ಉಡುಪಿ ಇಲ್ಲಿಯ ಇನ್ನೊಂದು ಮಹಾವಿದ್ಯಾಲಯದಲ್ಲಿ ಹಿಜಾಬ್ ಮೇಲೆ ನಿಷೇಧ

ಉಡುಪಿ – ಇಲ್ಲಿಯ ಇನ್ನೊಂದು ಮಹಾವಿದ್ಯಾಲಯದಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಂಡು ತರಗತಿಯಲ್ಲಿ ಪ್ರವೇಶಿಸಲು ನಿಷೇಧಿಸಲಾಗಿದೆ. ಈ ಮೊದಲು ಇಲ್ಲಿಯ ಕುಂದಾಪುರದ ಸರಕಾರಿ ಮಹಾವಿದ್ಯಾಲಯದ ಮುಸಲ್ಮಾನ್ ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಂಡು ಬರುಲು ಪ್ರಯತ್ನಿಸಿದಾಗ ಅವರನ್ನು ನಿಷೇಧಿಸಲಾಗಿತ್ತು. ಅದರ ನಂತರ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿ ಮಹಾವಿದ್ಯಾಲಯವು ಪ್ರವೇಶಿಸಿದ್ದರು.

ಕಳೆದ 20 ದಿನಗಳಿಂದ ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಂಡು ಬರುತ್ತಿದ್ದಾರೆ ! – ಶಿಕ್ಷಣ ಸಚಿವ ಬಿ.ಸಿ. ನಾಗೇಶ

ಹೀಗಿದ್ದರೆ, ಇದರ ಹಿಂದೆ ಯಾವ ಷಡ್ಯಂತ್ರ ಇದೆ, ಇದನ್ನು ಸರಕಾರ ಕಂಡುಹಿಡಿದು ಸಂಬಂಧಪಟ್ಟವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು ! – ಸಂಪಾದಕರು

ರಾಜ್ಯದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್

ಈ ವಿಷಯವಾಗಿ ರಾಜ್ಯದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಇವರು, ಈ ಮೊದಲು ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಂಡು ಬರುತ್ತಿರಲಿಲ್ಲ; ಆದರೆ ಕಳೆದ 20 ದಿನದಿಂದ ಅವರು ಹಿಜಾಬ್ ಹಾಕಿಕೊಂಡು ಬರಲು ಪ್ರಾರಂಭಿಸಿದ್ದಾರೆ . ಈ ಬಗ್ಗೆ ನಾವು ಸಮಿತಿಯೊಂದನ್ನು ಸ್ಥಾಪನೆ ಮಾಡುತ್ತಿದ್ದೇವೆ. ಈ ಸಮಿತಿ ಮುಂದಿನ ಶೈಕ್ಷಣಿಕ ವರ್ಷದ ವೇಳೆಗೆ ಅಂತಿಮ ವರದಿ ಸಲ್ಲಿಸಲಿದ್ದು, ಮತ್ತು ಅದರ ನಂತರ ನಾವು ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಶಿಕ್ಷಣವನ್ನು ಧರ್ಮದಿಂದ ದೂರ ಇಡಬೇಕು ! – ಗೃಹ ಸಚಿವ ಅರಗ ಜ್ಞಾನೆಂದ್ರ

ಗೃಹ ಸಚಿವ ಅರಗ ಜ್ಞಾನೆಂದ್ರ

ಕರ್ನಾಟಕದ ಗೃಹ ಸಚಿವ ಅರಗ ಜ್ಞಾನೆಂದ್ರ ಇವರು, ಯಾವುದೇ ಶಿಕ್ಷಣ ಸಂಸ್ಥೆ ಶಿಕ್ಷಣವನ್ನು ಧರ್ಮದಿಂದ ದೂರ ಇಡಬೇಕು. ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿನಿ ಹಿಜಾಬ್ ಅಥವಾ ಕೇಸರಿ ಶಾಲು ಹಾಖಿಕೊಂಡು ಬರಬಾರದು. ಅವರು ಅವರವರ ಧರ್ಮದ ಪಾಲನೆ ಮಾಡಲು ಶಾಲೆಗೆ ಬರಬಾರದು. ಶಾಲೆ ಇದು ಜ್ಞಾನ ಮಂದಿರವಾಗಿದ್ದು ಇಲ್ಲಿ ಶಿಕ್ಷಣ ಪಡೆಯುವ ಉದ್ದೇಶದಿಂದ ಬರಬೇಕು ಎಂದು ಹೇಳಿದರು.