ಪ್ರಧಾನಮಂತ್ರಿ ಮೋದಿ ಅವರನ್ನು ರಾಜಕೀಯವಾಗಿ ಮುಗಿಸಿದರೆ, ಆಗ ಭಾರತ ಅಭಿವೃದ್ಧಿಯಾಗುವುದು !’ (ಅಂತೆ) – ಕಾಂಗ್ರೆಸ್ ಮುಖಂಡ ಸುಖಜಿಂದರ ಸಿಂಹ ರಂಧಾವಾ

ಜಯಪುರ (ರಾಜಸ್ಥಾನ) – ಕಾಂಗ್ರೆಸ್ಸಿನ ಮುಖಂಡರ ಗುಂಪುಗಾರಿಕೆ ಮುಗಿಸಬೇಕು. ದೇಶವನ್ನು ಉಳಿಸುವುದಕ್ಕಾಗಿ ಪ್ರಧಾನಮಂತ್ರಿ ಮೋದಿ ಇವರನ್ನು ರಾಜಕೀಯವಾಗಿ ಮುಗಿಸಬೇಕು. ಮೋದಿ ಮುಗಿದರೆ ಆಗ, ಭಾರತ ಅಭಿವೃದ್ಧಿಯಾಗುವುದು, ಇಲ್ಲವಾದರೆ ದೇಶ ನಾಶವಾಗುವುದು. ನಮ್ಮ ಹೋರಾಟ ಅದಾನಿ ಇವರ ಜೊತೆ ಅಲ್ಲ, ಭಾಜಪದ ಜೊತೆಗಿದೆ. ಭಾಜಪ ಮುಗೀದರೆ ಆಗ ಅದಾನಿ ಮತ್ತು ಅಂಬಾನಿ ಇವರು ಕೂಡ ಮುಗಿಯುವರು, ಎಂದು ಕಾಂಗ್ರೆಸ್ಸಿನ ರಾಜಸ್ಥಾನದ ದಾಯಿತ್ವ ಇರುವ ಸುಖಜಿಂದರ ಸಿಂಹ ರಂಧಾವಾ ಇವರು ಹೇಳಿಕೆ ನೀಡಿದರು. ಈ ಹೇಳಿಕೆಗೆ ಭಾಜಪ ಟೀಕಿಸಿದೆ.

ಭಾಜಪದ ವಕ್ತಾರರಾದ ಶಹಜಾದ ಪುನಾವಾಲ ಇವರು, ಕಾಂಗ್ರೆಸ್ಸ ಮತ್ತೊಮ್ಮೆ ತನ್ನ ಎಲ್ಲಾ ಮಿತಿಗಳನ್ನು ಮೀರಿದೆ. ಮೋದಿ ಇವರನ್ನು ಮುಗಿಸುವುದಕ್ಕಾಗಿ ಕಾಂಗ್ರೆಸ್ ಜನರನ್ನು ಪ್ರಚೋದಿಸುತ್ತಿದೆ. ಕಾಂಗ್ರೆಸ್ ಈಗ ರಂಧಾವಾ ಇವರನ್ನು ಅಮಾನತು ಗೊಳಿಸುವ ಕ್ರಮ ಕೈಗೊಳ್ಳುವುದೇ ? ಅಥವಾ ಬಹುಮಾನ ನೀಡಿ ಅವರ ಹೇಳಿಕೆಯನ್ನು ಬೆಂಬಲಿಸುವುದೇ ? ಎಂದು ಪುನಾವಾಲ್ ಇವರು ಪ್ರಶ್ನೆ ಉಪಸ್ಥಿತಗೊಳಿಸಿದ್ದಾರೆ.

ಸಂಪಾದಕೀಯ ನಿಲುವು

ಕಾಂಗ್ರೆಸ್ ಮುಖಂಡ ಸುಖಜಿಂದರ ಸಿಂಹ ರಂಧಾವಾ ಇವರ ಹಾಸ್ಯಾಸ್ಪದ ದಾವೆ !

ಜನರೆ ಕಾಂಗ್ರೆಸ್ಸಿಗೆ ರಾಜಕೀಯವಾಗಿ ಮುಗಿಸುವ ಸ್ಥಿತಿಗೆ ತಂದಿರುವುದಿಂದ ಕಳೆದ ೯ ವರ್ಷದಲ್ಲಿ ಭಾರತದ ಪ್ರಗತಿ ಆಗುತ್ತಿದೆ. ಕಾಂಗ್ರೆಸ್ಸನ್ನು ಮುಂದೆ ರಾಜಕೀಯವಾಗಿ ಸಂಪೂರ್ಣ ಮುಗಿಸಿದರೆ ದೇಶದ ಪ್ರಗತಿ ಹೆಚ್ಚಿನ ಪ್ರಮಾಣದಲ್ಲಿ ಆಗುವುದು, ಇದನ್ನು ಯಾರು ನಿರಾಕರಿಸಲು ಸಾಧ್ಯವಿಲ್ಲ.