ಹಿಂದೂಗಳು ಗಲಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ! – ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರ ಸ್ಪಷ್ಟ ಹೇಳಿಕೆ !

ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ನವದೆಹಲಿ – ಗಲಭೆಯಲ್ಲಿ ಹಿಂದೂಗಳು ಭಾಗವಹಿಸುವುದಿಲ್ಲ. ಅವರು ಶಾಂತಿಪ್ರಿಯರಾಗಿದ್ದಾರೆ. ಹಿಂದೂ ಸಮಾಜ `ಜಿಹಾದ’ ಮೇಲೆ ವಿಶ್ವಾಸ ಇಡುವುದಿಲ್ಲವೆಂದು ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಕೇಂದ್ರೀಯ ಗೃಹಮಂತ್ರಿ ಅಮಿತ ಶಹಾ ಇವರ `ವರ್ಷ 2002 ರಲ್ಲಿ ಗುಜರಾತ್ ನಲ್ಲಿ ಗಲಭೆಕೋರರಿಗೆ ಪಾಠ ಕಲಿಸಲಾಯಿತು’ ಎನ್ನುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಅವರು ಎನ್.ಡಿ.ಟಿ.ವಿ. ವಾರ್ತಾವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡುತ್ತಿದ್ದರು.

ಮುಖ್ಯಮಂತ್ರಿ ಸರಮಾ ಮುಂದುವರಿಸುತ್ತಾ, 2002 ರಿಂದ ಗುಜರಾತ ಸರಕಾರವು ರಾಜ್ಯದಲ್ಲಿ ಶಾಂತಿಯನ್ನು ಸ್ಥಾಪಿಸಲು ಅನೇಕ ಕ್ರಮಗಳನ್ನು ಕೈಕೊಂಡಿದೆ, ಈಗ ರಾಜ್ಯದಲ್ಲಿ ಶಾಶ್ವತವಾದ ಶಾಂತಿ ನೆಲೆಸಿದೆ. ಈಗ ಸಂಚಾರನಿರ್ಬಂಧವಿಲ್ಲ, ಗಲಭೆಕೋರರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಆಸ್ಸಾಂನಲ್ಲಿಯೂ ಶಾಂತಿ ಸ್ಥಾಪನೆಯಾಗಲಿದೆ, ಅದಕ್ಕಾಗಿ ನಾನು ಪ್ರಯತ್ನಿಸುತ್ತಿದ್ದೇನೆ. ಎಂದು ಹೇಳಿದರು.