೩ ಹುಡುಗರು ಪೊಲೀಸರ ವಶಕ್ಕೆ !

ನವ ದೆಹಲಿ : ದೆಹಲಿಯ ಪಹಡಗಂಜ್ ಪ್ರದೇಶದಲ್ಲಿ ರಂಗಪಂಚಮಿಯಂದು ಜಪಾನಿನ ಹುಡುಗಿಗೆ ಬಣ್ಣ ಬಳಿದು ಕಿರುಕುಳ ನೀಡಿದ ಮೂವರು ಹುಡುಗರನ್ನು ಪೊಲೀಸರು ಬಂಧಿಸಿದ್ದಾರೆ. ಅವರಲ್ಲಿ ಒಬ್ಬ ಅಪ್ರಾಪ್ತನಾಗಿದ್ದಾನೆ. ಈ ಮೂವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ ಯುವತಿಯು ಭಾರತ ಬಿಟ್ಟು ಬಾಂಗ್ಲಾದೇಶಕ್ಕೆ ತೆರಳಿದ್ದಾಳೆ. ಈ ನಿಟ್ಟಿನಲ್ಲಿ, ಪೊಲೀಸರು ಹುಡುಗರನ್ನು ಗುರುತಿಸಲು ಜಪಾನ್ ರಾಯಭಾರಿ ಕಚೇರಿಗೆ ಹೇಳಿದ್ದರು; ಆದರೆ ಈ ಘಟನೆ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಈ ವೇಳೆ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಇವರು ದೆಹಲಿ ಪೊಲೀಸರಿಗೆ ಪತ್ರ ಬರೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ.
#Japanese woman harassed on #Holi has left #India, 3 held for molesting herhttps://t.co/efavpMChD0
— IndiaToday (@IndiaToday) March 11, 2023
ವರದಿಗಳ ಪ್ರಕಾರ, ಹುಡುಗಿಯು ಮೊದಲ ಬಾರಿಗೆ ಹೋಳಿಯಾಡಲು ಜಪಾನ್‌ನಿಂದ ಭಾರತಕ್ಕೆ ಬಂದಿದ್ದಳು ಮತ್ತು ಆಕೆಯೇ ಕಿರುಕುಳದ ಘಟನೆಯ ವೀಡಿಯೊವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಳು ಮತ್ತು ನಂತರ ಅದನ್ನು ಅಳಿಸಿದಳು; ಆದರೆ ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸಂಪಾದಕರ ನಿಲುವು* ಹಿಂದೂ ಹಬ್ಬದ ಹೆಸರಿನಲ್ಲಿ ಇಂತಹ ವಿಕೃತ ಕೃತ್ಯ ಎಸಗುವವರಿಗೆ ಕಠಿಣ ಶಿಕ್ಷೆಯಾಗಬೇಕು ! ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದ ‘ಹಬ್ಬ ಹರಿದಿನಗಳನ್ನು ಹೇಗೆ ಆಚರಿಸಬೇಕು’ ಎಂಬುದು ಗೊತ್ತಿಲ್ಲ ! |
ಸಹಾರನ್ಪುರ (ಉತ್ತರ ಪ್ರದೇಶ) ಇಲ್ಲಿನ ಶಿವಮಂದಿರದಲ್ಲಿ ಕಳ್ಳತನ ! – ೩ ಮುಸ್ಲಿಮರ ಬಂಧನ
ನಿಮ್ಮಿಂದಾಗಿ ದೇಶದ ಅಪಕೀರ್ತಿಯಾಯಿತು, ಕೋಟ್ಯಂತರ ರೂಪಾಯಿ ನಷ್ಟವಾಯಿತು !
ಕಾಕ್ರೋಚ್ ಜನತಾ ಪಕ್ಷ ವಿದೇಶಿ ಶಕ್ತಿಗಳ ಬೆಂಬಲವಿರುವ ವ್ಯವಸ್ಥೆ !
‘ಮೋದಿ ಸರಕಾರವು ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ‘ರಾಷ್ಟ್ರದ ಶತ್ರುಗಳು’ ಎಂದು ಪರಿಗಣಿಸುತ್ತದೆ!’(ಅಂತೆ)
ಕಾಕ್ರೋಚ್ ಜನತಾ ಪಕ್ಷದ ಹೋರಾಟ ಮುಕ್ತಾಯ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಕೊನೆಗೂ ರಾಜೀನಾಮೆ !