‘ನಮ್ಮ ರಾಷ್ಟ್ರಪತಿ ಹೇಗೆ ಕಾಣುತ್ತಾರೆ ?’ (ಅಂತೆ)

ಬಂಗಾಲದಲ್ಲಿನ ತೃಣಮೂಲ ಕಾಂಗ್ರೆಸ್ ಸರಕಾರದ ಸಚಿವ ಅಖಿಲ ಗಿರಿ ಇವರಿಂದ ರಾಷ್ಟ್ರಪತಿಗಳ ಬಗ್ಗೆ ಕೀಳಮಟ್ಟದ ಹೇಳಿಕೆ

ಎಡದಿಂದ ಕಾಂಗ್ರೆಸ್ ಸಚಿವ ಅಖಿಲ ಗಿರಿ ಮತ್ತು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮ

ಕೊಲಕಾತಾ (ಬಂಗಾಲ) – ಬಂಗಾಲದಲ್ಲಿನ ತೃಣಮೂಲ ಕಾಂಗ್ರೆಸ್ ಸರಕಾರದಲ್ಲಿನ ಸಚಿವರಾದ ಅಖಿಲ ಗಿರಿ ಇವರು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮೂ ಇವರ ಬಗ್ಗೆ ಮಾತನಾಡುವಾಗ, ‘ನಾವು ಯಾರನ್ನು ಹೇಗೆ ಕಾಣುತ್ತಾವೆ ಅದರಿಂದ ಗುರುತಿಸುವುದಿಲ್ಲ. ನಾವು ಭಾರತದ ರಾಷ್ಟ್ರಪತಿ ಸ್ಥಾನಕ್ಕೆ ಗೌರವ ನೀಡುತ್ತೇವೆ; ಆದರೆ ನಮ್ಮ ರಾಷ್ಟ್ರಪತಿ ಹೇಗೆ ಕಾಣುತ್ತಾರೆ ?’, ಈ ರೀತಿಯ ಕೀಳಮಟ್ಟದ ಹೇಳಿಕೆ ನೀಡಿದರು, ಅವರು ನಂದಿಗ್ರಾಮದಲ್ಲಿನ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಇದರ ಜೊತೆಗೆ ಗಿರಿಯವರು ಬಂಗಾಲದಲ್ಲಿನ ವಿರೋಧಿಪಕ್ಷದ ನಾಯಕ ಮತ್ತು ಭಾಜಪದ ನಾಯಕ ಸುವೆಂದು ಅಧಿಕಾರಿ ಇವರ ಬಗ್ಗೆ ಕೂಡ ಟೀಕೆಸುತ್ತಾ, ‘ನಾನು ಸುಂದರವಾಗಿಲ್ಲ; ಅಂದರೆ ಅವರು, ಸುವೆಂದು ಅಧಿಕಾರಿ ಎಷ್ಟು ಸುಂದರ ಮತ್ತು ಆಕರ್ಷಕವಾಗಿ ಇದ್ದಾರೆ? ಎಂದು ಹೇಳಿದರು. ಗಿರಿ ಇವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ.

ಅಖಿಲ ಗಿರಿ ಇವರ ಹೇಳಿಕೆಯಿಂದ ಭಾಜಪ, ರಾಷ್ಟ್ರಪತಿ ದ್ರೌಪದಿ ಮುರ್ಮೂ ಇವರು ಬುಡಕಟ್ಟು ಜನಾಂಗದವರಾಗಿದ್ದು ಅವರ ಸೌಂದರ್ಯದ ಬಗ್ಗೆ ಹೇಳಿಕೆ ನೀಡುವ ಸಚಿವ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಪಕ್ಷ ಇದು ಬುಡಕಟ್ಟು ಜನಾಂಗದ ವಿರೋಧಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

‘ಒಂದುವೇಳೆ ರಾಷ್ಟ್ರಪತಿ ಅವರಿಗೆ ಏನಾದರೂ ಅವರ ಅಪಮಾನ ಆಗಿದೆ, ಎಂದು ಅನಿಸಿದ್ದರೆ ನನಗೆ ಖೆದ ಅನಿಸುತ್ತಿದೆ !’ (ಅಂತೆ)

ಅಖಿಲ ಗಿರಿ ಇವರಿಂದ ಕ್ಷಮಾ ಯಾಚನೆಯ ಡೋಂಗಿತನ

ಈ ರೀತಿಯ ಕ್ಷಮೆ ಯಾಚಿಸುವುದು, ಇದು ಮೊಸಳೆ ಕಣ್ಣೀರು ಆಗಿದೆ. ಈ ಹೇಳಿಕೆಗಾಗಿ ಗಿರಿ ಇವರ ವಿರುದ್ಧ ದೂರು ದಾಖಲಿಸಿ ಅವರನ್ನು ಬಂಧಿಸಿ ಜೈಲಿಗೆ ಕಳಿಸುವ ಅವಶ್ಯಕತೆ ಇದೆ, ಇದೇ ಇದರಿಂದ ಅರ್ಥವಾಗುತ್ತಿದೆ !

ಗಿರಿಯವರ ಬಗ್ಗೆ ಟೀಕೆಗಳು ಆದ ನಂತರ ಅವರು ಕ್ಷಮೆಯಾಚಿಸಿದರು. ಅವರು, ನಾನು ಯಾರ ಹೆಸರು ಹೇಳಲಿಲ್ಲ. ಭಾರತದ ರಾಷ್ಟ್ರಪತಿಯವರಿಗೆ ಅವರ ಅಪಮಾನವಾಗಿದೆ ಎಂದು ಅನಿಸಿದರೆ ನಾನು ನನ್ನ ಹೇಳಿಕೆಯ ಬಗ್ಗೆ ಖೇದ ವ್ಯಕ್ತಪಡಿಸುತ್ತೇನೆ. ನಾನು ರಾಷ್ಟ್ರಪತಿಯವರನ್ನು ಗೌರವಿಸುತ್ತೇನೆ. ನಾನು ಸುವೆಂದು ಅಧಿಕಾರಿ ಇವರಿಗೆ ಪ್ರತ್ಯುತ್ತರ ನೀಡಲು ಹೋಲಿಗೆ ಮಾಡಿದ್ದೇನೆ. ಸುವೆಂದು ನನ್ನನ್ನು ಅವಮಾನಿಸುತ್ತಿದ್ದರು, ಹಾಗೆ ಅವರು ನನಗೆ ಬೈಗುಳ ನೀಡುತ್ತಿದ್ದರು. ನಾನು ಕೂಡ ಒಬ್ಬ ಸಚಿವನಾಗಿದ್ದೇನೆ. ನನ್ನ ಬಗ್ಗೆ ಈ ರೀತಿಯ ಹೇಳಿಕೆ ನೀಡಲು ಸಾಧ್ಯವಿಲ್ಲ. ಅವರು ಸಂವಿಧಾನವನ್ನು ಅವಮಾನಿಸುತ್ತಿದ್ದಾರೆ. ನಾನು ಅವರ ಬಗ್ಗೆ ಸಿಟ್ಟಿನಲ್ಲಿ ಮಾತನಾಡಿದೆ ಮತ್ತು ಅದರಿಂದಲೆ ನಾನು ರಾಷ್ಟ್ರಪತಿಗಳ ಬಗ್ಗೆ ಹೇಳಿಕೆ ನೀಡಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಯಾರನ್ನಾದರು ನೋಡುವುದರಿಂದ ಅಥವಾ ಅವರ ದೇಹ ವಿಕತೆಯ ಬಗ್ಗೆ ಹೇಳಿಕೆ ನೀಡುವುದು ಪಾಪವಾಗಿದೆ. ಸಚಿವ ಸ್ಥಾನದಲ್ಲಿರುವ ವ್ಯಕ್ತಿ ದೇಶದ ರಾಷ್ಟ್ರಪತಿಯ ಬಗ್ಗೆ ಈ ರೀತಿಯ ಹೇಳಿಕೆ ನೀಡುವುದು, ಇದರಿಂದ ಅವರ ಯೋಗ್ಯತೆ ಏನು ಎಂದು ಸ್ಪಷ್ಟವಾಗುತ್ತದೆ. ಇಂತಹ ಸಚಿವರ ಮೇಲೆ ಒಬ್ಬ ಮಹಿಳೆಯಾಗಿ ತೃಣಮೂಲ ಕಾಂಗ್ರೆಸ್ಸಿನ ಸರ್ವಾಧಿಕಾರಿ ಮತ್ತು ರಾಜ್ಯದ ಮುಖ್ಯಮಂತ್ರಿ ಮಮತ ಬ್ಯಾನರ್ಜಿ ಅವರು ಕ್ರಮ ಕೈಗೊಳ್ಳುವುದು ಅಪೇಕ್ಷಿತವಾಗಿದೆ !