`ದ್ವೇಷದ ಭೂಮಿಯ ಮೇಲೆ ರಾಂಮಂದಿರ ನಿರ್ಮಾಣ ಮಾಡಲಾಗುತ್ತಿದೆ !’ (ಅಂತೆ)

ರಾಷ್ಟ್ರೀಯ ಜನತಾ ದಳದ ಬಿಹಾರ ಪ್ರದೇಶಾಧ್ಯಕ್ಷ ಜಗದಾನಂದ ಸಿಂಹ ಇವರ ದ್ವೇಷಪೂರಿತ ಹೇಳಿಕೆ !

ಪಾಟಲಿಪುತ್ರ (ಬಿಹಾರ) – ಭಾರತದ ಭೂಮಿ ರಾಮಮಯ ಮತ್ತು ಕೃಷ್ಣಮಯ ಎಂದು ತಿಳಿಯಲಾಗುತ್ತಿತ್ತು. ಈಗ ಇದೆಲ್ಲವೂ ನಷ್ಟವಾಗಿದೆ. ಈಗ ರಾಮ ರಾಮಾಯಣದಿಂದ ಓಡಿ ಹೋಗಬಹುದು. ಕಣಕಣದಿಂದ ಹೊರಟು ಹೋಗಬಹುದು. ರಾಮ ಈಗ ಭಾರತದಲ್ಲಿ ಉಳಿಯಲಾರನು. ಈಗ ಕೇವಲ ಒಂದು ಮಂದಿರದಲ್ಲಿ ರಾಮ ಉಳಿಯುತ್ತಾನೆ. ದ್ವೇಷದ ಭೂಮಿಯ ಮೇಲೆ ರಾಮಮಂದಿರದ ನಿರ್ಮಾಣವಾಗುತ್ತಿದೆ. ರಾಮ ಅದೇ ಒಂದು ಮಂದಿರದಲ್ಲಿ ಕುಳಿತುಕೊಳ್ಳಬಹುದು. ರಾಮ ಜನರ ಹೃದಯದಲ್ಲಿ ಅಲ್ಲ ಬದಲಾಗಿ ಕಲ್ಲಿನಲ್ಲಿ ಉಳಿದಿದ್ದಾನೆ. ಸಂಘದವರು ಇದನ್ನೇ ಮಾಡುತ್ತಿದ್ದಾರೆ. ನಾವು `ರಾಮವಾಲೆ ‘ಆಗಿದ್ದೇವೆ, `ಜಯ ಶ್ರೀರಾಮವಾಲೆ’ ಅಲ್ಲ, ಸಂಘದವರ ರಾಮನು ಎಲ್ಲಿ ಬೇಕಾದಲ್ಲಿ ಕುಳಿತುಕೊಳ್ಳುವನು ಎಂದು ರಾಷ್ಟ್ರೀಯ ಜನತಾ ದಳದ ಪ್ರದೇಶಾಧ್ಯಕ್ಷ ಜಗದಾನಂದ ಸಿಂಹ ಇವರು ಟೀಕಿಸಿದ್ದಾರೆ. ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮಮಂದಿರದ ಕಟ್ಟಡ ನಿರ್ಮಾಣದ ಹಿನ್ನೆಲೆಯಲ್ಲಿ ಅವರು ಮಾತನಾಡುತ್ತಿದ್ದರು.

ಜಗದಾನಂದ ಸಿಂಹ ಇವರು ಮಾತನ್ನು ಮುಂದುವರಿಸುತ್ತಾ, ಅಹಂಕಾರ ಪಡುವವರು ರಾಮನನ್ನು ಬಂಧನದಲ್ಲಿಡಬಹುದು; ಆದರೆ ರಾಮನ ವಾಸ ಶಬರಿಯ ಗುಡಿಸಿನಲ್ಲಿದೆ. ಭಾರತೀಯರು ಯುಗಾನುಯುಗಗಳಿಂದ ರಾಮಾಯಣವನ್ನು ಪಠಿಸುತ್ತಾ ಬಂದಿದ್ದಾರೆ. ಬೆಳಿಗ್ಗೆ-ಸಾಯಂಕಾಲ ರಾಮನಾಮ ಜಪಿಸುತ್ತಿದ್ದಾರೆ; ಕಾರಣ ಅದರಲ್ಲಿ ಜನರಿಗೆ ರಾಮ ಸಿಗುತ್ತಾನೆ. ಜನರ ಹೃದಯದಲ್ಲಿರುವ ರಾಮನನ್ನು ಸೆಳೆದುಕೊಂಡು ಅದನ್ನು ವಿಶಾಲವಾದ ಕಲ್ಲಿನ ಕಟ್ಟಡದಲ್ಲಿ ಬಂಧಿಸಿಡಲು ಸಾಧ್ಯವಿಲ್ಲ ಎಂಬುದು ಸಂಘಕ್ಕೆ ಇದು ತಿಳಿದಿಲ್ಲ ಎಂದು ಹೇಳಿದರು.

* ಜಗದಾನಂದ ಸಿಂಹ ಇವರು ಎಂದಾದರೂ ಶ್ರೀ ರಾಮಜನ್ಮಭೂಮಿಯ ಮೇಲೆ ಧಾರ್ಮಿಕ ದ್ವೇಷದಿಂದ ಶ್ರೀರಾಮಮಂದಿರವನ್ನು ಕೆಡವಿ ಅಲ್ಲಿ ಬಾಬ್ರಿ ಮಶೀದಿ ಕಟ್ಟಲಾಗಿದೆ, ಈ ಬಗ್ಗೆ ಬಾಯಿ ಬಿಚ್ಚಿದ್ದಾರೆಯೇ ? ಈ ಬಾಬ್ರಿಯನ್ನು ಬೆಂಬಲಿಸುವ ಮತಾಂಧರು ಈ ದೇಶದಲ್ಲಿ ಇಂದಿಗೂ ಇರುವಾಗ ಅವರ ವಿಷಯದಲ್ಲಿ ಎಂದಾದರೂ ಬಾಯಿ ಬಿಟ್ಟಿದ್ದಾರೆಯೇ ? – ಸಂಪಾದಕರು 

* `ಹಿಂದೂ ಸಹಿಷ್ಣು ಇರುವುದರಿಂದ ಅವರಿಗೆ ಏನೇ ಹೇಳಿದರೂ, ಅವರು ನಮಗೆ ಏನೂ ಕೆಡಕು ಮಾಡಲಾರರು’, ಇದೇ ಮಾನಸಿಕತೆಯನ್ನು ಹಿಂದೂ ದ್ವೇಷಿ ಮತ್ತು ಹಿಂದೂ ದ್ರೋಹಿಗಳು ಇಟ್ಟುಕೊಂಡಿದ್ದರಿಂದ ಇಂತಹ ಹೇಳಿಕೆಯನ್ನು ನೀಡುತ್ತಾರೆ. ಹಿಂದೂಗಳು ಈಗ ಇಂತಹವರಿಗೆ ನ್ಯಾಯೋಚಿತ ಮಾರ್ಗದಿಂದ ಪಾಠ ಕಲಿಸುವುದು ಆವಶ್ಯಕವಿದೆ !- ಸಂಪಾದಕರು