ಆದಿವಾಸಿಗಳನ್ನು ಮತಾಂತರದಿಂದ ರಕ್ಷಿಸುವ ಸ್ವಾಮಿ ಅಸೀಮಾನಂದರ ಆರೋಪ

ಕಾಂಗ್ರೆಸ್ ‘ಹಿಂದೂ ಭಯೋತ್ಪಾದನೆ’ಯ ಷಡ್ಯಂತ್ರವನ್ನು ರಚಿಸಿ ಸುಳ್ಳು ಖಟ್ಲೆಗಳಲ್ಲಿ ಸಿಲುಕಿಸಿದೆ!

ಪಂಢರಾಪುರ (ಮಹಾರಾಷ್ಟ್ರ) – ಹಿಂದೂ ಆದಿವಾಸಿಗಳು, ಹಿಂದುಳಿದ ಜಾತಿ ಮತ್ತು ಪಂಗಡದವರು ಮತಾಂತರವಾಗುವುದನ್ನು ನಾವು ತಡೆದಿದ್ದೇವೆ. ಅವರು ಹಿಂದೂ ಧರ್ಮದಲ್ಲಿ ಉಳಿಯುವಂತೆ ಪ್ರಯತ್ನಿಸಿದ್ದೇವೆ. ‘ಹಿಂದೂ ಭಯೋತ್ಪಾದನೆ’ ಎಂಬ ಯಾವುದೇ ಸಂಗತಿಯು ಇಲ್ಲದಿರುವಾಗಲೂ ಸುಳ್ಳು ಷಡ್ಯಂತ್ರಗಳನ್ನು ರಚಿಸಿ ನಮ್ಮನ್ನು ವಿವಿಧ ಪ್ರಕರಣಗಳಲ್ಲಿ ಸಿಲುಕಿಸಿ ಆಗಿನ ಸರಕಾರವು ಹಿಂದೂ ಸಮಾಜದ ಮೇಲೆ ಅನ್ಯಾಯ ಮಾಡಿತ್ತು. ಆದರೆ ನಾವು ಎಲ್ಲಾ ನ್ಯಾಯಾಲಯಗಳಲ್ಲಿ ನಿರಪರಾಧಿಯೆಂದು ಬಿಡುಗಡೆಯಾದವು. ವನವಾಸಿ ಕಲ್ಯಾಣ ಆಶ್ರಮದ ಮಧ್ಯಮದಿಂದ ನಾವು ಜನಸೇವೆ ಮಾಡುತ್ತಿದ್ದೇವೆ. ಅವರನ್ನು ಮುಖ್ಯ ಪ್ರವಾಹಕ್ಕೆ ತರಲು ಪ್ರಯತ್ನಿಸುತ್ತಿದ್ದೇವೆ ಎಂದು ಸ್ವಾಮಿ ಅಸೀಮಾನಂದರವರು ಉದ್ಗಾರ ಮಾಡಿದರು. ಅವರು ಪಂಢರಾಪುರ ವನವಾಸಿ ಕಲ್ಯಾಣ ಆಶ್ರಮದ ಕಾರ್ಯಕ್ರಮಕ್ಕಾಗಿ ಬಂದಿದ್ದರು. ಈ ಸಮಯದಲ್ಲಿ ಅವರು ಹಿಂದೂ ಮಹಾಸಭಾ ಭವನಕ್ಕೆ ಭೇಟಿ ನೀಡಿ ಮೇಲಿನಂತೆ ಹೇಳಿದರು.

ಈ ಸಂದರ್ಭದಲ್ಲಿ ಹಿಂದೂ ಮಹಾಸಭಾದ ನೇತಾರರಾದ ಅಭಯಸಿಂಹ ಕುಲಕರರ್ಣಿ ಇಚಗಾವಕರ, ವಿವೇಕ ಬೇಣಾರೆ, ಬಾಳಾಸಾಹೇಬ ಡಿಂಗರೆ, ಮಹೇಶ ಖಿಸ್ತೆ, ವನವಾಸಿ ಕಲ್ಯಾಣ ಆಶ್ರಮದ ಸುರೇಶ ಕುಲಕರ್ಣಿ, ವಿಠ್ಠಲ ಬಡವೆ, ಮಹಂತ ಮೋಹನ ಮಹಾರಾಜ ನೇರ್ಲೇಕರರವರೊಂದಿಗೆ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮೊದಲಿಗೆ ಅಸೀಮಾನಂದರು ಸ್ವಾತಂತ್ರ್ಯವೀರ ಸಾವರಕರ ಮತ್ತು ಕ್ರಾಂತಿವೀರ ವಸಂತ ಬಾಬಾಜಿ ಬಡವೆಯವರ ಪ್ರತಿಮೆಯ ಪೂಜೆಯನ್ನು ಮಾಡಿದರು. ಅಸೀಮಾನಂದರು ಮುಂದುವರೆದು ‘ಈ ದೇಶದಲ್ಲಿನ ಕೆಲವು ನಿಧರ್ಮಿಗಳೇ ಈ ದೇಶದ ನಿಜವಾದ ಸಮಸ್ಯೆಯಾಗಿದ್ದಾರೆ, ಎಂಬುದು ಈಗ ಕ್ರಮೇಣ ಹಿಂದೂಗಳಿಗೆ ತಿಳಿಯುತ್ತಿದೆ. ಈ ವಿಷಯವು ಎಲ್ಲ ಹಿಂದೂಗಳಿಗೆ ತಿಳಿದ ದಿನವೇ ದೇಶದಲ್ಲಿ ಅನೇಕ ಸಮಸ್ಯೆಗಳು ಕೊನೆಗೊಳ್ಳುವುದು’ಎಂದು ಹೇಳಿದರು.