ಭಾರತ ಸರಕಾರದಿಂದ ಕಾಶ್ಮೀರದ ಎಜಾಜ್ ಅಹಮದ್ ಅಹಂಗಾರ್‌ನನ್ನು ಭಯೋತ್ಪಾದಕನೆಂದು ಘೊಷಣೆ !

ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ ಅನ್ನು ಪುನರಾರಂಬಿಸಿದ ಎಜಾಜ್ !

ನವ ದೆಹಲಿ – ಕೇಂದ್ರ ಗೃಹ ಸಚಿವಾಲಯವು ಕಾಶ್ಮೀರದ ಎಜಾಜ್ ಅಹಮದ್ ಅಹಂಗರ್ ಅಲಿಯಾಸ್ ಅಬು ಉಸ್ಮಾನ್ ಅಲ್-ಕಾಶ್ಮೀರಿ ಈತನನ್ನು ಭಯೋತ್ಪಾದಕ ಎಂದು ಘೋಷಿಸಿದೆ. ಕಾಶ್ಮೀರಿಯು ಅಲ್ ಕಾಯ್ದಾದೊಂದಿಗೆ ಸಂಪರ್ಕ ಹೊಂದಿದ್ದಾನೆ. ಆತ ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ ಅನ್ನು ಪುನಃ ಚಾಲನೆ ನೀಡಲು ಪ್ರಯತ್ನಿಸುತ್ತಿದ್ದಾನೆ. ಆತ ಸಧ್ಯ ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿದ್ದು ’ಇಸ್ಲಾಮಿಕ್ ಸ್ಟೇಟ್ ಜಮ್ಮು-ಕಶ್ಮೀರ’ಕ್ಕಾಗಿ ಭಯೋತ್ಪಾದಕರನ್ನು ನೇಮಿಸಿಕೊಳ್ಳುತ್ತಿದ್ದಾನೆ. ಆತ ಕಳೆದ ಎರಡು ದಶಕಗಳಿಂದ ತಲೆಮರೆಸಿಕೊಂಡಿದ್ದಾನೆ. ಆತ ಅನೇಕ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದಾನೆ.