ಝಾರಖಂಡ ಸರಕಾರದ ವಿರುದ್ಧ ಆಮರಣ ಉಪವಾಸ ಮಾಡುತ್ತಿದ್ದ ಜೈನ ಸಾಧುವಿನ ದೇಹತ್ಯಾದ !

ಝಾರಖಂಡದಲ್ಲಿರುವ ಜೈನ ತೀರ್ಥಕ್ಷೇತ್ರವಾದ ಸಮ್ಮೇದ ಶಿಖರವನ್ನು ಪ್ರವಾಸಿತಾಣವನ್ನಾಗಿ ಮಾಡಿದ ಪ್ರಕರಣ !

ಮುನಿ ಸುಗ್ಯಸಾಗರ ಮಹಾರಾಜ

ರಾಂಚಿ – ಝಾರಖಂಡದಲ್ಲಿನ ಜೈನ ತೀರ್ಥಕ್ಷೇತ್ರವಾದ ಸಮ್ಮೇದ ಶಿಖರವನ್ನು ಉಳಿಸಲು ಆಮರಣ ಉಪವಾಸಕ್ಕೆ ಕುಳಿತ ಮುನಿ ಸುಗ್ಯಸಾಗರ ಮಹಾರಾಜರು ಪ್ರಾಣತ್ಯಾಗ ಮಾಡಿದರು. ಅವರು ಜೈನ ತೀರ್ಥಕ್ಷೇತ್ರವಾದ ಸಮ್ಮೇದ ಶಿಖರವನ್ನು ಪ್ರವಾಸಿತಾಣವಾಗಿಸುವ ನಿರ್ಣಯದ ವಿರುದ್ಧ ಡಿಸೆಂಬರ್‌ ೨೫, ೨೦೨೨ ರಿಂದ ಜಯಪುರದ ಸಾಂಗಾನೇರಿನ ಜೈನ ಸಮಾಜದ ಮಂದಿರದಲ್ಲಿ ಆಮರಣ ಉಪವಾಸ ಮಾಡುತ್ತಿದ್ದರು. ಹತ್ತನೇ ದಿನ ಅಂದರೆ ಜನವರಿ ೩, ೨೦೨೨ರಂದು ಅವರು ಪ್ರಾಣ ಬಿಟ್ಟರು.

ಝಾರಖಂಡದಲ್ಲಿನ ಗಿರಿಡಿಹ ಜಿಲ್ಲೆಯಲ್ಲಿನ ಪಾರಸನಾಥ ದಿಬ್ಬದ ಮೇಲಿರುವ ಸಮ್ಮೇದ ಶಿಖರವನ್ನು ಪ್ರವಾಸಿತಾಣವಾಗಿಸಿರುವುದನ್ನು ವಿರೋಧಿಸಿ ದೇಶದಾದ್ಯಂತ ಆಂದೋಲನಗಳು ನಡೆಯುತ್ತಿವೆ. ಪಾರಸನಾಥ ದಿಬ್ಬವು ಸಮ್ಮೇದ ಶಿಖರವೆಂದು ಪ್ರಸಿದ್ಧವಾಗಿದೆ. ಜಗತ್ತಿನಾದ್ಯಂತ ಇರುವ ಜನರಿಗಾಗಿ ಇದು ಅತ್ಯಂತ ಶ್ರೇಷ್ಠ ತೀರ್ಥಕ್ಷೇತ್ರವಾಗಿದೆ.

ಸಂಪಾದಕೀಯ ನಿಲುವು

  • ಇದರಿಂದ ಝಾರಖಂಡ ಮುಕ್ತಿ ಮೋರ್ಚಾ ಸರಕಾರದ ಜನತಾದ್ರೋಹಿ ಮತ್ತು ಸಂವೇದನಾಹೀನ ವೃತ್ತಿಯು ಕಂಡುಬರುತ್ತದೆ.
  • ಆಮರಣ ಉಪವಾಸ ಮಾಡುವ ಸಾಧುವಿನ ಪ್ರಾಣ ಹೋಗುವಂತೆ ಮಾಡಿದವರ ಮೇಲೆ ಹತ್ಯೆ ಅಪರಾಧವನ್ನು ದಾಖಲಿಸಬೇಕು !