ಭಾರತದ ಮೇಲೆ ಒಟ್ಟು 147 ಲಕ್ಷ ಕೋಟಿ ರೂಪಾಯಿಗಳ ಸಾಲ !
|
ನವ ದೆಹಲಿ – 2021 ರಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನ ಮೇಲೆ ವಿದೇಶಿ ಸಾಲವು ಹೆಚ್ಚಾಗಿ 32 ಸಾವಿರ ರೂಪಾಯಿಗಳು ಆಗಿವೆ. 2021ರಲ್ಲಿ ಭಾರತದ ಮೇಲೆ 43 ಲಕ್ಷ 32 ಸಾವಿರ ಕೋಟಿಗಳ ವಿದೇಶಿ ಸಾಲವಿದೆ. ಈ ರೀತಿಯಲ್ಲಿ ಒಟ್ಟು ಸಾಲವು 147 ಲಕ್ಷ ಕೋಟಿ ರೂಪಾಯಿಗಳಷ್ಟು ಆಗಿದೆ.
1. ಸ್ವಾತಂತ್ರ್ಯಾನಂತರ 1950ರಲ್ಲಿ ಭಾರತವು ಸುಮಾರು 380 ಕೋಟಿ ರೂಪಾಯಿಗಳಷ್ಟು ವಿದೇಶಿ ಸಾಲವನ್ನು ಪಡೆದಿತ್ತು. ಅಂದಿನಿಂದ ಇಲ್ಲಿಯವರೆಗೆ 73 ವರ್ಷಗಳಲ್ಲಿ ಅನೇಕ ಸರಕಾರಗಳು ಬಂದುಹೋದವು; ಆದರೆ ಪ್ರತಿಯೊಂದು ಸರಕಾರದ ಅಡಳಿತಾವಧಿಯಲ್ಲಿ ದೇಶದ ಮೇಲಿನ ವಿದೇಶಿ ಸಾಲ ಹೆಚ್ಚುತ್ತಲೇ ಹೋಯಿತು.
2. ನವೆಂಬರ್ 21, 2021 ರಂದು ಭಾರತವು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕಿನಿಂದ 2 ಸಾವಿರದ 645 ಕೋಟಿ ರೂಪಾಯಿಗಳ ಸಾಲ ಪಡೆದಿದೆ. ತಜ್ಞರ ಅನುಸಾರ ಸರಕಾರವು ಈ ವರ್ಷ 12 ಲಕ್ಷ ಕೋಟಿ ರೂಪಾಯಿಗಳ ಸಾಲ ಪಡೆಯುವ ಯೋಜನೆಯನ್ನು ನಿರ್ಮಿಸುತ್ತಿದೆ.
3. ಕೇಂದ್ರ ಸರಕಾರವು ಸಾಲವಾಗಿ ಪಡೆದಿರುವ ಹಣವನ್ನು ಬಡ್ಡಿ ನೀಡುವುದು, ಕೇಂದ್ರೀಯ ಯೋಜನೆಗಳಲ್ಲಿ, ವಿತ್ತ ಆಯೋಗದ ಅನುದಾನಗಳಿಗಾಗಿ ಮತ್ತು ಅರ್ಥ ಸಂಕಲ್ಪದಲ್ಲಿ ಅನುದಾನ ನೀಡಲು ಬಳಸುತ್ತದೆ.
4. ಕಳೆದ 7 ವರ್ಷಗಳಲ್ಲಿ ದೇಶದ ಸಾಲವು ಕಡಿಮೆಯಾಗುವ ಬದಲು ಹೆಚ್ಚಾಗಿದೆ. 2014 ರಿಂದ ಇಲ್ಲಿಯವರೆಗೆ ಕೇಂದ್ರ ಸರಕಾರವು ವಿದೇಶದಿಂದ 10 ಲಕ್ಷ ಕೋಟಿ ರೂಪಾಯಿಗಳ ಸಾಲವನ್ನು ಪಡೆದಿದೆ.
5. 2006 ರಿಂದ 2013ರ ವರೆಗಿನ ಏಳು ವರ್ಷಗಳಲ್ಲಿ ಕಾಂಗ್ರೆಸ್ಸಿನ ಆಗಿನ ಸಂಯುಕ್ತ ಸರಕಾರವು ಸುಮಾರು 21 ಲಕ್ಷ ಕೋಟಿ ರೂಪಾಯಿಗಳ ವಿದೇಶಿ ಸಾಲವನ್ನು ಪಡೆದಿದೆ. 2006ರಲ್ಲಿ ದೇಶದ ಮೇಲೆ 10 ಲಕ್ಷ ಕೋಟಿ ರೂಪಾಯಿಗಳ ವಿದೇಶಿ ಸಾಲವಿತ್ತು. ಅದು 2013ರ ವರೆಗೆ 31 ಲಕ್ಷ ಕೋಟಿ ರೂಪಾಯಿಗಳಷ್ಟು ಆಯಿತು. ಸದ್ಯದ ಭಾಜಪ ಸರಕಾರವು ಕಳೆದ 7 ವರ್ಷಗಳಲ್ಲಿ 12 ಲಕ್ಷ ಕೋಟಿ ರೂಪಾಯಿಗಳಷ್ಟು ಹೆಚ್ಚಿಸಿದೆ. ಆದರೆ ಒಂದು ಉತ್ತಮ ಸಂಗತಿಯೆಂದರೆ ಕಾಂಗ್ರೆಸ್ಸಿನ ಆಗಿನ ಸರಕಾರದ ತುಲನೆಯಲ್ಲಿ 7 ವರ್ಷಗಳಲ್ಲಿ ಕೊರೋನಾ ಮಹಾಮಾರಿ ಇರುವಾಗಲೂ ಕಡಿಮೆ ಪ್ರಮಾಣದಲ್ಲಿ ವಿದೇಶಿ ಸಾಲ ಪಡೆಯಲಾಗಿದೆ.
6. 2014ರಲ್ಲಿ ದೇಶದ ಜನಸಂಖ್ಯೆಯು 129 ಕೋಟಿಯಷ್ಟಿತ್ತು. ಇಂತಹ ಸಮಯದಲ್ಲಿ 2014ರಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಸುಮಾರು 26 ಸಾವಿರ ರೂಪಾಯಿಗಳ ವಿದೇಶಿ ಸಾಲವಿತ್ತು. ಅಂದರೆ ಈ 7 ವರ್ಷಗಳ ಕಾಲದಲ್ಲಿ ಪ್ರತಿಯೊಬ್ಬರ ಮೇಲೆ 6 ಸಾವಿರ ರೂಪಾಯಿಗಳು ಸಾಲ ಹೆಚ್ಚಾಗಿದೆ.
7. 2020ರಲ್ಲಿ ಭಾರತದ ಮೇಲೆ ಒಟ್ಟು 147 ಲಕ್ಷ ಕೋಟಿ ರೂಪಾಯಿಗಳ ಸಾಲವಿತ್ತು. ಇದರಲ್ಲಿ ವಿದೇಶಿ ಸಾಲವು 43 ಲಕ್ಷ ಕೋಟಿ ಇದೆ. ಹೆಚ್ಚಿನಂಶ ದೇಶಗಳ ಎಲ್ಲ ರಾಷ್ಟ್ರೀಯ ಉತ್ಪನ್ನಗಳ ಶೇ. 40-50 ಭಾಗದ ಮೇಲೆ ಸಾಲವಿರುತ್ತದೆ. ಆದರೆ ಭಾರತದ ಮೇಲೆ ಇದರ ಪ್ರಮಾಣವು ಶೇ. 89ರಷ್ಟು ಇದೆ. ಅಮೇರಿಕಾ, ಜಪಾನ್, ಬ್ರಾಜಿಲಿನೊಂದಿಗೆ ಜಗತ್ತಿನಲ್ಲಿನ 5 ದೇಶಗಳ ಮೇಲೆ ಸಂಪೂರ್ಣ ರಾಷ್ಟ್ರೀಯ ಉತ್ಪನ್ನಗಳ ತುಲನೆಯಲ್ಲಿ ಹೆಚ್ಚು ಸಾಲವಿದೆ. ಜಪಾನಿನಲ್ಲಿ ಸಂಪೂರ್ಣ ರಾಷ್ಟ್ರೀಯ ಉತ್ಪನ್ನದ ತುಲನೆಯಲ್ಲಿ ಶೇ. 254ರಷ್ಟು, ಅಮೆರಿಕದ ಮೇಲೆ ಶೇ. 133ರಷ್ಟು, ಫ್ರಾನ್ಸ್ ಶೇ. 115ರಷ್ಟು, ಬ್ರಿಟನ್ ಶೇ. 104 ರಷ್ಟು, ಬ್ರಾಜಿಲ್ ಮೇಲೆ ಶೇ. 91ರಷ್ಟು ಸಾಲವಿದೆ.