ದೇವಸ್ಥಾನ ಮತ್ತು ಸಂತರ ಅವಮಾನವನ್ನು ವಿರೋಧಿಸಿ ರಾಯಪುರದಲ್ಲಿ ಇಂದು ಸಂತರ ಪ್ರತಿಭಟನೆ !

ಬಾಲೋದ (ಛತ್ತಿಸಗಡ) – ಬಾಲೋದ (ಛತ್ತಿಸಗಡ)ದಲ್ಲಿರುವ ಜಾಮಡಿ ಪಾಟೇಶ್ವರ ಧಾಮದ ದೇವಸ್ಥಾನದಲ್ಲಿ ಪ್ರಾಣಿಗಳನ್ನು ಕೊಂದು ಅವುಗಳ ಮಾಂಸ ಮತ್ತು ರಕ್ತವನ್ನು ವಿಗ್ರಹದ ಮೇಲೆ ಎಸೆದಿದ್ದಕ್ಕಾಗಿ ಕಳೆದ ಒಂದು ತಿಂಗಳಿನಿಂದ ಯಾವುದೇ ಪ್ರಕರಣ ದಾಖಲಾಗಿಲ್ಲ. ಓರ್ವ ವ್ಯಕ್ತಿಯು ಶ್ರೀ ಪಂಚ ದಿಗಂಬರ ಮತ್ತು ಆಖಾಡಾದ ಮಹಾಂತರಾದ ಶ್ರೀರಾಮ ಬಾಲಕ ದಾಸಜೀ ಮಹಾರಾಜ ಅವರನ್ನು ಅವಮಾನಿಸಿ ಮಹಾರಾಜರ ಭಕ್ತರನ್ನು ಹೆದರಿಸಿ ಶ್ರೀ ಹನುಮಾನ ವಿಗ್ರಹವನ್ನು ಒಡೆದು ಹಾಕಿದ್ದಾನೆ. ಇದರ ವಿರುದ್ಧ ರಾಯಪುರದ ಶದಾಣಿ ದರಬಾರದಲ್ಲಿ ಒಂದು ಸಭೆಯನ್ನು ಆಯೋಜಿಸಲಾಯಿತು. ಈ ಸಭೆಯಲ್ಲಿ ವಿವಿಧ ಆಖಾಡಾಗಳ ಮುಖ್ಯಸ್ಥರು, ಸಾಮಾಜಿಕ ಸಂಘಟನೆಗಳ ಮುಖ್ಯಸ್ಥರು ಮುಂತಾದವರು ಉಪಸ್ಥಿತರಿದ್ದರು. ಈ ಸಭೆಯಲ್ಲಿ ಜೂನ ೭ರಂದು ಸಂತರ ಸಮ್ಮುಖದಲ್ಲಿ ಧರಣಿ ಮುಷ್ಕರ ನಡೆಸಲು ತೀರ್ಮಾನಿಸಲಾಯಿತು. ಈ ಸಭೆಯಲ್ಲಿ ಸಂತ ಶ್ರೀ ಯುಧಿಷ್ಟಿರಲಾಲ ಶದಾಣಿ, ಮಹಂತ ಸರ್ವೇಶ್ವರದಾಸ, ಮಹಂತ ತ್ರಿವೇಣಿ ದಾಸ, ಮಹಂತ ಶ್ರೀ ರಾಮ ಬಾಲಕ ದಾಸಜೀ ಮಹಾರಾಜ ಮೊದಲಾದವರು ಉಪಸ್ಥಿತರಿದ್ದರು.

ಸಂಪಾದಕೀಯ ನಿಲುವು

ಛತ್ತಿಸಗಡದಲ್ಲಿ ಕಾಂಗ್ರೆಸ ಸರಕಾರ ಇರುವುದರಿಂದ ಹಿಂದೂ ದೇವಾಲಯಗಳನ್ನು ಮತ್ತು ಸಂತರನ್ನು ಅವಮಾನಿಸಲಾಗುತ್ತಿದೆ. ‘ಕಾಂಗ್ರೆಸ್ಸಿನ ಆಡಳಿತವೆಂದರೆ ಪಾಕಿಸ್ತಾನದ ಆಡಳಿತ’ ಎಂಬಂತೆ ಭಾಸವಾಗುತ್ತದೆ.

ಸಂತರು ಪ್ರತಿಭಟನೆ ಏಕೆ ಮಾಡಬೇಕಾಗುತ್ತದೆ? ಸರಕಾರ ಮತ್ತು ಪೊಲೀಸರು ತಾವಾಗಿಯೇ ಏಕೆ ಕ್ರಮ ಕೈಗೊಳ್ಳುವುದಿಲ್ಲ?