
ಭಾಗ್ಯನಗರ (ತೆಲಂಗಾಣಾ) – 3 ಬೀದಿನಾಯಿಗಳು 4 ವರ್ಷದ ಮಗುವಿನ ಮೇಲೆ ದಾಳಿ ಮಾಡಿದವು. ಮಗುವಿನ ಕಿರಿಚಾಟ ಕೇಳಿ ತಂದೆ ಓಡಿ ಬಂದು ನಾಯಿಗಳ ದಾಳಿಯಿಂದ ಮಗುವನ್ನು ರಕ್ಷಿಸಿದರು. ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಗುವನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರು; ಆದರೆ ಅಲ್ಲಿ ಮಗು ಮರಣ ಹೊಂದಿದೆಯೆಂದು ಹೇಳಿದರು. ಈ ಆಕ್ರಮಣದ ಸಿಸಿಟಿವಿ ಚಿತ್ರ ಎಲ್ಲೆಡೆ ಪ್ರಸಾರವಾಗುತ್ತಿದೆ. 3 ದಿನಗಳ ಹಿಂದೆ ಉತ್ತರಪ್ರದೇಶದ ಬಿಲಾಸಪುರ ಗ್ರಾಮದಲ್ಲಿಯೂ ಬೀದಿ ನಾಯಿಗಳು ಕಾನ್ಹಾ ಹೆಸರಿನ ಮಗುವಿನ ಮೇಲೆ ದಾಳಿ ನಡೆಸಿದ್ದವು. ಈ ದಾಳಿಯಲ್ಲಿ ಮಗು ಸಾವನ್ನಪ್ಪಿತ್ತು.
ಸಂಪಾದಕೀಯ ನಿಲುವುಬೀದಿ ನಾಯಿಗಳ ಸಮಸ್ಯೆ ಸಂಪೂರ್ಣ ದೇಶದ ನಾಗರಿಕರಿಗೆ ದೊಡ್ಡ ತಲೆನೋವಾಗಿದೆ. ಈ ಬಗ್ಗೆ ಕೇಂದ್ರ ಸರಕಾರವು ನಿರ್ದಿಷ್ಟ ಉಪಾಯ ಯೋಜನೆ ಮಾಡುವುದು ಆವಶ್ಯಕವಾಗಿದೆ ! |
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
‘ಜಗತ್ತಿನಾದ್ಯಂತ ತಂತ್ರಜ್ಞಾನ ಕ್ಷೇತ್ರವು ವೇಗವಾಗಿ ಮುನ್ನಡೆಯುತ್ತಿರುವಾಗ, ಸರಕಾರವು ‘ಐಐಟಿ’ (IIT) ಸಂಸ್ಥೆಗಳನ್ನು ಜ್ಯೋತಿಷ್ಯ, ಪುನರ್ಜನ್ಮ ಮುಂತಾದ ವಿಷಯಗಳ ಸಂಶೋಧನೆಯಲ್ಲಿ ತೊಡಗಿಸುತ್ತಿದೆ!’ (ಅಂತೆ)
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!