ಕರ್ನಾಟಕದಲ್ಲಿ ನಡೆಯುತ್ತಿರುವ ಹಜಾಬ್ ವಿವಾದದ ಪ್ರಕರಣ
ನವದೆಹಲಿ – ಸಮಾಜವನ್ನೂ ಒಗ್ಗೂಡಿಸುವದರ ಕಡೆ ಗಮನ ಕೊಡುವದರ ಬದಲು ದುರಾದೃಷ್ಟಕರದಿಂದ ‘ಅದರ ವಿಭಜನೆ ಹೇಗೆ ಆಗುವುದು’, ಎಂಬ ಕಡೆ ಗಮನ ಕೊಡಲಾಗುತ್ತಿದೆ. ಮಣ್ಣಿನಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಸಾಮರ್ಥ್ಯವಿದೆ. ನಮ್ಮ ನಿರ್ಮಾಣ ಕೂಡ ಮಣ್ಣಿನಿಂದ ಆಗಿರುವುದು ಮತ್ತು ಅಂತ್ಯ ಕೂಡ ಮಣ್ಣಿನಲ್ಲಿ ಆಗುವುದು. ಚಿಕ್ಕ ವಯಸ್ಸಿನಲ್ಲಿ ಮುಕ್ತವಾಗಿ ಬೆಳೆಸುವ ವಾತಾವರಣ ನಿರ್ಮಾಣವಾಗಬೇಕು.
(ಸೌಜನ್ಯ : Sadhguru)
ಪರಸ್ಪರರ ಮನಸ್ಸಿನಲ್ಲಿ ದ್ವೇಷ ಭಾವ ನಿರ್ಮಾಣವಾಗುವ ವಿಷ ಮಕ್ಕಳ ಮನಸ್ಸಿನಲ್ಲಿ ತುಂಬುವುದು ಅಯೋಗ್ಯವಾಗಿದೆ. ಪ್ರತಿಯೊಂದು ಹೊಸ ಪೀಳಿಗೆಯ ಮೇಲೆ ಹಳೆತಲೆಮಾರಿನ ವಿಚಾರ ಮತ್ತು ಪೂರ್ವಾಗ್ರಹ ಹೇಳಬಾರದು, ಎಂದು ‘ಈಶಾ ಫೌಂಡೇಶನ್’ ಈ ಆಧ್ಯಾತ್ಮಿಕ ಸಂಸ್ಥೆ ಸಂಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ್ ಇವರು ಕರ್ನಾಟಕದಲ್ಲಿ ನಡೆಯುತ್ತಿರುವ ‘ಹಿಜಾಬ್’ ವಿವಾದದ ಬಗ್ಗೆ ಒಂದು ವಾರ್ತಾ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ವ್ಯಕ್ತಪಡಿಸಿದ್ದಾರೆ.