‘ಅತೀಕ್ ಹತ್ಯೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಹೊಣೆ ! (ಅಂತೆ) – ಅಸದ್ದುದ್ದೀನ್ ಓವೈಸಿ

ಆತಿಕ್ ಅಹಮದ್ ಮತ್ತು ಅವನ ಸಹೋದರನ ಹತ್ಯೆಯ ಪ್ರಕರಣ

ಅಸದ್ದುದ್ದೀನ್ ಓವೈಸಿ

ಭಾಗ್ಯನಗರ (ತೆಲಂಗಾಣ) – ಅತಿಕ್ ಮತ್ತು ಆಶ್ರಫ್ ನ ಹತ್ಯೆಯಲ್ಲಿ ಉತ್ತರಪ್ರದೇಶದ ಭಾಜಪ ಸರಕಾರದ ಪಾತ್ರವೇನು, ಪೋಲಿಸ್ ಮತ್ತು ಪ್ರಸಾರ ಮಾಧ್ಯಮಗಳ ಉಪಸ್ಥಿತಿಯಲ್ಲಿ ಹತ್ಯೆ ಮಾಡುವ ಈ ಜನರು ಯಾರು ?, ಸರ್ವೋಚ್ಚ ನ್ಯಾಯಾಲಯದ ಉಸ್ತುವಾರಿಯಲ್ಲಿ ಇದರ ವಿಚಾರಣೆ ನಡೆಯಬೇಕು. ನಾನು ನ್ಯಾಯಾಲಯಕ್ಕೆ, ಈ ಪ್ರಕರಣದಲ್ಲಿ ತಾವಾಗಿ ವಿಚಾರಣೆ ನಡೆಸಬೇಕು ಎಂದು ವಿನಂತಿಸುತ್ತೇನೆ. ನ್ಯಾಯಾಲಯ ಸಮಿತಿ ಸ್ಥಾಪನೆ ಮಾಡಬೇಕು. ಒಂದು ತನಿಖಾ ತಂಡ ರಚಿಸಬೇಕು ಮತ್ತು ಸಮಯ ಮಿತಿಯಲ್ಲಿ ವಿಚಾರಣೆ ನಡೆಸಬೇಕು, ಇದರಲ್ಲಿ ಉತ್ತರ ಪ್ರದೇಶದ ಯಾವುದೇ ಅಧಿಕಾರಿ ಇರಬಾರದು. ತನಿಖೆ ಸಮಯಕ್ಕೆ ಸರಿಯಾಗಿ ಪೂರ್ಣವಾಗಬೇಕು ಎಂದು ಎಂ.ಐ.ಎಂ.ನ ಅಧ್ಯಕ್ಷ ಮತ್ತು ಸಂಸದ ಅಸದ್ದುದ್ದೀನ್ ಓವೈಸಿ ಇವರು ಆಗ್ರಹಿಸಿದ್ದಾರೆ. ‘ಹತ್ಯೆಯ ಹೊಣೆಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿಗಳ ಮೇಲೆ ಇದೆ. ಅವರಲ್ಲಿ ಸಾಂವಿಧಾನಿಕ ನೈತಿಕತೆ ಇದ್ದರೆ, ಅವರು ರಾಜೀನಾಮೆ ನೀಡಬೇಕು, ಎಂದು ಕೂಡ ಒತ್ತಾಯಿಸಿದ್ದಾರೆ. ಓವೈಸಿ ಮಾತು ಮುಂದುವರೆಸಿ, ಭಾಜಪ ಸರಕಾರ ಕಾನೂನು ರೀತಿಯಲ್ಲಿ ನಡೆಯದೇ ಬಂದೂಕಿನ ಬಲದಲ್ಲಿ ನಡೆಯುತ್ತದೆ. ಇದರಿಂದ ಜನರಿಗೆ ಸಂವಿಧಾನದ ಮೇಲಿನ ವಿಶ್ವಾಸ ಕಡಿಮೆಯಾಗುವುದು ಎಂದು ಹೇಳಿದರು.

ಸಂಪಾದಕೀಯ ನಿಲುವು

ಓರ್ವ ಗೂಂಡನ ಹತ್ಯೆಯ ನಂತರ ಕೂಗಾಡುವ ಅಸದ್ಧುದ್ದಿನ್ ಓವೈಸಿ ಇವರು ಮತಾಂಧ ಮುಸಲ್ಮಾನರಿಂದ ಹಿಂದೂಗಳ ಹತ್ಯೆ ನಡೆದ ನಂತರ ಒಂದು ಅಕ್ಷರ ಕೂಡ ಮಾತನಾಡುವುದಿಲ್ಲ, ಇದನ್ನು ತಿಳಿಯಬೇಕು !