ನವ ದೆಹಲಿ – ಭಾರತವು ಹಿಂದೂ ರಾಷ್ಟ್ರ ಆಗಿತ್ತು, ಆಗಿದೆ ಮತ್ತು ಮುಂದೆಯೂ ಇರಲಿದೆ. ಮುಂದೊಂದು ದಿನ ‘ಅಖಂಡ ಭಾರತ’ ರಚನೆಯಾಗಲಿದೆ ಮತ್ತು ಪಾಕಿಸ್ತಾನವು ಭಾರತದಲ್ಲಿ ವಿಲೀನವಾಗುವುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ಪ್ರಖರ ಹಿಂದುತ್ವನಿಷ್ಠ ಯೋಗಿ ಆದಿತ್ಯನಾಥ ಇವರು ಹಿಂದಿ ವಾರ್ತಾ ವಾಹಿನಿಯಾದ ‘ಎಬಿಪಿ ನ್ಯೂಸ್’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು. ಕೆಲವು ದಿನಗಳ ಹಿಂದೆ ಜಮಿಯತ್ ಉಲೇಮಾ-ಎ-ಹಿಂದ್ ನಾಯಕ ಮೌಲಾನಾ (ಇಸ್ಲಾಂನ ವಿದ್ವಾಂಸ) ಅರ್ಷದ್ ಮದನಿ ಅವರು ‘ಓಂ’ ಮತ್ತು ‘ಅಲ್ಲಾ’ ಒಂದೇ ಎಂದು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಯೋಗಿ ಆದಿತ್ಯನಾಥ ಅವರು, ಅವರ ಹೇಳಿಕೆಯನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಆದಿತ್ಯನಾಥ ಅವರು ಬಾವಿಯಲ್ಲಿರುವ ಕಪ್ಪೆಯ ಕಥೆಯನ್ನು ಹೇಳುತ್ತಾ, ಯಾರ (ಮುಸ್ಲಿಂ) ಇತಿಹಾಸವು ಬೆರಳೆಣಿಕೆಯಷ್ಟು ಇದೆ, ಅವರು ಪ್ರಾಚೀನ ಮತ್ತು ಪೌರಾಣಿಕ ಅಂಶಗಳ ಬಗ್ಗೆ ಮಾತನಾಡುವುದೆಂದರೆ ಸೂರ್ಯನಿಗೆ ದೀಪ ತೋರಿಸಿದಂತೆ ಎಂದು ಹೇಳಿದರು.
भारत हिंदू राष्ट्र है, क्योंकि भारत का हर नागरिक हिंदू है।
भारत हिंदू राष्ट्र था, है और आगे भी रहेगा… pic.twitter.com/e8k6ieW7YJ
— Yogi Adityanath (@myogiadityanath) February 15, 2023
* ಯೋಗಿ ಆದಿತ್ಯನಾಥ್ ಅವರು ಮಾತನ್ನು ಮುಂದುವರೆಸುತ್ತಾ,
1. ಪಾಕಿಸ್ತಾನವು ಎಷ್ಟು ಬೇಗ ಭಾರತದೊಂದಿಗೆ ವಿಲೀನವಾಗುವುದೋ ಅಷ್ಟು ಬೇಗ ಅಲ್ಲಿಯ ಜನರಿಗೆ ಒಳ್ಳೆಯದಾಗಲಿದೆ.
2. ಹಿಂದೂ ಪದವನ್ನು ಒಂದು ಪಂಥ ಅಥವಾ ಧರ್ಮ ಮತ್ತು ಪಂಗಡದಲ್ಲಿ ಬಂಧಿಸುವುದು ಸರಿಯಲ್ಲ. ಇದು ಸಾಂಸ್ಕೃತಿಕ ಪದವಾಗಿದ್ದು ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಹಿಂದೂ ಆಗಿದ್ದಾನೆ.
3. ಹಜ್‌ಗಾಗಿ ಸೌದಿ ಅರೇಬಿಯಾಗೆ ಹೋಗುವ ಭಾರತೀಯ ಮುಸ್ಲಿಮರನ್ನು ‘ಹಿಂದೂ’ ಎಂದೇ ಕರೆಯಲಾಗುತ್ತದೆ. ಈ ದೃಷ್ಟಿಕೋನದಿಂದ ನೋಡಿದರೆ, ಭಾರತವು ಹಿಂದೂ ರಾಷ್ಟ್ರವಾಗಿದ್ದೂ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಹಿಂದೂ ಆಗಿದ್ದಾನೆ. ಹಿಮಾಲಯದಿಂದ ಸಮುದ್ರದವರೆಗೆ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯು ಹಿಂದೂವೇ ಆಗಿದ್ದಾನೆ.
4. ಯೋಗಿ ಅರವಿಂದ ಇವರು, ಆಧ್ಯಾತ್ಮಿಕ ಜಗತ್ತಿನಲ್ಲಿ ಪಾಕಿಸ್ತಾನ ಎಂಬುದು ವಾಸ್ತವದಲ್ಲಿ ಇಲ್ಲ. ಯಾವುದರ ವಾಸ್ತವಿಕತೆ ಇಲ್ಲ, ಆ ರಾಷ್ಟ್ರವು ಎಷ್ಟು ದಿನ ಉಳಿಯಬಹುದು, ಅದನ್ನು ಅದರ ಹಣೆಬರಹ ಎಂದು ಕರೆಯಬೇಕು. ಪಾಕಿಸ್ತಾನ ಇರುವವರೆಗೂ ಭೂಮಿಗೆ ಭಾರವಾಗಿರಲಿದೆ ಎಂದು ಸ್ಪಷ್ಟವಾಗಿ ಹೇಳಿದ್ದರು. ಅದು ಎಷ್ಟು ಬೇಗ ಭಾರತದೊಂದಿಗೆ ವಿಲೀನಗೊಳ್ಳುವುದೋ ಅಷ್ಟು ಬೇಗ ಅದರ ಹಿತಾಸಕ್ತಿಗಳನ್ನು ಪೂರೈಸಲಾಗುತ್ತದೆ.
5. ಯೋಗಿ ಆದಿತ್ಯನಾಥ್ ಇವರು ಕಳೆದ ತಿಂಗಳು ರಾಜಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸನಾತನ ಧರ್ಮವು ಭಾರತದ ರಾಷ್ಟ್ರೀಯ ಧರ್ಮ ಎಂದು ಹೇಳಿದ್ದರು.