ಲಕ್ಷದ್ವೀಪದಲ್ಲಿ ಮುಸಲ್ಮಾರ ಜನಸಂಖ್ಯೆ ಶೇ. 98 ರಷ್ಟು ಇದೆ !
ಮೋಹನ ದಾಸ ಗಾಂಧೀಜಿಯವರು ಜೀವನದುದ್ದಕ್ಕೂ ಮುಸಲ್ಮಾನರನ್ನು ಓಲೈಕೆ ಮಾಡಿದರು; ಆದರೂ ಮುಸಲ್ಮಾನರಿಗೆ ಅವರ ಪ್ರತಿಮೆಯನ್ನು ಸ್ಥಾಪಿಸಬೇಕು ಎನಿಸಲಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಮತಕ್ಕಾಗಿ ಮುಸಲ್ಮಾನರ ಓಲೈಕೆ ಮಾಡುವ ರಾಜಕಾರಣಿಗಳಿಗೆ ಇದು ಕಪಾಳಮೋಕ್ಷವಾಗಿದೆ ! – ಸಂಪಾದಕರು
ಕರವತಿ – (ಲಕ್ಷದ್ವೀಪ) – ಮೋಹನದಾಸ ಗಾಂಧಿ ಇವರ 152 ನೇ ಜಯಂತಿ ಪ್ರಯುಕ್ತ ರಕ್ಷಣಾ ಸಚಿವ ರಾಜನಾಥ ಸಿಂಹ ಇವರ ಹಸ್ತದಿಂದ ಗಾಂಧೀಜಿಯ ಪೂರ್ಣಪ್ರಮಾಣದ ಪ್ರತಿಮೆಯ ಅನಾವರಣ ಮಾಡಲಾಯಿತು. ಲಕ್ಷದ್ವೀಪದಲ್ಲಿ ಸ್ಥಾಪಿಸಲಾದ ಮೊದಲ ಗಾಂಧೀಜಿಯವರ ಪ್ರತಿಮೆ ಆಗಿದೆ. ಈ ಮೊದಲು 2010 ರಲ್ಲಿ ಗಾಂಧೀಜಿಯ ಲಕ್ಷದ್ವೀಪದಲ್ಲಿ ಅರ್ಧಪ್ರಮಾಣದ ಪ್ರತಿಮೆಯ ಅನಾವರಣ ಮಾಡಲಾಗಿತ್ತು; ಆದರೆ ಮೂರ್ತಿಪೂಜೆ ಮಾನ್ಯತೆ ಇಲ್ಲದ್ದರಿಂದ ಸ್ಥಳಿಯ ಮತಾಂಧರು ಈ ಪ್ರತಿಮೆಗೆ ವಿರೋಧಿಸಿದ್ದರು. (ಗಾಂಧಿವಾದಿ ಎಂದು ಕೂಗಾಡುವ ಕಾಂಗ್ರೆಸ್ಸಿಗರಿಗೆ ಈ ವಿಷಯದಲ್ಲಿ ಏನು ಹೇಳಲಿಕ್ಕಿದೆ ? ಸಂಪಾದಕರು) ಆದ್ದರಿಂದ ಆಗಿನ ಕಾಂಗ್ರೆಸ್ ಸರಕಾರ ಗಾಂಧಿ ಪ್ರತಿಮೆ ಅನಾವರಣವನ್ನು ರದ್ದುಪಡಿಸಿತ್ತು. (ಕಾಂಗ್ರೆಸ್‍ನವರ ಗಾಂಧಿ ಪ್ರೇಮ ಎಷ್ಟು ತೋರಿಕೆಯದ್ದಾಗಿದೆ ಎಂದು ಇಲ್ಲಿಯೇ ಗೊತ್ತಾಗುತ್ತದೆ ! – ಸಂಪಾದಕರು) ಈಗ 11 ವರ್ಷಗಳ ನಂತರ ಇಲ್ಲಿ ಗಾಂಧಿಯ ಪ್ರತಿಮೆ ಅನಾವರಣ ಮಾಡಲಾಯಿತು.
Rajnath Singh unveils Lakshadweep’s first Gandhi statue, was earlier opposed by local Muslim majority population: Detailshttps://t.co/mUq7V6kJiT
— OpIndia.com (@OpIndia_com) October 2, 2021
ಲಕ್ಷದ್ವೀಪವು ಶೇ. 98 ರಷ್ಟು ಮುಸಲ್ಮಾನ ಜನಸಂಖ್ಯೆಯನ್ನು ಹೊಂದಿದೆ. ‘ಯಾವುದೇ ಪ್ರತಿಮೆ ಅನಾವರಣವಾದರೆ, ಅದನ್ನು ಹೂವಿನಿಂದ ಅಲಂಕರಿಸಬೇಕಾಗುತ್ತದೆ, ಹಾಗೂ ಅದಕ್ಕೆ ಗೌರವ ನೀಡಬೇಕಾಗುತ್ತದೆ; ಇದರಿಂದ ಶರಿಯತ್ ಕಾನೂನಿನ ಉಲ್ಲಂಘನೆ ಆಗುತ್ತದೆ’, ಎಂದು ಹೇಳುತ್ತಾ ಅಲ್ಲಿಯ ಮತಾಂಧರು ಇದನ್ನು ವಿರೋಧಿಸಿದ್ದರು.