ಅಸ್ಸಾಂನಲ್ಲಿ ಕ್ರೈಸ್ತ ಯುವತಿಯನ್ನು ಪ್ರೀತಿಸಿದ ಹಿಂದೂ ಯುವಕನನ್ನು ಚರ್ಚ್‌ನ ಕಾರ್ಯಕರ್ತರಿಂದ ಹತ್ಯೆ !

ಹಿಂದೂ ಯುವಕನು ಕ್ರೈಸ್ತ ಧರ್ಮವನ್ನು ಸ್ವೀಕರಿಸಲು ನಿರಾಕರಿಸಿದ್ದನು !

ಲಖೀಮಪುರ (ಅಸ್ಸಾಂ) – ಕ್ರೈಸ್ತ ಯುವತಿಯನ್ನು ಪ್ರೇಮಿಸಿದ ಒಬ್ಬ ಹಿಂದೂ ಯುವಕನಿಗೆ ಬರ್ಬರವಾಗಿ ಹೊಡೆದು ಹತ್ಯೆಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಅಸ್ಸಾಂನ ಕೊಯಿಲಾಮಾರಿ ಬಲಿಜನ ಪ್ರದೇಶದಲ್ಲಿ ನಡೆದಿದೆ. ೨೩ ವರ್ಷದ ಹಿಂದೂ ಯುವಕ ಬಿಕಿ ಬಿಶಾಲನ ಶವ ಸೆಪ್ಟೆಂಬರ ೧೨ ರಂದು ಮರಕ್ಕೆ ನೇಣುಹಾಕಿಕೊಂಡಿರುವ ಸ್ಥಿತಿಯಲ್ಲಿ ಕಂಡುಬಂದಿತ್ತು. ಮಾನವ ಹಕ್ಕುಗಳ ಸಂಸ್ಥೆ ‘ಲಿಗಲ್ ರಾಯಿಟ್ಸ್ ಆಬ್ಝರ್ವೇಟರಿ’ ಈ ಸಂಘಟನೆಯು ಈ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಪೊಲೀಸ್ ಮತ್ತು ಸ್ಥಳೀಯ ಆಡಳಿತದವರಲ್ಲಿ ವಿನಂತಿಸಿದೆ.

೧. ಬಿಕಿ ಬಿಶಾಲ ಮತ್ತು ಕ್ರೈಸ್ತ ಯುವತಿ ಪರಸ್ಪರ ಪ್ರೇಮಿಸುತ್ತಿದ್ದರು. ಅವಳು ಬಿಕಿಯ ಜೊತೆಯಲ್ಲಿರಲು ಹೋಗಿದ್ದಳು. ಈ ವಿಷಯವು ಆ ಪರಿಸರದ ಚರ್ಚ್‌ನ ೪ ಕಾರ್ಯಕರ್ತರಿಗೆ ತಿಳಿದಾಗ ಅವರು ಬಿಕಿಯ ಮನೆಯ ಹೊರಗೆ ಒಟ್ಟಾದರು.

೨. ಅವರು ಬಿಕಿಗೆ ‘ಇದರ ಗಂಭೀರ ಪರಿಣಾಮವನ್ನು ಭೋಗಿಸಬೇಕಾಗುವುದು’, ಎಂದು ಬೆದರಿಸಿದ್ದರು. ಅವರು ಯುವತಿಯನ್ನು ಅವನ ಮನೆಯಿಂದ ಹೊರಗೆ ತೆಗೆದರು ಹಾಗೂ ಬಿಕಿಗೆ ‘ಕ್ರೈಸ್ತ ಧರ್ಮವನ್ನು ಸ್ವೀಕರಿಸು ಇಲ್ಲದಿದ್ದರೆ ಈ ಯುವತಿಯೊಂದಿಗಿನ ಸಂಬಂಧವನ್ನು ಬಿಟ್ಟುಬಿಡು.’ ಎಂದು ಹೇಳಿದರು.

೩. ಬಿಕಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಲು ನಿರಾಕರಿಸಿದಾಗ ಕ್ರೈಸ್ತ ಕಾರ್ಯಕರ್ತರು ಬಿಕಿಯನ್ನು ಮನೆಯಿಂದ ಎಳೆದು ಹೊರಗೆ ತಂದು ಅವನಿಗೆ ಯದ್ವಾತದ್ವ ಹೊಡೆದು ಕೊಲೆ ಮಾಡಿದರು ಹಾಗೂ ನಂತರ ಮರಕ್ಕೆ ನೇತಾಡಿಸಿದರು.

ಸಂಪಾದಕೀಯ ನಿಲುವು

  • ಅಸ್ಸಾಂನಲ್ಲಿ ಭಾಜಪದ ಸರಕಾರ ಇರುವಾಗ ಇಂತಹ ಘಟನೆ ನಡೆಯಬಾರದೆಂದು ಹಿಂದೂಗಳಿಗೆ ಅನಿಸುತ್ತದೆ !
  • ‘ಕ್ರೈಸ್ತರೆಂದರೆ ಶಾಂತಿವಾದಿ’ ಎನ್ನುವ ಚಿತ್ರಣವನ್ನು ಭಾರತದಲ್ಲಿ ನಿರ್ಮಾಣ ಮಾಡಲಾಗಿದೆ; ಆದರೆ ಪ್ರತ್ಯಕ್ಷವಾಗಿ ಅದು ಹೇಗಿದೆ, ಎಂಬುದು ಈ ಘಟನೆಯಿಂದ ಸ್ಪಷ್ಟವಾಗುತ್ತದೆ !
  • ಮುಸಲ್ಮಾನರಿರಲಿ ಅಥವಾ ಕ್ರೈಸ್ತರು ಅವರ ಧರ್ಮದ ಯುವತಿಯರನ್ನು ಹಿಂದೂ ಯುವಕರು ಪ್ರೇಮಿಸಿದರೆ ಅವರನ್ನು ಹತ್ಯೆ ಮಾಡಲಾಗುತ್ತದೆ, ಇನ್ನೊಂದೆಡೆ ಮುಸಲ್ಮಾನರು ಹಿಂದೂ ಯುವತಿಯರನ್ನು ಲವ್ ಜಿಹಾದ್‌ನ ಮೂಲಕ ಬಲೆಯಲ್ಲಿ ಸಿಲುಕಿಸಿ ಅವರ ಜೀವನವನ್ನು ಧ್ವಂಸಗೊಳಿಸುತ್ತಾರೆ ! ಈ ವಿಷಯದಲ್ಲಿ ದೇಶದಲ್ಲಿನ ಜಾತ್ಯತೀತವಾದಿ ಮತ್ತು ಪ್ರಗತಿ(ಅಧೋಗತಿ)ಪರರು ಬಾಯಿ ಬಿಡುವುದಿಲ್ಲ !