ರಾಜಸ್ಥಾನ ಪೊಲೀಸರ ಥಳಿತದಿಂದ ಆರೋಪಿಯ ಗರ್ಭಿಣಿ ಪತ್ನಿಯ ಗರ್ಭದಲ್ಲಿನ ಮಗುವಿನ ಸಾವು

ಇಬ್ಬರು ಮುಸಲ್ಮಾನರನ್ನು ಜೀವಂತ ಸುಟ್ಟಿರುವ ಪ್ರಕರಣ

ನೂಹ (ಹರಿಯಾಣಾ) – ಹರಿಯಾಣದ ಭಿವಾನಿಯಲ್ಲಿ ಇಬ್ಬರು ಮುಸಲ್ಮಾನ ಯುವಕರನ್ನು ಕಾರಿನಲ್ಲಿ ಜೀವಂತ ಸುಟ್ಟಿರುವ ಪ್ರಕರಣದಲ್ಲಿ ರಾಜಸ್ಥಾನ ಪೊಲೀಸರು ಆರೋಪಿ ಶ್ರೀಕಾಂತನ ಮನೆಗೆ ಹೋಗಿ ಅವನ ಗರ್ಭಿಣಿ ಪತ್ನಿಯನ್ನು ಅಮಾನುಷವಾಗಿ ಥಳಿಸಿದ್ದಾರೆ. ಇದರಿಂದ ಆಕೆಯ ಗರ್ಭದಲ್ಲಿದ್ದ ಮಗು ಸಾವನ್ನಪ್ಪಿದೆ ಎಂದು ಶ್ರೀಕಾಂತನ ತಾಯಿ ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೂ ರಾಜಸ್ಥಾನ ಪೊಲೀಸರು ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. ಶ್ರೀಕಾಂತನ ತಾಯಿಯ ಆರೋಪದಿಂದ ನೂಹ ಪೊಲೀಸರು ರಾಜಸ್ಥಾನ ಪೊಲೀಸರ ಮೇಲೆ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆಯೆಂದು ಪೊಲೀಸರಿಂದ ಹೇಳಲಾಗುತ್ತಿದೆ.

ಶ್ರೀಕಾಂತನ ತಾಯಿ ದುಲಾರಿಯವರು ನೀಡಿರುವ ದೂರಿನಲ್ಲಿ, ಫೆಬ್ರವರಿ 16 ರಂದು ಬೆಳಿಗ್ಗೆ 3 ಗಂಟೆಗೆ 30-40 ರಾಜಸ್ಥಾನ ಪೊಲೀಸರ ಮನೆಗೆ ಬಂದರು. ಕುಟುಂಬದವರನ್ನು ಬೆದರಿಸಿ ಬಲವಂತವಾಗಿ ಮನೆಯ ಬಾಗಿಲುಗಳನ್ನು ತೆರೆಯುವಂತೆ ಮಾಡಿದರು. ಒಳಗೆ ನುಗ್ಗುತ್ತಲೇ ಶ್ರೀಕಾಂತನ ಬಗ್ಗೆ ವಿಚಾರಣೆ ಮಾಡತೊಡಗಿದರು. ಶ್ರೀಕಾಂತ ಮನೆಯಲ್ಲಿ ಇಲ್ಲವೆಂದು ರಾಜಸ್ಥಾನ ಪೊಲೀಸರಿಗೆ ಹೇಳಿದಾಗ, ಪೊಲೀಸರು ಇದನ್ನು ಕೇಳಿ ಆಕ್ರೋಷಗೊಂಡರು. ಅವರು ಮನೆಯ ಸದಸ್ಯರನ್ನು ಅವಾಚ್ಯ ಪದಗಳಲ್ಲಿ ನಿಂದಿಸತೊಡಗಿದರು. ಕುಟುಂಬದ ಜನರು ಅವರನ್ನು ತಡೆಯಲು ಪ್ರಯತ್ನಿಸಿದಾಗ ಅವರು ಹಲ್ಲೆ ಮಾಡಿದರು. ಮನೆಯ ಜನರನ್ನು ಥಳಿಸಲು ವಿವಿಧ ಕೋಣೆಗಳಿಗೆ ನುಗ್ಗಿದರು. ಶ್ರೀಕಾಂತನ ಗರ್ಭಿಣಿ ಪತ್ನಿ ಕಮಲೇಶ ಒಂದು ಕೋಣೆಯಲ್ಲಿದ್ದಳು. ರಾಜಸ್ಥಾನ ಪೊಲೀಸರು ಕಮಲೇಶಳನ್ನು ಮಂಚದಿಂದ ಕೆಳಗೆ ದೂಡಿ ಥಳಿಸಿದರು. ಇದರಿಂದ ಗರ್ಭಿಣಿ ಕಮಲೇಶಳ ಹೊಟ್ಟೆ ನೋಯತೊಡಗಿತು. ಅವಳನ್ನು ತಕ್ಷಣವೇ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ ಅವರ ಆರೋಗ್ಯ ಕ್ಷೀಣಿಸಿತು. ಕಮಲೇಶ ಮತ್ತು ಗರ್ಭದಲ್ಲಿದ್ದ ಶಿಶುವಿಗೆ ಇರುವ ಅಪಾಯವನ್ನು ನೋಡಿ ವೈದ್ಯರು ಫೆಬ್ರವರಿ 18 ರಂದು ಬೆಳಿಗ್ಗೆ 8 ಗಂಟೆಗೆ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಶಸ್ತ್ರಚಿಕಿತ್ಸೆ ನಡೆಸಿದರು. ಇದರಲ್ಲಿ ಗರ್ಭದಲ್ಲಿದ ಶಿಶು ತೀರಿಕೊಂಡಿರುವುದು ತಿಳಿಯಿತು. ಇನ್ನೊಂದೆಡೆ ಶ್ರೀಕಾಂತ ಮನೆಯಲ್ಲಿ ಸಿಗದಿದ್ದಾಗ ರಾಜಸ್ಥಾನ ಪೊಲೀಸರು ಶ್ರೀಕಾಂತರ ವಿಷ್ಣು ಮತ್ತು ರಾಹುಲ ಈ ಇಬ್ಬರು ಸಹೋದರರನ್ನು ಬಲವಂತವಾಗಿ ತಮ್ಮೊಂದಿಗೆ ಕರೆದೊಯ್ದರು. ತದನಂತರ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಸಂಪಾದರಕ ನಿಲುವು

* ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಹಿಂದೂಗಳ ವಿರುದ್ಧ ಪೌರುಷ ತೋರಿಸಿ ಮುಸಲ್ಮಾನರ ಮತಗಳಿಸಲು ಪ್ರಯತ್ನಿಸುತ್ತಿದೆ ಎಂದು ಈ ಘಟನೆಯಿಂದ ಗಮನಕ್ಕೆ ಬರುತ್ತದೆ !

* ಈ ಘಟನೆಯ ವಿರುದ್ಧ ಈಗ ಮಾನವ ಹಕ್ಕುಗಳ ಆಯೋಗ, ಮಹಿಳಾ ಆಯೋಗ, ಪ್ರಗತಿ(ಅಧೋ)ಪರರು ಮುಂತಾದ ಸಂಘಟನೆಗಳು ಮತ್ತು ನಾಯಕರು ಬಾಯಿ ತೆರೆಯುವುದಿಲ್ಲ, ಎನ್ನುವುದನ್ನು ಗಮನಿಸಬೇಕು !