ಕರ್ನಾಟಕ ಸರಕಾರದ ಉದ್ದೇಶಿತ ಮತಾಂತರ ನಿಷೇಧ ಕಾನೂನಿಗೆ ಬೆಂಗಳೂರಿನ ಆರ್ಚ್‍ಬಿಶಪ್‍ಗಳಿಂದ ವಿರೋಧ
* ‘ಕಳೆದ ಹಲವು ದಶಕಗಳಿಂದ ದೇಶದಲ್ಲಿ ಹಿಂದೂಗಳ ಮತಾಂತರವಾಗುತ್ತಿರುವಾಗ ಅರಾಜಕತೆ ಸೃಷ್ಟಿಯಾಗಿದೆ ಮತ್ತು ಅದನ್ನು ತಡೆಯುವ ಸಲುವಾಗಿ ಇಡೀ ದೇಶದಲ್ಲಿ ಇಂತಹ ಕಾನೂನು ಅಗತ್ಯವಿದೆ’, ಎಂಬುದನ್ನು ಸರಕಾರ ಒತ್ತಿಹೇಳಬೇಕು !- ಸಂಪಾದಕರು * ಮತಾಂತರ ನಿಷೇಧ ಕಾನೂನನ್ನು ಜಾರಿಗೊಳಿಸಿದರೆ ಕ್ರೈಸ್ತ ಮಿಷನರಿಗಳ ನಿಜವಾದ ಉದ್ದೇಶ ವಿಫಲವಾಗುವುದರಿಂದ ಈಗ ಅವರು ಕೂಗಾಡುತ್ತಿದ್ದಾರೆ, ಎಂಬುದು ಇದರಿಂದ ಸ್ಪಷ್ಟವಾಗುತ್ತದೆ !- ಸಂಪಾದಕರು |
ಬೆಂಗಳೂರು – ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ರಾಜ್ಯದಲ್ಲಿ ಮತಾಂತರ ನಿಷೇಧ ಕಾನೂನನ್ನು ಜಾರಿಗೊಳಿಸುವುದಾಗಿ ಘೋಷಿಸಿದ್ದರು. ಇದನ್ನು ವಿರೋಧಿಸಿ ಬೆಂಗಳೂರಿನ ಆರ್ಚ್ ಬಿಶಪ್ ರೆವರೆಂಡ ಪೀಟರ್ ಮಚಾಡೊ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಅವರು, ಈ ಕಾನೂನು ತಾರತಮ್ಯದಿಂದ ಕೂಡಿದ್ದು, ಇದರಿಂದ ಅಲ್ಪಸಂಖ್ಯಾತರ ಹಕ್ಕುಗಳ ಕಗ್ಗೊಲೆ ಹಾಗೂ ರಾಜ್ಯದ ಶಾಂತಿ ಮತ್ತು ಐಕ್ಯತೆಗೆ ಧಕ್ಕೆಯಾಗುವುದು. ಇದರಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಬಹುದು. ಇಂತಹ ಕಾನೂನು ತರುವುದು ಅನಗತ್ಯ ಎಂದು ಹೇಳಿದ್ದಾರೆ.
#Bangalore Archbishop writes to CM against anti-conversion law@ralpharakal reports:https://t.co/PizF3fU7vm
— Express Bengaluru (@IEBengaluru) November 19, 2021
1. ಪತ್ರದಲ್ಲಿ ಆರ್ಚ್ ಬಿಶಪ್ ಮಚಾಡೊ ಇವರು ಸಂವಿಧಾನದ ಕಲಮ್ 25 ಮತ್ತು 26 ಅನ್ನು ಉಲ್ಲೇಖಿಸಿ ‘ಈ ಕಲಮ್‍ಗಳಿಂದ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಲಾಗಿದೆ’, ಎಂದು ಹೇಳಿದ್ದಾರೆ.
2. ಆರ್ಚ್ ಬಿಶಪ್ ಮಚಾಡೊ ಇವರು ಕ್ರೈಸ್ತ ಮಿಷನರಿಗಳು ಮತ್ತು ಚರ್ಚ್‍ಗಳ ಸಮೀಕ್ಷೆ ನಡೆಸುವ ಸರಕಾರದ ನಿರ್ಧಾರವನ್ನೂ ವಿರೋಧಿಸಿದ್ದಾರೆ. ಅವರು, ಜನಗಣತಿ ವೇಳೆಯೇ ಸರಕಾರ ಈ ಬಗ್ಗೆ ಮಾಹಿತಿ ಸಂಗ್ರಹಿಸಿರುವುದರಿಂದ ಮತ್ತೊಮ್ಮೆ ಸಂಗ್ರಹಿಸುವ ಅಗತ್ಯವಿಲ್ಲ ಎಂದಿದ್ದಾರೆ.