ಪಾಕಿಸ್ತಾನದಲ್ಲಿ ಶಾಲಾ ಮಕ್ಕಳಿಗೆ ಭಾರತವಿರೋಧಿ ಮತ್ತು ಹಿಂದೂವಿರೋಧಿ ಶಿಕ್ಷಣ !

ಯುವಪೀಳಿಗೆ ಮೇಲೆ ಭಾರತದ್ವೇಷದ ಕುಸಂಸ್ಕಾರ ಮಾಡುತ್ತಿರುವ ಪಾಕಿಸ್ತಾನ !

ನವ ದೆಹಲಿ – ಪಾಕಿಸ್ತಾನದಲ್ಲಿ ಶಾಲಾ ಮಕ್ಕಳಿಗೆ ಭಾರತವಿರೋಧಿ ಮತ್ತು ಹಿಂದೂವಿರೋಧಿ ಶಿಕ್ಷಣ ಕಲಿಸಲಾಗುತ್ತಿದೆ. ೧೦ ನೇ ತರಗತಿಯ ಇತಿಹಾಸದ ಪುಸ್ತಕಗಳಲ್ಲಿ ಭಾರತ ಮತ್ತು ಹಿಂದೂಗಳ ವಿರುದ್ಧ ಅನೇಕ ಸುಳ್ಳು ಆರೋಪಗಳನ್ನು ಮಾಡಿದೆ. ಈ ಪಠ್ಯಪುಸ್ತಕದಲ್ಲಿ, ಭಾರತವು ನಿರಂತರವಾಗಿ ಪರಮಾಣು ಪರೀಕ್ಷೆ ನಡೆಸಿದೆ. ಇದರಿಂದ ಈ ಭಾಗದಲ್ಲಿ ಸಮತೋಲನ ತಪ್ಪಿದೆ. ಹಿಂದೂಗಳು ಮುಸಲ್ಮಾನರ ನರಮೇಧ ನಡೆಸಿದ್ದಾರೆ. ‘ಭಾರತವು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಬಯಸುತ್ತಿಲ್ಲ’, ಎಂದು ಆರೋಪಿಸಿ ಶಾಲಾ ಮಕ್ಕಳಿಗೆ ಹಿಂದೂದ್ವೇಷ ಮತ್ತು ಭಾರತದ್ವೇಷದ ಪಾಠ ಹೇಳಲಾಗುತ್ತಿದೆ. ಈ ಪುಸ್ತಕದಲ್ಲಿ, ಕಾಶ್ಮೀರ ಸಮಸ್ಯೆ ಬಗೆಹರಿಸಲು ನವಾಜ ಷರೀಫ್ ಸರಕಾರ ಹಲವು ಬಾರಿ ಪ್ರಯತ್ನಿಸಿದೆ. ಅದಕ್ಕಾಗಿ ಭಾರತಕ್ಕೆ ಅಧಿಕೃತ ಆಹ್ವಾನವನ್ನು ನೀಡಲಾಯಿತು; ಆದರೆ ಭಾರತದಿಂದಾಗಿ ಈ ಪ್ರಯತ್ನಗಳು ಯಶಸ್ವಿಯಾಗಲಿಲ್ಲ. ಈ ಪುಸ್ತಕದಲ್ಲಿ ಭಾರತವನ್ನು ‘ಅಹಂಕಾರಿ’ ಎಂದು ಹೇಳಿದೆ.

ಸಂಪಾದಕರ ನಿಲುವು

* ಪಾಕಿಸ್ತಾನದ ಜನರು ಹಿಂದೂವಿರೋಧಿ ಮತ್ತು ಭಾರತವಿರೋಧಿಗಳಾಗಲು ಇದೊಂದು ಕಾರಣವಿದೆ. ಪಾಕಿಸ್ತಾನದ ಜೊತೆ ಸ್ನೇಹ ಬೆಳೆಸಲು ಬಯಸುವ ಭಾರತದ ಪಾಕಿಸ್ತಾನಪ್ರಿಯರು ಈ ಬಗ್ಗೆ ಏನು ಹೇಳುತ್ತಾರೆ?