ಅಜಮೇರ ದರ್ಗಾದ ಖಾದಿಮ ಗೌಹಾರ ಚಿಶ್ತಿಯಿಂದ ಅಜಮೇರ್ ಮತ್ತು ಉದಯಪುರದಲ್ಲಿ ದಂಗೆ ಎಬ್ಬಿಸುವ ಹುನ್ನಾರ !

ದರ್ಗಾದ ಬೇರೆ ಕರ್ಮಚಾರಿಗಳಿಗೂ ಸಂಚಿನ ಮಾಹಿತಿ ಇತ್ತು.

(ದರ್ಗಾ ಎಂದರೆ ಮುಸಲ್ಮಾನರ ಸಮಾಧಿ ಇರುವ ಸ್ಥಳ)

ಉದಯಪುರ (ರಾಜಸ್ಥಾನ) – ಅಜಮೇರದ ಮೋಯಿನುದ್ದೀನ್ ಚಿಶ್ತಿ ದರ್ಗಾದ ಖಾದಿಮ ಗೌಹಾರ ಚಿಶ್ತಿ ಇವನನ್ನು ಬಂಧಿಸಲಾದ ನಂತರ ಅವನ ವಿಚಾರಣೆ ನಡೆಸಲಾಗುತ್ತಿದೆ. ಕನ್ಹೈಯ್ಯಾಲಾಲ ಹತ್ಯೆಯ ನಂತರ ಗೌಹರ ಚಿಶ್ತಿ ಹಿಂದೂಗಳ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿರುವ ವೀಡಿಯೋ ಪ್ರಸಾರವಾದ ನಂತರ ಅವನನ್ನು ಬಂಧಿಸಲಾಗಿತ್ತು. ಅವನ ನೀಡಿರುವ ಮಾಹಿತಿಯಿಂದ ಅಜ್ಮೇರ್ ಮತ್ತು ಉದಯಪುರದಲ್ಲಿ ಹಿಂದೂಗಳ ಮೇಲೆ ದಾಳಿ ನಡೆಸಿ ದಂಗೆ ಎಬ್ಬಿಸುವ ಸಂಚು ಬೆಳಕಿಗೆ ಬಂದಿದೆ. ಇದರ ಮಾಹಿತಿ ಇತರ ಕರ್ಮಚಾರಿಗಳಿಗು ಇತ್ತು. ಆದರೆ ಅವರು ಅದನ್ನು ಪೊಲೀಸರಿಗೆ ಹೇಳಲಿಲ್ಲ, ಎಂದು ಹೇಳಲಾಗಿದೆ. (ಇಂತಹವರ ಮೇಲೆಯೂ ಕಠಿಣ ಕ್ರಮ ಕೈಗೊಳ್ಳಬೇಕು. ಆದ್ದರಿಂದ ಇಂತಹ ಮಾಹಿತಿ ಇದ್ದರೂ ಪೊಲೀಸರಿಗೆ ತಿಳಿಸಿದೇ ಇರುವವರಲ್ಲಿಯೂ ಸ್ವಲ್ಪವಾದರೂ ಭಯ ಹುಟ್ಟಿ ಮುಂದೆ ಈ ರೀತಿ ನಡೆಯದೇ ಇರಲು ಹಾಗೂ ತಾವಾಗಿಯೇ ಮುಂದೆ ಬಂದು ಮಾಹಿತಿ ನೀಡುವರು ! – ಸಂಪಾದಕರು)

ಗೌಹರ ಚಿಶ್ತಿ ಇವನು ಜೂನ್ ೧೬, ೨೦೨೨ ರಂದು ಇತರ ಖಾದಿಮಗಳ ಜೊತೆಗೆ ಮೊಹಲ್ಲಾ ಬೈಠಕ್ ನಡೆಸಿದ್ದನು. ಈ ಸಮಯದಲ್ಲಿ ಅವನು ದಂಗೆ ಎಬ್ಬಿಸಲು ಪ್ರಚೋದನೆ ನೀಡಿದ್ದನು. ಅವನು ಒಂದು ವಾಟ್ಸಾಪ್ ಗ್ರೂಪ್ ತಯಾರಿಸಿದ್ದನು. ಅವನು ರೂಪಿಸಿರುವ ಸಂಚಿನ ಬಗ್ಗೆ ಕೆಲವು ಖಾದೀಮರ ಗಮನಕ್ಕೆ ಬಂದ ನಂತರ ಅವರು ಮರುದಿನದ ಆಂದೋಲನದಲ್ಲಿ ಭಾಗವಾಹಿಸುವುದನ್ನು ತಪ್ಪಿಸಿದ್ದರು. ಈ ಅಂದೋಲದ ನಂತರ ಗೌಹರ ಚಿಶ್ತಿ ಉದಯಪುರಕ್ಕೆ ಹೋಗಿದ್ದನು. ಜೂನ್ ೨೮ ರಂದು ಮಹಮ್ಮದ್ ರಿಯಾಜ್ ಮತ್ತು ಮಹಮ್ಮದ್ ಗೌಸ್ ಇವರು ಕನ್ಹೈಯ್ಯಾಲಾಲ ಇವರ ಹತ್ಯೆ ಮಾಡಿದರು. ಇಬ್ಬರೂ ಗೌಹರ ಚಿಶ್ತಿಯ ಸಂಪರ್ಕದಲ್ಲಿದ್ದರು.

ಸಂಪಾದಕೀಯ ನಿಲುವು

ಹಿಂದೂಗಳಿಗೆ ಅಜಮೇರ ದರ್ಗಾದ ಕರ್ಮಚಾರಿಗಳ ನಿಜವಾದ ಪರಿಚಯ ತಿಳಿದ ನಂತರ ಅವರು ದರ್ಗೆಗೆ ಹೋಗುವುದು ನಿಲ್ಲಿಸಿದರು. ಈಗ ಇದರಲ್ಲಿ ಸಾತತ್ಯ ಇರಿಸುವುದು ಆವಶ್ಯಕವಾಗಿದೆ. ಹಾಗೂ ಬೇರೆ ಕಡೆಯ ಹಿಂದೂಗಳು ಸಹ ಇದರ ವಿಚಾರ ಮಾಡಬೇಕು.