೪೨ ದಿನಗಳಿಂದ ನಾಪತ್ತೆಯಾಗಿದ್ದ ೨೧ ಮಕ್ಕಳನ್ನು ಪತ್ತೆ ಹಚ್ಚಿದ ಮಹಿಳಾ ಪೊಲೀಸ್ ಅಧಿಕಾರಿಯ ಎಲ್ಲಡೆಯಿಂದ ಶ್ಲಾಘನೆ !

ಪೊಲೀಸ್ ಅಧಿಕಾರಿ ಸೀಮಾ ಢಾಕಾ

ನವ ದೆಹಲಿ – ಮೆಟ್ರೋ ಪೊಲೀಸ್ ಠಾಣೆಯಲ್ಲಿ ಕಾರ್ಯನಿರತವಾಗಿರುವ ಪೊಲೀಸ್ ಅಧಿಕಾರಿ ಸೀಮಾ ಢಾಕಾ ಇವರು ೪೨ ದಿನಗಳಲ್ಲಿ ನಾಪತ್ತೆಯಾಗಿದ್ದ ೨೧ ಮಕ್ಕಳನ್ನು ಪತ್ತೆ ಮಾಡಿದ್ದರಿಂದ ಎಲ್ಲಾಕಡೆಯಿಂದ ಶ್ಲಾಘನೆಯಾಗುತ್ತಿದೆ. ಈ ಹಿಂದೆ ಕೂಡ ದೆಹಲಿಯ ಸಮಯಪುರ ಬದಲಿ ಪೋಲಿಸ್ ಠಾಣೆಯಲ್ಲಿ ಮುಖ್ಯ ಪೇದೆ ಎಂದು ಕಾರ್ಯನಿರತವಾಗಿರುವಾಗ ಅವರು ಎರಡುವರೆ ತಿಂಗಳಲ್ಲಿ ೭೬ ನಾಪತ್ತೆಯಾದ ಹುಡುಗರನ್ನು ಪತ್ತೆ ಮಾಡಿದ್ದರು. ಆದ್ದರಿಂದ ಅವರಿಗೆ ಸಹಾಯಕ ಉಪನಿರೀಕ್ಷಕ ಸ್ಥಾನಕ್ಕೆ ಬಢತಿ ನೀಡಲಾಗಿತ್ತು. ಸೀಮಾ ಢಾಕಾ ಇವರು ಮಾಡಿರುವ ಕಾರ್ಯದಿಂದ ಎಲ್ಲಾ ಕಡೆಯಿಂದ ಶ್ಲಾಘನೆಯಾಗುತ್ತಿದೆ. ಅವರು ಮಕ್ಕಳನ್ನು ಹುಡುಕುವುದಕ್ಕಾಗಿ ದೇವಸ್ಥಾನಗಳು, ಮಸೀದಿಗಳು, ಬಸ್ಸು ನಿಲ್ದಾಣಗಳು, ರೈಲು ನಿಲ್ದಾಣಗಳು, ಈ ಸ್ಥಳಗಳಲ್ಲಿ ಹುಡುಕಿರುವ ಮಾಹಿತಿ ನೀಡಿದರು. ಢಾಕಾ ಇವರು ೨೦೦೬ ರಲ್ಲಿ ದೆಹಲಿ ಪೋಲಿಸದಳದಲ್ಲಿ ಕಾರ್ಯನಿರತವಾಗಿದ್ದರು. ೨೦೧೪ ರಲ್ಲಿ ಅವರಿಗೆ ಮುಖ್ಯ ಪೊಲೀಸ್ ಪೇದೆ ಎಂದು ಬಢತಿ ನೀಡಲಾಗಿತ್ತು.