ಕಾಶ್ಮೀರಿ ಹಿಂದೂ ಮತ್ತು ಗೋಹಂತಕರ ಸಾವು ಒಂದೇ ರೀತಿಯದಾಗಿದೆ ಎಂದು ಹೇಳುವ ನಾಯಕಿ ಸಾಯಿ ಪಲ್ಲವಿ ಇವರ ಪುಕ್ಕಟ್ಟೆ ಸ್ಪಷ್ಟೀಕರಣ
ಭಾಗ್ಯನಗರ – ಕಾರ್ಯಕರ್ತರು ನಾಯಕಿ ಸಾಯಿ ಪಲ್ಲವಿ ವಿರುದ್ಧ ದೂರು ದಾಖಲಿಸಿದ ನಂತರ ಪಲ್ಲವಿಯವರು ಕಾಶ್ಮೀರ ಹಿಂದೂ ಮತ್ತು ಗೋಹಂತಕರ ಸಾವು ಒಂದೇ ರೀತಿ ಇರುವುದೆಂಬ ಹೇಳಿಕೆಯ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಅವರು, ನಾನು ಡಾಕ್ಟರ್ ಆಗಿರುವುದರಿಂದ ನನಗೆ ಪ್ರತಿಯೊಂದು ಜೀವದ ಮಹತ್ವ ತಿಳಿದಿದೆ. ನಾನು ಸಂದರ್ಶನದಲ್ಲಿ, ‘ತಾವು ಎಡಪಂಥೀಯ ವಿಚಾರ ಸರಣಿಯ ಪರವೋ ಅಥವಾ ಬಲಪಂಥೀಯ ವಿಚಾರ ಸರಣಿಯ ಪರವೋ ?’ ಎಂದು ಕೇಳಲಾಗಿತ್ತು. ಅದರ ಬಗ್ಗೆ ನಾನು ತಟಸ್ಥವಾಗಿರುವುದು ಅನ್ನು ಹೇಳಿ ‘ಮಾನವೀಯತೆಯ ಬಗ್ಗೆ ವಿಶ್ವಾಸ ಇಡುತ್ತೇನೆ’, ಎಂದು ಹೇಳಿದ್ದೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ಹೇಳಿದರು. (ಹಿಂದೂಗಳು ಆಕ್ರೋಶಗೊಂಡಿದ್ದರಿಂದ ‘ಪ್ರಕರಣ ಮೈಮೇಲೆ ಬರುತ್ತದೆ’, ಎಂದು ಸಾಯಿ ಪಲ್ಲವಿ ಅವರ ಗಮನಕ್ಕೆ ಬಂದಿದೆ. ಆದ್ದರಿಂದ ಈ ರೀತಿಯ ಸಾರಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹವರ ಚಲನಚಿತ್ರಗಳನ್ನು ಬಹಿಷ್ಕರಿಸಿ ಹಿಂದುಗಳು ಅವರಿಗೆ ಪಾಠ ಕಲಿಸುವುದು ಅವಶ್ಯಕ ! – ಸಂಪಾದಕರು)
Actor Sai Pallavi issued a clarification amid the controversy over her comments on the exodus of Kashmiri Pandits and lynching which she, in the video, said was taken out of contexthttps://t.co/HJ350sOOya
— Hindustan Times (@htTweets) June 19, 2022
ಸಂಪಾದಕೀಯ ನಿಲುವು* ಒಂದುವೇಳೆ ಮಾನವೀಯತೆಯ ಮೇಲೆ ವಿಶ್ವಾಸ ಇದ್ದರೆ ಕಾಶ್ಮೀರಿ ಹಿಂದೂಗಳ ತೊಂದರೆ ನೋಡಿ ನಾಯಕಿ ಸಾಯಿ ಪಲ್ಲವಿ ಇಂತಹ ಹಾಸ್ಯಾಸ್ಪದ ತುಲನೆ ಮಾಡುತ್ತಿರಲಿಲ್ಲ ! ಇಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ ! |