ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಕಾರ್ಯಕರ್ತನ ಕೊಲೆ ಹಾಗೂ ಕಾರ್ಪೊರೇಟರ ಮೇಲೆ ವಾಹನ ಹತ್ತಿಸಲು ಪ್ರಯತ್ನ !

ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಅಧಿಕಾರವಿರುವಾಗ ಆ ಪಕ್ಷದ ಕಾರ್ಯಕರ್ತರೇ ಸುರಕ್ಷಿತರಾಗಿರದೆ ಇರುವಾಗ ‘ಸಾಮಾನ್ಯ ಜನತೆ ಹೇಗೆ ಜೀವಿಸುತ್ತಿರಬಹುದು ?’, ಎಂಬ ಬಗ್ಗೆ ವಿಚಾರ ಮಾಡದೇ ಇರುವುದೇ ಉತ್ತಮ !

*ಬಂಗಾಲದಲ್ಲಿ ಕಾಯಿದೆ ಹಾಗೂ ಸುವ್ಯವಸ್ಥೆ ಇಲ್ಲದಿರುವುದರಿಂದ ಅಲ್ಲಿ ರಾಷ್ಟ್ರಪತಿ ಆಡಳಿತ ತರುವುದೇ ಯೋಗ್ಯ !

ನದಿಯಾ (ಬಂಗಾಲ) – ಇಲ್ಲಿ ತೃಣಮೂಲ ಕಾಂಗ್ರೆಸನ ಸ್ಥಳೀಯ ಕಾರ್ಯಕರ್ತರಾದ ಸಹದೇವ ಮಂಡಲರ ಹತ್ಯೆ ಮಾಡಲಾಯಿತು. ಅವರ ಪತ್ನಿ ಅನಿಮಾ ಮಂಡಲರವರು ಪಂಚಾಯತ ಸದಸ್ಯರಾಗಿದ್ದಾರೆ. ಮತ್ತೊಂದು ಕಡೆ ಹುಗಲಿ ಜಿಲ್ಲೆಯ ತಾರಕೇಶ್ವರದಲ್ಲಿ ತೃಣಮೂಲ ಕಾಂಗ್ರೆಸನ ಕಾರ್ಪೊರೇಟರ್ ರೂಪಾ ಸರಕಾರ ಇವರ ಮೇಲೆ ಚತುಷ್ಚಕ್ರ ವಾಹನ ಹತ್ತಿಸಲು ಪ್ರಯತ್ನಿಸಲಾಯಿತು. ಅವರ ಆರೋಗ್ಯವು ಚಿಂತಾಜನಕವಾಗಿದೆ. ಬಂಗಾಲದಲ್ಲಿ ಕಳೆದ ತಿಂಗಳಷ್ಟೇ ನಗರಪಾಲಿಕೆಯ ಚುನಾವಣೆ ನಡೆಯಿತು. ಅನಂತರ ಈಗ ಈ ಘಟನೆ ನಡೆಯುತ್ತಿದೆ.

೩ ದಿನಗಳ ಹಿಂದೆಯಷ್ಟೇ ರಾಜ್ಯದಲ್ಲಿ ಬೀರಭೂಮನಲ್ಲಿ ತೃಣಮೂಲ ಕಾಂಗ್ರೆಸನ ಪಂಚಾಯತ ಸದಸ್ಯ ಭಾದೂ ಶೇಖರವರ ಮೇಲೆ ಬಾಂಬ ಎಸೆದು ಅವರನ್ನು ಕೊಲೆ ಮಾಡಿದ ಬಳಿಕ ಕೆಲವು ಮನೆಗಳನ್ನು ಸುಡಲಾಯಿತು. ಅದರಲ್ಲಿ ೮ ಜನರು ಮೃತಪಟ್ಟರು.