ಕರ್ನಾಟಕದ ಒಂದು ಸರಕಾರಿ ಮಹಾವಿದ್ಯಾಲಯದಲ್ಲಿ ಹಿಜಾಬ್ (ತಲೆಯ ಮೇಲೆ ಹಾಕಿಕೊಳ್ಳುವ ಬಟ್ಟೆ) ಹಾಕಿಕೊಳ್ಳುವ ಅನುಮತಿ ಇರುವುದರಿಂದ ಹಿಂದೂ ವಿದ್ಯಾರ್ಥಿಗಳು ಕೊರಳಿನಲ್ಲಿ ಕೇಸರಿ ವಸ್ತ್ರವನ್ನು ಹಾಕಿಕೊಳ್ಳುವರು

ಬೆಂಗಳೂರು – ಕೊಪ್ಪ ಜಿಲ್ಲೆಯಲ್ಲಿ ಬಾಳಗಡಿ ಗ್ರಾಮದಲ್ಲಿರುವ ಸರಕಾರಿ ಮಹಾವಿದ್ಯಾಲಯದ ಮುಸಲ್ಮಾನ ವಿದ್ಯಾರ್ಥಿನಿಯರಿಗೆ ಹಿಜಾಬ್ ಹಾಕಿಕೊಂಡು ಕುಳಿತುಕೊಳ್ಳುವ ಅನುಮತಿ ನೀಡಿದರೆ ಹಿಂದೂ ವಿದ್ಯಾರ್ಥಿಗಳು ಕೊರಳಿನಲ್ಲಿ ಕೇಸರಿ ಬಟ್ಟೆ ಹಾಕಿಕೊಂಡು ಕುಳಿತುಕೊಳ್ಳಲು ಯಾವುದೇ ಆಕ್ಷೇಪ ಇರಬಾರದು, ಎಂಬ ಅಂಶವನ್ನು ವಿದ್ಯಾರ್ಥಿಗಳು ಕೇಳಿದ್ದಾರೆ. ‘ಇಂಡಿಯಾ ಟುಡೆ’ ನಿಯತಕಾಲಿಕೆಯಲ್ಲಿ ಈ ವಿಷಯದ ವಾರ್ತೆಯನ್ನು ನೀಡಲಾಗಿದೆ. ಕೆಲವು ವಿದ್ಯಾರ್ಥಿಗಳು ಈ ಮೊದಲು ವಿದ್ಯಾರ್ಥಿನಿಯರನ್ನು ಹಿಜಾಬ್ ಹಾಕಿಕೊಂಡು ವರ್ಗದಲ್ಲಿ ಕುಳಿತುಕೊಳ್ಳಲು ನಿರಾಕರಿಸಲಾಗಿತ್ತು. ಆದರೆ ಈಗ ಈ ಅಂಶದ ಮೇಲೆ ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಚರ್ಚೆ ನಡೆಯಲಿದೆ. ೩ ವರ್ಷಗಳ ಹಿಂದೆ ಇದೇ ಅಂಶವನ್ನು ಕೇಳಿದಾಗ, ಈ ಪರಿಸ್ಥಿತಿ ನಿಭಾಯಿಸುವುದರಲ್ಲಿ ಸರಕಾರ ಹಸ್ತಕ್ಷೇಪ ಮಾಡಿತ್ತು.