ಪಿ.ಎಫ್.ಐ. ನ ಕಾರ್ಯಕರ್ತರ ಮೇಲೆ ಆರೋಪ ಪತ್ರ ದಾಖಲು

ಕರ್ನಾಟಕದಲ್ಲಿನ ಭಾಜಪದ ಯುವ ಮೋರ್ಚಾದ ನಾಯಕ ಪ್ರವೀಣ್ ನೆಟ್ಟಾರು ಇವರ ಹತ್ಯೆಯ ಪ್ರಕರಣ

ಬೆಂಗಳೂರು – ಭಾಜಪ ಯುವ ಮೋರ್ಚಾದ ನಾಯಕ ಪ್ರವೀಣ ನೆಟ್ಟಾರು ಇವರನ್ನು ಜುಲೈ ೨೬, ೨೦೨೨ ರಂದು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ೨೦ ಕಾರ್ಯಕರ್ತರ ವಿರುದ್ಧ ಆರೋಪ ಪತ್ರ ದಾಖಲಿಸಿತ್ತು. ಈ ೨೦ ರಲ್ಲಿ ೬ ಜನರು ತಲೆ ಮರೆಸಿಕೊಂಡಿದ್ದಾರೆ. ಅವರ ಮಾಹಿತಿ ನೀಡುವವರಿಗೆ ಬಹುಮಾನ ಕೂಡ ಘೋಷಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಬೆಳ್ಳಾರೆ ಪ್ರದೇಶದಲ್ಲಿ ಪ್ರವೀಣ ಅವರ ಪೋಲ್ಟ್ರಿ ಅಂಗಡಿ ಇತ್ತು. ಜುಲೈ ೨೬, ೨೦೨೨ ರಂದು ರಾತ್ರಿ ಪ್ರವೀಣ್ ಇವರು ಅಂಗಡಿ ಮುಚ್ಚಿ ಮನೆಗೆ ಹಿಂತಿರುಗಿ ಹೋಗುವಾಗ ಬೈಕ್ ನಿಂದ ಬಂದ ಕೆಲವು ದುಶ್ಕರ್ಮಿಗಳು ಪ್ರವೀಣರನ್ನು ಅಡ್ಡಗಟ್ಟಿ ಕೊಡಲಿಯಿಂದ ಅವರ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದರು.

ಆರೋಪ ಪತ್ರದಲ್ಲಿ, ಸಮಾಜದಲ್ಲಿ ಭಯ, ಜಾತಿ ದ್ವೇಷ, ಶಾಂತಿ ಕದಡುವುದು ಮತ್ತು ೨೦೪೭ ವರೆಗೆ ಭಾರತದಲ್ಲಿ ಇಸ್ಲಾಮಿ ಆಡಳಿತ ಸ್ಥಾಪಿಸುವುದು, ಇದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಂಚಾಗಿದೆ. ಈ ಉದ್ದೇಶ ಸಾಧ್ಯಗೊಳಿಸಲು ಗುಪ್ತ ದಳದ ಸ್ಥಾಪನೆ ಮಾಡಿದೆ. ಅವರಿಗೆ ‘ಸರ್ವಿಸ್ ಟೀಮ್’ ಅಥವಾ ‘ಕಿಲರ್ ಸ್ಕ್ವಾಡ್’ ಎಂದು ಹೆಸರು ನೀಡಲಾಗಿದೆ. ಈ ಸದಸ್ಯರಿಗೆ ವಿಶಿಷ್ಟ ಸಮುದಾಯದ ಜೊತೆ ಸಂಬಂಧಿತ ವ್ಯಕ್ತಿಗಳು ಮತ್ತು ನಾಯಕರ ಗುರುತಿಗಾಗಿ ಮತ್ತು ಅವರ ಮೇಲೆ ನಿಗಾ ವಹಿಸಲು ಶಸ್ತ್ರಾಸ್ತ್ರಗಳು ಮತ್ತು ಗಮನ ಇರಿಸುವ ತಂತ್ರದ ಪ್ರಶಿಕ್ಷಣ ನೀಡಲಾಗಿತ್ತು. ಸಂಘಟನೆಯ ಸಭೆಯಲ್ಲಿ ಜಿಲ್ಲಾ ಸೇವಾ ಸಂಘದ ಪ್ರಮುಖ ಮುಸ್ತಫಾ ಪಾಚರ್ ಇವನಿಗೆ ವಿಶಿಷ್ಟ ಸಮಾಜದಲ್ಲಿನ ಪ್ರಮುಖ ವ್ಯಕ್ತಿಯ ಪರಿಚಯ ಮಾಡಿಸಿ ಅವರ ಮೇಲೆ ಗಮನ ಇರಿಸುವ ಆದೇಶ ನೀಡತ್ತು. ಅದರ ಪ್ರಕಾರ ೪ ಜನರ ಗುರುತು ದೃಢಪಡಿಸಲಾಗಿತ್ತು. ಅವರಲ್ಲಿ ಪ್ರವೀಣ ನೆತ್ತಾರು ಕೂಡ ಒಬ್ಬರಿದ್ದರು.