಥೆಯಾಗಿದೆ. ಈಗ ಅದಕ್ಕೆ ನಾಶ ಮಾಡಲಾಗುವುದಿಲ್ಲ ಮತ್ತು ರೂಪಾಂತರಗೊಳಿಸಲು ಆಗುವುದಿಲ್ಲ. ಭಾರತದಲ್ಲಿ ಮದುವೆಗೆ ಮಹತ್ವವಿದೆ ಮತ್ತು ಅದೊಂದು ದೊಡ್ಡ ಸಂಸ್ಥೆಯಾಗಿದೆ. ಇದು ಕಾಲಾನಂತರದಲ್ಲಿ ಪ್ರತಿ ಪರೀಕ್ಷೆಯಲ್ಲಿ ನಿಜವಾಗಿದೆ. ಸ್ವತಂತ್ರ ಭಾರತದ ಮೇಲೆ ಪಾಶ್ಚಿಮಾತ್ಯ ಪದ್ಧತಿಗಳನ್ನು ಹೇರುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.