ಅಸ್ಸಾಂನಲ್ಲಿ ೨ ಜಿಹಾದಿ ಭಯೋತ್ಪಾದಕರ ಬಂದನ

ಗೌಹಾಟಿ – ಅಸ್ಸಾಂನಲ್ಲಿ ‘ಅನ್ಸಾರುಲ್ಲಾ ಬಾಂಗ್ಲಾ ಟೀಮ್’ನ (ಎ.ಬಿ.ಟಿ.ಯ) ೨ ಭಯೋತ್ಪಾದಕರನ್ನು ಪೊಲೀಸರು ಬಂದಿಸಿದರು. ಮುಸಾದಿಕ ಹುಸೇನ ಮತ್ತು ಇಕ್ರಾಮುಲ ಇಸ್ಲಾಮ್ ಎಂದು ಅವರ ಹೆಸರಾಗಿದೆ. ಇಕ್ರಾಮುಲ ಇಮಾಮ್ (ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸಿಕೊಳ್ಳುವ ಪ್ರಮುಖ) ಆಗಿದ್ದು ಅವನನ್ನು ನಾಗಾವ ಜಿಲ್ಲೆಯಿಂದ ಬಂದಿಸಲಾಗಿದೆ. ಹುಸೇನನನ್ನು ಮೋರೀಗಾವ ಜಿಲ್ಲೆಯಿಂದ ಬಂದಿಸಲಾಗಿದೆ ಎಂದು ಮೋರೀಗಾವದ ಪೊಲೀಸ್ ಅಧೀಕ್ಷಕ ಅಪರ್ಣಾ ಎನ್. ಇವರು ‘ಎ.ಎನ್.ಐ.’ ಈ ವಾರ್ತಾ ಸಂಸ್ಥೆಗೆ ಮಾಹಿತಿ ನೀಡಿದರು.

೧. ಕಳೆದ ತಿಂಗಳಲ್ಲಿ ಮೋರೀಗಾವ ಜಿಲ್ಲಾಡಳಿತದಿಂದ ಮೋಯಿರಬಾರಿಯಲ್ಲಿನ ಮದರಸಾವನ್ನು ಕೆಡಹಲಾಗಿತ್ತು. ರಾಜ್ಯಾಡಳಿತವು ಇದುವರೆಗೆ ರಾಜ್ಯಾದ್ಯಂತ ೩ ಮದರಸಾಗಳನ್ನು ಧ್ವಂಸ ಮಾಡಿದೆ. ಅದೇ ರೀತಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧವಿರುವ ಆರೋಪಕ್ಕಾಗಿ ಇಮಾಮ ಮತ್ತು ಮದರಸಾ ಶಿಕ್ಷಕ ಸಹಿತ ೪೦ ಜನರನ್ನು ಬಂದಿಸಿದೆ.
೨.  ಒಂದು ಮದರಸಾದ ಮೌಲ್ವಿಯನ್ನು ದೇಶವಿರೋಧಿ ಚಟುವಟಿಕೆಯ ಆರೊಪದಲ್ಲಿ ಬಂದಿಸಿದನಂತರ ಸ್ಥಳೀಯರು ತಾವಾಗಿಯೆ ಆ ಮದರಸಾವನ್ನು ಕೆಡವಿದ್ದರು.
೩. ಭಯೋತ್ಪಾದಕರು ಧರ್ಮಗುರುಗಳ ವೇಶದಲ್ಲಿ ರಾಜ್ಯದಲ್ಲಿ ನುಸುಳಿದ್ದು ಅವರು ವಿಧ್ವಂಸಕ ಹಾಗೂ ರಾಷ್ಟ್ರವಿರೋಧಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ, ಎಂದು ಕೆಲವು ದಿನಗಳ ಹಿಂದೆ ವಾರ್ತೆ ಪ್ರಸಿದ್ಧವಾಗಿತ್ತು.

ಮದರಸಾ ಶೈಕ್ಷಣಿಕ ಸಂಸ್ಥೆಗಳಲ್ಲ, ಭಯೋತ್ಪಾದಕರ ಕೇಂದ್ರ ! – ಮುಖ್ಯಮಂತ್ರಿ

ಅಸ್ಸಾಂ ರಾಜ್ಯದ ಕೆಲವು ಮದರಸಾಗಳು ಶೈಕ್ಷಣಿಕ ಸಂಸ್ಥೆಗಳಾಗಿರದೆ ಭಯೋತ್ಪಾದಕರ ಕೇಂದ್ರಗಳಾಗಿವೆ, ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಇವರು ಹೇಳಿದ್ದರು. ರಾಜ್ಯಕ್ಕೆ ಭೇಟಿ ನೀಡುವ ಇಸ್ಲಾಮಿಕ್ ಶಿಕ್ಷಕರ ಮೇಲೆ ನಿಗಾವಹಿಸಲಾಗುವುದು. ಹಾಗೂ ರಾಜ್ಯ ಒಂದು ಪೋರ್ಟಲ್ ವಿಕನಗೊಳಿಸುತ್ತಿದೆ. ಅದರಲ್ಲಿ ಅವರ ವಿವರಣೆಯನ್ನು ದಾಖಲಿಸಲಾಗುವುದು, ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಸಂಪಾದಕೀಯ ನಿಲುವು

ಹಿಮಂತ ಬಿಸ್ವ ಸರಮಾ ಮುಖ್ಯಮಂತ್ರಿ ಆದಾಗಿನಿಂದ ಭಯೋತ್ಪಾದಕರ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅಸ್ಸಾಂನಲ್ಲಿ ಇಲ್ಲಿಯವರೆಗೆ ೪೦ ಭಯೋತ್ಪಾದಕರನ್ನು ಬಂದಿಸಲಾಗಿದೆ. ಇದರಿಂದ ಅಲ್ಲಿ ಭಯೋತ್ಪಾದನೆಯು ಹರಡಿದ್ದು ಅದನ್ನು ಬೇರು ಸಮೇತ ಕಿತ್ತೆಸೆಯಲು ಸರಕಾರ ಇನ್ನೂ ಕಠೋರವಾದ ಕ್ರಮ ತೆಗೆದುಕೊಳ್ಳಬೇಕೆಂಬ ಅಪೇಕ್ಷಿತವಾಗಿದೆ !