ಅಸ್ಸಾಂನ ಸ್ಥಿತಿಯು ಕಾಶ್ಮೀರದಂತೆ ಆಗುವುದಿಲ್ಲ ಎಂದು ಮುಸಲ್ಮಾನರು ನಮಗೆ ಹೇಳಬೇಕು ! ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ ವಿಧಾನಸಭೆಯಲ್ಲಿ ಮನವಿ

ರಾಜ್ಯದಲ್ಲಿ ಶೇ. ೩೫ ರಷ್ಟು ಮುಸಲ್ಮಾನರು ಇರುವುದರಿಂದ ಅವರನ್ನು ಅಲ್ಪಸಂಖ್ಯಾತ’ರೆಂದು ಹೇಳಲಾಗುವುದಿಲ್ಲ ಎಂದು ಹೇಳಿದರು !

ಹಿಂದೂಗಳ ರಾಜ್ಯದಲ್ಲಿ ಒಂದು ರಾಜ್ಯದ ಹಿಂದು ಮುಖ್ಯಮಂತ್ರಿಗೆ ಹೀಗೆ ಹೇಳಬೇಕಾಗುತ್ತದೆ, ಇದು ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ ! ಈ ಸ್ಥಿತಿ ಹಿಂದು ರಾಷ್ಟ್ರದ ಸ್ಥಾಪನೆ ಮಾಡುವುದು ಎಷ್ಟು ಅವಶ್ಯಕವಾಗಿದೆ, ಎಂದು ಸ್ಪಷ್ಟವಾಗುತ್ತದೆ ! – ಸಂಪಾದಕರು

ಗೌಹತಿ (ಅಸ್ಸಾಂ) – ಅಸ್ಸಾಂನ ಒಟ್ಟು ಜನಸಂಖ್ಯೆಯ ಪೈಕಿ ಶೇ. ೩೫ ಜನಸಂಖ್ಯೆಯು ಮುಸಲ್ಮಾನರಿರುವುದರಿಂದ ಅವರನ್ನು ಇನ್ನು ಮುಂದೆ ರಾಜ್ಯದಲ್ಲಿ ಅಲ್ಪಸಂಖ್ಯಾತರೆಂದು ಗ್ರಹಿಸಲಾಗುವುದಿಲ್ಲ, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾರವರು ವಿಧಾನಸಭೆಯಲ್ಲಿ ಹೇಳಿದರು. ೧೯೯೦ರಲ್ಲಿ ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆಯಾಯಿತು ಅದಕ್ಕೆ ಮುಸಲ್ಮಾನರೇ ಕಾರಣಕರ್ತರಾಗಿದ್ದಾರೆ, ಎಂದು ಮುಖ್ಯಮಂತ್ರಿ ಸರಮಾರವರು ಹೇಳಿದರು. ದ ಕಶ್ಮೀರಿ ಫೈಲ್ಸ್ ಈ ಚಲನಚಿತ್ರದಲ್ಲಿ ತೋರಿಸಿರುವಂತೆ ಅಸ್ಸಾಂನ ಅವಸ್ಥೆಯು ಆಗಬಹುದು, ಎಂದು ಇತರ ಸಮುದಾಯದವರಿಗೆ ಹೆದರಿಕೆಯಾಗುತ್ತಿದೆ ಅದನ್ನು ದೂರಗೊಳಿಸುವ ಹೊಣೆ ಮುಸಲ್ಮಾನರದ್ದಾಗಿದೆ, ಎಂದು ಮನವಿಯನ್ನೂ ಮಾಡಿದರು.

ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ ತಮ್ಮ ಮಾತನ್ನು ಮುಂದುವರಿಸುತ್ತಾ,

೧. ಯಾವ ರೀತಿ ಕಾಶ್ಮೀರಿ ಹಿಂದೂಗಳದ್ದು ಆಯಿತು ಹಾಗೆಯೇ ಅಸ್ಸಾಂನಲ್ಲಿಯ ಜನರ ಬಗ್ಗೆ ಆಗಬಹುದೇ ? ಎಂದು ನನಗೆ ಅನೇಕ ಜನರು ಕೇಳುತ್ತಾರೆ. ೧೦ ವರ್ಷಗಳ ನಂತರ ದ ಕಾಶ್ಮೀರಿ ಫೈಲ್ಸ್ನಲ್ಲಿ ತೋರಿಸಿದಂತೆ ಅಸ್ಸಾಂನಲ್ಲಿ ಇದೇ ರೀತಿಯ ಪರಿಸ್ಥಿತಿಯು ಇರಬಹುದೇ ? ನಮ್ಮ ಹೆದರಿಕೆಯನ್ನು ತೆಗೆಯುವುದು ಇದು ಮುಸಲ್ಮಾನರ ಕರ್ತವ್ಯವಾಗಿದೆ. ಮುಸಲ್ಮಾನರು ಬಹುಸಂಖ್ಯಾತರಿರುವಂತೆ ನಡೆದುಕೊಳ್ಳಬೇಕು ಹಾಗೂ ಇಲ್ಲಿ ನಮಗೆ ಕಾಶ್ಮೀರದ ಪುನರಾವೃತ್ತಿ ಆಗಲಿಕ್ಕಿಲ್ಲವೆಂದು ಬರವಸೆಯುಂಟು ಮಾಡಬೇಕು.

೨. ಇಂದು ಮುಸಲ್ಮಾನ ಸಮಾಜದ ಜನರು ವಿರೋಧ ಪಕ್ಷದ ಮುಖಂಡರಾಗಿದ್ದಾರೆ, ಶಾಸಕರಿದ್ದಾರೆ. ಅವರಿಗೆ ಅಧಿಕಾರದಲ್ಲಿ ಸಮಾನ ಹಕ್ಕು ಸಿಗುತ್ತಿದೆ ಆದ್ದರಿಂದಲೇ ಆದಿವಾಸಿ ಜನರ ಹಕ್ಕುಗಳ ರಕ್ಷಣೆಯಾಗಬಹುದು ಹಾಗೂ ಅವರ ಅಧಿಕಾರದ ಮೇಲೆ ಬಾದೆಯುಂಟಾಗದಂತೆ ಹೊಣೆ ಅವರು ತೆಗೆದುಕೊಳ್ಳಬೇಕು.

೩. ಆದಿವಾಸಿಗಳಿಗೆ ಮೀಸಲಿಟ್ಟ ಭೂಮಿಯ ಮೇಲೆ ಅತಿಕ್ರಮಣ ಮಾಡುವ ಯಾವುದೇ ಆವಶ್ಯಕತೆಯಿಲ್ಲ. ಒಂದು ವೇಳೆ ಬೋರಾ ಹಾಗೂ ಕಲಿತಾ (ಅಸ್ಸಾಂನ ಜನ) ರ ಭೂಮಿಯ ಮೇಲೆ ನೆಲೆಸದಿದ್ದರೆ, ಇಸ್ಲಾಂ ಹಾಗೂ ರಹಮಾನ (ಮುಸಲ್ಮಾನ)ರು ಸಹ ಈ ಭೂಮಿಯಲ್ಲಿ ವಾಸಿಸಬಾರದು.

೪. ಅಸ್ಸಾಂನ ಜನರು ಭಯದ ನೆರಳಿನಲ್ಲಿ ಬದುಕುತ್ತಿದ್ದಾರೆ ನಮ್ಮ ಸಂಸ್ಕೃತಿ ಹಾಗೂ ಆಚಾರಗಳ ಮೇಲೆ ಆಕ್ರಮಣವಾಗಬಹುದೇ, ಎಂದು ಅವರಿಗೆ ಹೆದರಿಕೆ ಆಗುತ್ತಿದೆ. ಉದಾರತೆಯು ದ್ವಿತಿಯ ಆಗಿರಬೇಕು. ಮುಸಲ್ಮಾನರು ಸಂಸ್ಕಾರಿಗಳು ಹಾಗೂ ಕ್ಷತ್ರಿಯ ಸಂಸ್ಕೃತಿಗಳ ಸಂರಕ್ಷಣೆಯ ವಿಷಯದಲ್ಲಿ ಮಾತನಾಡಿದರೆ, ಉದಾರತೆಯು ಉಳಿಯಬಹುದು. ೧೦ ವರ್ಷಗಳ ಹಿಂದೆ ನಾವು ಅಲ್ಪಸಂಖ್ಯಾತರಾಗಿರಲಿಲ್ಲ ಆದರೆ ಇಂದು ಆಗಿದ್ದೇವೆ ಎಂದು ಹೇಳಿದರು.