ಶಬರಿಮಲೈ. ದೇವಸ್ಥಾನದಲ್ಲಿ ಸುರಸಮ್ಹಾರಾ ಉತ್ಸವಕ್ಕಾಗಿ ಬರುವ ಭಕ್ತರ ಸುರಕ್ಷೆ ನಿಶ್ಚಿತಗೊಳಿಸುವಂತೆ ಮದ್ರಾಸ್ ಉಚ್ಚ ನ್ಯಾಯಾಲಯ ಆದೇಶ !

ಚೆನ್ನೈ (ತಮಿಳುನಾಡು) – ಮದ್ರಾಸ್ ಉಚ್ಚ ನ್ಯಾಯಾಲಯವು ಶಬರಿಮಲೈ ದೇವಸ್ಥಾನದಲ್ಲಿ ಸುರ ಸಮ್ಹಾರ ಉತ್ಸವದ ಪ್ರಯುಕ್ತ ದೇವಸ್ಥಾನದ ಗೌರವ ಮತ್ತು ಪಾವಿತ್ರö್ಯವನ್ನು ಕಾಯಂ ಇರಿಸುವುದರ ಜೊತೆಗೆ ಭಕ್ತರ ಸುರಕ್ಷೆ ನಿಶ್ಚಿತಗೊಳಿಸುವ ಆದೇಶವನ್ನು ದೇವಸ್ಥಾನ ವ್ಯವಸ್ಥಾಪಕರಿಗೆ ನೀಡಿದೆ.

ಈ ಉತ್ಸವವನ್ನು ೬ ದಿನ ಆಚರಿಸಲಾಗುತ್ತದೆ ಮತ್ತು ಇದಕ್ಕಾಗಿ ದೇಶಾದ್ಯಂತದಿAದ ಲಕ್ಷಾಂತರ ಭಕ್ತರು ಬರುತ್ತಾರೆ. ಭಗವಂತ ಮುರುಗನ್ ಇವರು ೬ ದಿನ ಯುದ್ಧ ನಡೆಸಿ ದಾನವ ಸೋರಾಪಥಮನ್ ಇವನನ್ನು ಸೋಲಿಸಿದ್ದರು. ಅದರ ಪ್ರಯುಕ್ತ ಈ ಉತ್ಸವ ಆಚರಿಸಲಾಗುತ್ತದೆ.