ಜಾಮನಗರ (ಗುಜರಾತ) ಇಲ್ಲಿಯ ಪಂ. ನಾಥುರಾಮ ಗೋಡ್ಸೆಯವರ ಪುತ್ಥಳಿಯನ್ನು ಧ್ವಂಸಗೈದ ಕಾಂಗ್ರೆಸ್

ಇದನ್ನು ಕಾಂಗ್ರೆಸ್ಸಿನ ಗಾಂಧಿಗಿರಿ ಎನ್ನಬೇಕೇ ? ಸದಾ ಕಾಲ ಗಾಂಧೀಜಿಯವರ ಅಹಿಂಸೆಯ ತತ್ತ್ವಜ್ಞಾನವನ್ನು ಉಚ್ಚರಿಸುವ ಕಾಂಗ್ರೆಸ್ಸಿಗರು ಪ್ರತ್ಯಕ್ಷದಲ್ಲಿ ಹಿಂಸಾಚಾರ ಮನೋವೃತ್ತಿಯವರಾಗಿದ್ದಾರೆ. ಇದು ೧೯೪೮ ರಲ್ಲಿ ಬ್ರಾಹ್ಮಣರನ್ನು ಮತ್ತು ೧೯೮೪ ರಲ್ಲಿ ಸಿಖ್ಕರನ್ನು ಹತ್ಯೆ ಮಾಡಿ ಈ ಮೊದಲೇ ತೋರ್ಪಡಿಸಿದೆ ! ಈಗ ಅದು ಮತ್ತೊಮ್ಮೆ ಸಾಬೀತಾಯಿತು !

ಜಾಮನಗರ (ಗುಜರಾತ) – ಇಲ್ಲಿಯ ಕಾಂಗ್ರೆಸ್ ಅಧ್ಯಕ್ಷ ದೀಭುಗಾ ಜಡೇಜಾ ಇವರು ಮತ್ತು ಇವರ ಕಾರ್ಯಕರ್ತರು ಹಿಂದೂ ಸೇನೆಯವರು ಸ್ಥಾಪಿಸಿದ್ದ ಪಂಡಿತ್ ನಾಥುರಾಮ್ ಗೋಡ್ಸೆ ಇವರ ಪುತ್ಥಳಿಯನ್ನು ಧ್ವಂಸ ಮಾಡಿದ್ದಾರೆ. ಈ ಕಾರ್ಯಕರ್ತರು ಪುತ್ಥಳಿಯ ಸುತ್ತಲೂ ಕೇಸರಿ ಬಟ್ಟೆಯನ್ನು ಸುತ್ತಿ ಅದನ್ನು ಧ್ವಂಸ ಮಾಡಿದ್ದಾರೆ.

ಹಿಂದೂ ಸೇನೆಯು ಆಗಸ್ಟ್‌ನಲ್ಲಿ ಜಾಮನಗರದಲ್ಲಿ ಪಂಡಿತ ನಾಥುರಾಮ್ ಗೋಡ್ಸೆ ಇವರ ಪುತ್ಥಳಿ ಕೂರಿಸುವ ನಿರ್ಣಯವನ್ನು ಘೋಷಿಸಿತ್ತು; ಆದರೆ ಸ್ಥಳೀಯ ಅಧಿಕಾರಿಗಳು ಸ್ಥಳ ನೀಡಲು ನಿರಾಕರಿಸಿದ್ದರಿಂದ ಈ ಸಂಘಟನೆಯು ‘ನಾಥುರಾಮ್ ಗೊಡ್ಸೆ ಅಮರ ರಹೇ’ ಎಂದು ಘೋಷಣೆ ಕೂಗುತ್ತಾ ಹನುಮಾನ ಆಶ್ರಮದಲ್ಲಿ ಸ್ಥಾಪಿಸಿತ್ತು.

  • ಹಿಂದೂ ಮಹಾಸಭಾ ಗ್ವಾಲೇರನಲ್ಲಿ ಪಂಡಿತ ನಾಥುರಾಮ್ ಗೋಡ್ಸೆ ಇವರ ಪುತ್ಥಳಿ ಸ್ಥಾಪಿಸಲಿದೆ

  • ಪುತ್ಥಳಿ ನಿರ್ಮಾಣ ಮಾಡಲು ಗೋಡ್ಸೆ ಇವರನ್ನು ನೇಣಿಗೇರಿಸಿದ್ದ ಅಂಬಾಲಾದಲ್ಲಿಯ ಮಧ್ಯವರ್ತಿ ಕಾರಾಗೃಹದ ಮಣ್ಣನ್ನು ಉಪಯೋಗಿಸಲಿದೆ

ಹರಿಯಾಣಾದ ಅಂಬಾಲಾ ಮಧ್ಯವರ್ತಿ ಕಾರಾಗೃಹದಿಂದ ತಂದಿರುವ ಮಣ್ಣಿನಿಂದ ನಾಥುರಾಮ್ ಗೋಡ್ಸೆ ಅವರ ಪುತ್ಥಳಿ ತಯಾರಿಸಲಾಗುವುದು ಎಂದು ಹಿಂದೂ ಮಹಾಸಭೆಯು ಮಾಹಿತಿ ನೀಡಿದೆ. ಇದೇ ಕಾರಾಗೃಹದಲ್ಲಿ ೧೯೪೯ ಇಸ್ವಿಯಲ್ಲಿ ನಾಥುರಾಮ್ ಗೋಡ್ಸೆ ಮತ್ತು ನಾರಾಯಣ ಆಪಟೆ ಇವರಿಗೆ ಗಲ್ಲು ಶಿಕ್ಷೆ ನೀಡಲಾಗಿತ್ತು. ಈ ಪುತ್ಥಳಿ ಗ್ವಾಲ್ಹೆರ ಇಲ್ಲಿಯ ಹಿಂದೂ ಮಹಾಸಭೆಯ ಕಾರ್ಯಾಲಯದಲ್ಲಿ ಸ್ಥಾಪಿಸಲಾಗುವುದು, ಎಂದು ಹಿಂದೂ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಜಯವೀರ ಭಾರದ್ವಾಜ್ ಇವರು ಹೇಳಿದ್ದಾರೆ.