ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಹೆಚ್ಚಿನ ಶುಲ್ಕ ನೀಡಿ ದರ್ಶನ ಪಡೆಯುವ ‘ಸುಗಮ ದರ್ಶನ’ ಯೋಜನೆಯನ್ನು ನಿಲ್ಲಿಸಬೇಕು ! – ಹಿಂದೂ ಜನ ಜಾಗೃತಿ ಸಮಿತಿ

ವಾರಾಣಸಿ (ಉತ್ತರಪ್ರದೇಶ) – ಕಾಶಿ ವಿಶ್ವನಾಥ ದೇವಸ್ಥಾನದ ಸಾಲಿನಲ್ಲಿ ನಿಲ್ಲದೆ ಭಕ್ತರಿಗೆ ದರ್ಶನ ಪಡೆಯುವುದಕ್ಕಾಗಿ ‘ಸುಗಮ ದರ್ಶನ’ ಯೋಜನೆಯಲ್ಲಿ ಪ್ರತಿಯೊಬ್ಬರಿಂದ ೫೦೦ ರೂಪಾಯಿ ಮತ್ತು ಸೋಮವಾರದಂದು ೭೫೦ ರೂಪಾಯಿ ಪಡೆಯುವುದು ಸಂಪೂರ್ಣವಾಗಿ ಅನ್ಯಾಯವಾಗಿದೆ. ಆದ್ದರಿಂದ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ. ಮೊದಲನೆಯದಾಗಿ ಈ ಯೋಜನೆಯಿಂದ ಭಕ್ತರಲ್ಲಿ ಭೇದಭಾವದ ಭಾವನೆ ಉಂಟಾಗುತ್ತದೆ. ದೂರದಿಂದ ದೇವರ ದರ್ಶನಕ್ಕಾಗಿ ಬರುವ ಬಡ ಭಕ್ತರಿಗೆ ೫೦೦ ರಿಂದ ೭೫೦ ರೂಪಾಯಿ ನೀಡುಲು ಸಾಧ್ಯವಾಗುವುದಿಲ್ಲ; ಆದರೆ ಶ್ರೀಮಂತ ಭಕ್ತರು ಹಣ ನೀಡಿ ದರ್ಶನ ಪಡೆಯಲು ಸಾಧ್ಯವಾಗುತ್ತದೆ. ದೇವರು ಎಲ್ಲರಿಗಿದ್ದಾನೆ ಮತ್ತು ದೇವರ ದೃಷ್ಟಿಯಲ್ಲಿ ಎಲ್ಲಾ ಭಕ್ತರು ಸಮಾನರಾಗಿದ್ದಾರೆ. ಆದ್ದರಿಂದ ಭಕ್ತರು ಅವರ ದರ್ಶನ ಆದೇ ಪದ್ಧತಿಯಲ್ಲಿ ಪಡೆಯಬೇಕು, ಆತ ಬಡವನಾಗಿರಲಿ ಅಥವಾ ಶ್ರೀಮಂತ, ನಾಯಕನಾಗಿರಲಿ ಅಥವಾ ಕಾರ್ಯಕರ್ತ, ದೇವರ ದರ್ಶನದ ಪದ್ಧತಿ ಎಲ್ಲರಿಗಾಗಿ ಒಂದೇ ರೀತಿ ಇರಬೇಕೆಂಬುದು ನಮ್ಮ ಅಭಿಪ್ರಾಯವಾಗಿದೆ, ಎಂದು ಹಿಂದೂ ಜನ ಜಾಗೃತಿ ಸಮಿತಿಯ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯ ಸಮನ್ವಯಕರಾದ ಶ್ರೀ. ವಿಶ್ವನಾಥ ಕುಲಕರ್ಣಿ ಇವರು ಪ್ರಸಾರ ಮಾಡಿದ ಕರಪತ್ರದಲ್ಲಿ ಹೇಳಿದ್ದಾರೆ.

ಆ ಕರ ಪತ್ರದಲ್ಲಿ,

೧. ಬಡವರಾಗಿರಲಿ ಅಥವಾ ಶ್ರೀಮಂತರು, ಪ್ರತಿಯೊಬ್ಬರಗಾಗಿ ಸಮಯದ ಮಹತ್ವದ್ದಾಗಿರುತ್ತದೆ. ಇದರಲ್ಲಿ ಯಾವುದೇ ಭೇದ ಭಾವ ಆಗಬಾರದು. ಈ ಮೊದಲು ‘ಸುಗಮ ದರ್ಶನ’ಗಾಗಿ ೩೦೦ ರೂಪಾಯಿ ನೀಡಬೇಕಾಗಿತ್ತು. ಆದರೆ ಈಗ ಅದು ಶ್ರಾವಣ ಮಾಸಕ್ಕಾಗಿ ೫೦೦ ರೂಪಾಯಿ ಮಾಡಲಾಗಿದ್ದು ಶ್ರಾವಣದ ಸೋಮವಾರದಂದು ೭೫೦ ರೂಪಾಯಿ ಪಡೆಯಲಾಗುತ್ತಿದೆ. ‘ದೇವಸ್ಥಾನಗಳು ಶ್ರದ್ಧೆ ಮತ್ತು ಭಕ್ತಿಯ ಕೇಂದ್ರವಾಗಿದೆ’, ಇದು ದೇವಸ್ಥಾನದ ವಿಶ್ವಸ್ಥರು ಗಮನದಲ್ಲಿಡಬೇಕು.

೨. ‘ಹಣ ನೀಡಿ ‘ಸುಗಮ ದರ್ಶನ’ ಈ ಯೋಜನೆ ನಿಲ್ಲಿಸಬೇಕೆಂದು’, ನಮಗೆ ಅನಿಸುತ್ತದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥಥ ಇವರು ಒಳ್ಳೆಯ ರೀತಿಯಲ್ಲಿ ಸರಕಾರ ನಡೆಸುತ್ತಿದ್ದಾರೆ. ಯೋಗಿ ಆದಿತ್ಯನಾಥ ಇವರ ಸರಕಾರ ಯಾವಾಗಲೂ ಧರ್ಮದ ಮತ್ತು ಹಿಂದೂ ಹಿತದ ನಿರ್ಣಯ ನ್ಯಾಯವಾಗಿ ತೆಗೆದುಕೊಳ್ಳುತ್ತಾರೆ. ಭಕ್ತರ ಹಿತಕ್ಕಾಗಿ ಈ ಪ್ರಕರಣದಲ್ಲಿ ಖಂಡಿತವಾಗಿಯೂ ಅವರು ಗಮನಹರಿಸುವರೆಂಬ ವಿಶ್ವಾಸ ನಮಗಿದೆ.