ರತಲಾಮ (ಮಧ್ಯಪ್ರದೇಶ) – ’ಗೂಗಲ್ ಮ್ಯಾಪ್’ನಲ್ಲಿ (ನಕಾಶೆ ನೋಡುವ ಸಂಕೇತಸ್ಥಳ) ಇಲ್ಲಿನ ಭದವಾಸಾ ಊರಿನಲ್ಲಿರುವ ಶ್ರೀ ಅಂಬೇಮಾತೆಯ ದೇವಸ್ಥಾನದ ಜಾಗದಲ್ಲಿ ಕಹಕಶಾಂ ಮಸೀದಿಯನ್ನು ತೋರಿಸಲಾಗಿರುವುದರಿಂದ ಒತ್ತಡ ನಿರ್ಮಾಣವಾಗಿದೆ. ಊರಿನವರು ಸಂಬಂಧಿತರ ಮೇಲೆ ಕಠೋರ ಕಾರ್ಯಾಚರಣೆಯನ್ನು ಮಾಡಬೇಕೆಂದು ದೂರನ್ನು ನೋಂದಾಯಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಕಲಂ ‘೨೯೫ ಅ’ನ ಅನ್ವಯ ಅಪರಾಧವನ್ನು ದಾಖಲಿಸಿದ್ದು ಶಾಹರೂಖ, ಆಮೀನ ಹಾಗೂ ಓರ್ವ ಅಪ್ರಾಪ್ತ ಯುವಕನನ್ನು ಬಂಧಿಸಿದ್ದಾರೆ. ಇವರ ವಿಚಾರಣೆಯನ್ನು ನಡೆಯುತ್ತಿದೆ. ಈ ಮೂವರೂ ಇದೇ ಊರಿನವರಾಗಿದ್ದಾರೆ. ಇವರಲ್ಲಿನ ಶಾಹರೂಖನು ಈ ಬದಲಾವಣೆಯನ್ನು ಮಾಡಿ ಅದರ ಛಾಯಾಚಿತ್ರವನ್ನು ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರ ಮಾಡಿದ್ದನು. ಈ ವಿಷಯದಲ್ಲಿ ಊರಿನವರು ಶಾಹರೂಖನನ್ನು ವಿಚಾರಿಸಿದರು. ಅದೇ ಸಮಯಕ್ಕೆ ಪೊಲೀಸರು ಘಟನಾ ಸ್ಥಳವನ್ನು ತಲುಪಿ ಶಾಹರೂಖನನ್ನು ಬಂಧಿಸಿದ್ದಾರೆ.
MP: Ambemata Temple’s name changed to ‘Kahkasha mosque’ on Google Maps, police arrest Shahrukh, Ameen and a minor after locals complainhttps://t.co/iOC6K80VgI
— OpIndia.com (@OpIndia_com) July 8, 2022
ಸಂಪಾದಕೀಯ ನಿಲುವುಈಗ ಹಿಂದೂಗಳ ಸಂದರ್ಭದಲ್ಲಿ ಯಾವುದೇ ರೀತಿಯ ಆಕ್ರಮಣ ಮಾಡುವುದನ್ನು ಕಟ್ಟರತಾವಾದಿ ಮುಸಲ್ಮಾನರು ಬಿಟ್ಟಿಲ್ಲ, ಎಂಬುದೇ ಈ ಘಟನೆಯಿಂದ ಗಮನಕ್ಕೆ ಬರುತ್ತದೆ ! |