ಕೇಂದ್ರ ಸರಕಾರದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿಪಾದನೆ !
ನವದೆಹಲಿ – ಹಿಂದೂಗಳಿಗೆ ಅಲ್ಪಸಂಖ್ಯಾತರ ಸ್ಥಾನ ನೀಡುವ ಸಂದರ್ಭದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಇವುಗಳಲ್ಲಿ ಒಮ್ಮತ ಇಲ್ಲ, ಎಂದು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಮಾಹಿತಿ ನೀಡಿದೆ. ರಾಜ್ಯದಲ್ಲಿನ ಜನಸಂಖ್ಯೆಯ ಆಧಾರದಲ್ಲಿ ಅಲ್ಲಿಯ ಹಿಂದೂಗಳಿಗೆ ಅಲ್ಪಸಂಖ್ಯಾತರ ಸ್ಥಾನ ನೀಡುವುದರ ಬಗ್ಗೆ ಕೇಂದ್ರ ಸರಕಾರದಿಂದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಿಂದ ಮಾಹಿತಿ ಕೇಳಲಾಗಿತ್ತು. ಅದರ ಪ್ರಕಾರ ೨೮ ರಾಜ್ಯಗಳ ಪೈಕಿ ೨೪ ರಾಜ್ಯಗಳು ಮತ್ತು ೮ ರಲ್ಲಿ ೬ ಕೇಂದ್ರಾಡಳಿತ ಪ್ರದೇಶದಿಂದ ಮಾಹಿತಿ ಪ್ರಾಪ್ತವಾದ ನಂತರ ಕೇಂದ್ರ ಸರಕಾರದಿಂದ ಮೇಲಿನ ಮಾಹಿತಿ ಸರ್ವೋಚ್ಚ ನ್ಯಾಯಾಲಯಕ್ಕೆ ನೀಡಿತು. ಭಾಜಪದ ನಾಯಕ ಮತ್ತು ನ್ಯಾಯವಾದಿ ಶ್ರೀ. ಅಶ್ವಿನಿ ಉಪಾಧ್ಯಾಯ ಇವರು ಇದಕ್ಕೆ ಸಂಬಂಧಿತ ಒಂದು ಅರ್ಜಿ ದಾಖಲಿಸಿದ್ದರು.
केंद्र सरकार ने राज्य स्तर पर हिंदुओं को अल्पसंख्यक का दर्जा देने के मुद्दे पर सभी राज्य सरकारों के साथ-साथ केंद्र शासित प्रदेशों और अन्य हितधारकों के साथ परामर्श बैठकें की है-#CentralGovernment #India https://t.co/qsIRaWRVOv
— ABP News (@ABPNews) January 13, 2023
ಕೇಂದ್ರ ಸರಕಾರವು ನ್ಯಾಯಾಲಯಕ್ಕೆ, ಸಿಕ್ಕಿರುವ ಮಾಹಿತಿಗಳಲ್ಲಿ ಅನೇಕ ರಾಜ್ಯಗಳು `ಅಲ್ಪಸಂಖ್ಯಾತರ ಸ್ಥಾನ ಯಾರಿಗೆ ನೀಡಬೇಕು ?’, ಇದರ ಅಧಿಕಾರ ಯಾರ ಬಳಿ ಇರಬೇಕು ಇದರ ಬಗ್ಗೆ ಹೇಳಿದೆ. ಉತ್ತರಾಖಂಡ ರಾಜ್ಯವು, `ರಾಜ್ಯದಲ್ಲಿ ಜನಸಂಖ್ಯೆಯ ಆಧಾರದಲ್ಲಿ ಧಾರ್ಮಿಕ ಅಲ್ಪಸಂಖ್ಯಾತ ಎಂದು ಘೋಷಿಸಬೇಕು.’ ಎಂದು ಹೇಳಿದೆ. ಉತ್ತರ ಪ್ರದೇಶ ಸರಕಾರವು, `ಈ ಸಂದರ್ಭದಲ್ಲಿ ಕೇಂದ್ರ ಸರಕಾರ ಯಾವ ನಿರ್ಣಯ ತೆಗೆದುಕೊಳ್ಳುವುದೋ ಅದು ನಮಗೆ ಒಪ್ಪಿಗೆ ಇದೆ.’ ಎಂದು ಹೇಳಿದೆ. ಬಂಗಾಲ ಸರಕಾರವು, `ಯಾವುದೇ ಧರ್ಮಕ್ಕೆ ಅಲ್ಪಸಂಖ್ಯಾತರ ಸ್ಥಾನ ನೀಡುವ ಅಧಿಕಾರ ರಾಜ್ಯದ ಬಳಿ ಇರಬೇಕು’ ಎಂದು ಹೇಳಿದೆ.
ದೆಹಲಿ ಸರಕಾರವು, `ಹಿಂದೂ ಧರ್ಮದವರಿಗೆ ದೆಹಲಿಯಲ್ಲಿ ಅಲ್ಪಸಂಖ್ಯಾತರ ಸ್ಥಾನ ನೀಡಲಾಗಿಲ್ಲ; ಆದರೆ ಜಮ್ಮು-ಕಾಶ್ಮೀರ್, ಲಡಾಖ ಅಂತಹ ರಾಜ್ಯಗಳಿಂದ ದೆಹಲಿಗೆ ನಿರಾಶ್ರಿತರಾಗಿ ಬಂದಿರುವ ಹಿಂದೂಗಳು ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಕೇಂದ್ರಾಡಳಿತ `ಪ್ರವಾಸಿ ಅಲ್ಪಸಂಖ್ಯಾತ’ ಸ್ಥಾನ ನೀಡಬಹುದೆಂದು’ ಎಂದು ಹೇಳಿದೆ.
ಅರುಣಾಚಲ ಪ್ರದೇಶ, ಜಾರ್ಖಂಡ್, ರಾಜಸ್ಥಾನ ಮತ್ತು ತೆಲಂಗಾಣ ಈ ರಾಜ್ಯಗಳು ಹಾಗೂ ಜಮ್ಮು-ಕಾಶ್ಮೀರ ಮತ್ತು ಲಕ್ಷದ್ವೀಪ ಈ ಕೇಂದ್ರಾಡಳಿತ ಪ್ರದೇಶಗಳಿಂದ ಅಭಿಪ್ರಾಯ ಬರುವುದು ಬಾಕಿ ಇದೆ ಎಂದು ಹೇಳಿದೆ.