ಕರ್ಣಾವತಿ ಬಾಂಬ್ ಸ್ಫೋಟ ಆರೋಪಿಗೂ ಸಮಾಜವಾದಿ ಪಕ್ಷದ ನಂಟು !

ಭಾಜಪಾದ ನಾಯಕ ಮತ್ತು ಕೇಂದ್ರ ಸಚಿವ ಅನುರಾಗ ಠಾಕೂರ ಇವರ ಆರೋಪ

ಕೇಂದ್ರ ಸಚಿವರು ಕೇವಲ ಆರೋಪ ಮಾಡದೆ ಕೇಂದ್ರ ಸರಕಾರಕ್ಕೆ ಅದರ ವಿಚಾರಣೆ ನಡೆಸಲು ಹೇಳಿ ಅದರ ಬೆಂಬತ್ತುವಿಕೆ ಮಾಡಬೇಕು, ಎಂದು ಜನರಿಗೆ ಅನಿಸುತ್ತದೆ ! – ಸಂಪಾದಕರು

ಕೇಂದ್ರ ಸಚಿವ ಅನುರಾಗ ಠಾಕೂರ ಮತ್ತು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ ಯಾದವ

ನವದೆಹಲಿ – ಕೇಂದ್ರ ಸಚಿವ ಅನುರಾಗ ಠಾಕೂರ್ ಇವರು ಇಲ್ಲಿಯ ಭಾಜಪದ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠೀ ನಡೆಸಿ ಒಂದು ಛಾಯಾಚಿತ್ರ ತೋರಿಸಿದರು. ಇದರಲ್ಲಿ 2008 ರಲ್ಲಿ ಕರ್ಣಾವತಿ (ಗುಜರಾತ) ಇಲ್ಲಿ ಸರಣಿ ಬಾಂಬ್ ಸ್ಫೋಟದ ಪ್ರಕರಣದ ಆರೋಪಿಯ ತಂದೆ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ ಯಾದವ ಇವರ ಜೊತೆಗೆ ಕಾಣುತ್ತಿದ್ದಾರೆ. ಇದರಿಂದ ಠಾಕೂರ ಅವರು, `ಭಾಜಪ ಯಾವಾಗಲೂ ಭಯೋತ್ಪಾದನೆಗೆ ಬಲವಾಗಿ ವಿರೋಧ ವ್ಯಕ್ತಪಡಿಸಿದೆ, ಆದರೆ ಸಮಾಜವಾದಿ ಪಕ್ಷ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವವರ ಪರ ನಿಂತಿದೆ. ಕರ್ಣಾವತಿ ಬಾಂಬ್ ಸ್ಫೋಟದ ನೇರ ಸಂಬಂಧ ಈ ಪಕ್ಷದ ಉತ್ತರಪ್ರದೇಶದ ನಾಯಕರ ಜೊತೆಗೆ ಇತ್ತು’, ಎಂದು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಅಖಿಲೇಶ ಇವರು ಉತ್ತರಿಸಬೇಕು ಎಂದು ಉತ್ತಾಯಿಸಿದ್ದಾರೆ. ಕರ್ಣಾವತಿ ಬಾಂಬ್ ಸ್ಫೋಟದ ಪ್ರಕರಣದಲ್ಲಿ ನ್ಯಾಯಾಲಯವು ಇಂಡಿಯನ್ ಮುಜಾಹಿದ್ದೀನ್‍ನ 38 ಉಗ್ರರಿಗೆ ಗಲ್ಲು ಶಿಕ್ಷೆ ಹಾಗೂ 11 ಉಗ್ರರಿಗೆ ಜೀವಾವಧಿ ಶಿಕ್ಷೆ ನೀಡಿದೆ. ಈ ಸ್ಫೋಟದಲ್ಲಿ 56 ಕ್ಕೂ ಹೆಚ್ಚು ಜನರ ಸಾವು ಸಂಭವಿಸಿತ್ತು ಹಾಗೂ 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.