ಹಿಂದೂಗಳಿಗೆ `ಹಿಂದೂ’ವಾಗಿ ಉಳಿಯುವುದಿದ್ದರೆ, ಭಾರತವನ್ನು ಅಖಂಡವಾಗಿ ನಿರ್ಮಿಸಲೇ ಬೇಕು ! ಸರಸಂಘಚಾಲಕ ಡಾ. ಮೋಹನ ಭಾಗವತ

ರಾಷ್ಟ್ರೀಯ ಸರಸಂಘಚಾಲಕ ಡಾ. ಮೋಹನ ಭಾಗವತ

ಗ್ವಾಲಿಯರ್ (ಮಧ್ಯಪ್ರದೇಶ) – ಭಾರತವು `ಭಾರತ’ವೆಂದು ಉಳಿಯಬೇಕಾದರೆ, ಭಾರತ `ಹಿಂದೂ’ ಆಗಿಯೇ ಉಳಿಯಬೇಕು. ಅದೇ ರೀತಿ ಹಿಂದೂಗಳಿಗೆ `ಹಿಂದೂ’ ಎಂದು ಇರುವುದಾದರೆ ಭಾರತವನ್ನು ಅಖಂಡವಾಗಿ ನಿರ್ಮಿಸಬೇಕು, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ ಭಾಗವತ್ ಇವರು ಒಂದು ಕಾರ್ಯಕ್ರಮದಲ್ಲಿ ಹೇಳಿದರು.

ಸರಸಂಘಚಾಲಕರು ತಮ್ಮ ಮಾತನ್ನು ಮುಂದುವರೆಸುತ್ತಾ,

1. ಹಿಂದೂ ಇಲ್ಲದೆ ಭಾರತ ಇಲ್ಲ ಮತ್ತು ಭಾರತ ಇಲ್ಲದೆ ಹಿಂದೂಗಳಿಲ್ಲ. ಭಾರತ ಭಾಗವಾಯಿತು, ಪಾಕಿಸ್ತಾನ ಉದಯವಾಯಿತು; ಕಾರಣ `ನಾವು ಹಿಂದೂ ಆಗಿದ್ದೇವೆ’ ಎಂಬುದನ್ನೇ ಮರೆತಿದ್ದೆವು. ಮೊದಲು ತಮ್ಮನ್ನು ಹಿಂದೂ ತಿಳಿದುಕೊಳ್ಳುವವರ ಶಕ್ತಿ ಕಡಿಮೆಯಾಯಿತು ನಂತರ ಸಂಖ್ಯೆ ಕಡಿಮೆಯಾಯಿತು. ಆದ್ದರಿಂದ ಪಾಕಿಸ್ತಾನ `ಭಾರತ’ ಎಂದು ಉಳಿಯಲಿಲ್ಲ.

2. ಇದು ಹಿಂದುಸ್ತಾನವಾಗಿದೆ ಮತ್ತು ಇಲ್ಲಿಯ ಪರಂಪರೆಯಿಂದ ಹಿಂದೂಗಳೇ ನೆಲೆಸಿದ್ದಾರೆ. ಯಾವ ಯಾವ ಅಂಶಗಳಿಗೆ `ಹಿಂದೂ’ ಎಂದು ಹೇಳಲಾಗುತ್ತದೆ, ಆ ಎಲ್ಲದರ ವಿಕಾಸ ಈ ಭೂಮಿಯಲ್ಲಿ ಆಗಿದೆ. ಭಾರತದ ಎಲ್ಲಾ ವಿಷಯಗಳು ಭಾರತ ಭೂಮಿಯೊಂದಿಗೆ ಜೋಡಿಸಲ್ಪಟ್ಟಿದೆ. ಇದು ಯೋಗಾನುಯೋಗ ಅಲ್ಲ ಎಂದು ಹೇಳಿದರು.