ನಷ್ಟದಲ್ಲಿರುವ ‘ಏರ್ ಇಂಡಿಯಾ’ ಕಂಪನಿಯನ್ನು ಈಗ ‘ಟಾಟಾ ಸನ್ಸ್’ ಖರೀದಿಸಲಿದೆ !

ಸರಕಾರಿ ಕಂಪನಿಗಳನ್ನು ಲಾಭದಲ್ಲಿ ನಡೆಸಲಿಕ್ಕಾಗದಿರಲು ಇದುವರೆಗೆ ದೇಶದಲ್ಲಿ ರಾಜ್ಯವಾಳಿದ ಎಲ್ಲಾಆಡಳಿತ ಪಕ್ಷದ ರಾಜಕಾರಣಿಗಳು ಜವಾಬ್ದಾರರಾಗಿದ್ದಾರೆ, ಇದು ಭಾರತಕ್ಕೆ ಲಜ್ಜಾಸ್ಪದವಾಗಿದೆ ! ಒಂದು ಕಂಪನಿಯನ್ನು ಲಾಭದಲ್ಲಿ ನಡೆಸಲಿಕ್ಕಾಗದ ಇಲ್ಲಿಯವರೆಗಿನ ಎಲ್ಲಾ ಪಕ್ಷದ ರಾಜಕಾರಣಿಗಳು ದೇಶದ ಆಡಳಿತವನ್ನು ಹೇಗೆ ನಡೆಸಿರಬಹುದು ?, ಎಂಬುದು ಗಮನಕ್ಕೆ ಬರುತ್ತದೆ ! – ಸಂಪಾದಕರು

ಮುಂಬಯಿ – ಸರಕಾರಿ ಸ್ವಾಮ್ಯದ ‘ಏರ್ ಇಂಡಿಯಾ’ ಕಂಪನಿಯನ್ನು ‘ಟಾಟಾ ಸನ್ಸ್’ ಈ ಕಂಪನಿಯು ಖರೀದಿಸಲಿದೆ. ‘ಬ್ಲೂಮ್‌ಬರ್ಗ್’ ವಾರ್ತಾಸಂಸ್ಥೆಯಿಂದ ಈ ಮಾಹಿತಿಯನ್ನು ನೀಡಲಾಗಿದೆ. ಇಲ್ಲಿಯವರೆಗೆ ‘ಏರ ಇಂಡಿಯಾ’ ಅಥವಾ ‘ಟಾಟಾ ಗ್ರುಪ್’ ಈ ಬಗ್ಗೆ ಅಧಿಕೃತ ಘೋಷಣೆಯನ್ನು ಮಾಡಿಲ್ಲ.

೧೯೩೨ ರಲ್ಲಿ ಜೆ.ಆರ್.ಡಿ. ಟಾಟಾ ಇವರು ‘ಟಾಟಾ ಏರಲೈನ್ಸ್’ನ್ನು ಸ್ಥಾಪಿಸಿದ್ದರು. ೧೯೪೬ ನೇ ಇಸವಿಯಲ್ಲಿ ‘ಟಾಟಾ ಏರ್‌ಲೈನ್ಸ್’ ಅನ್ನು ‘ಏರ್ ಇಂಡಿಯಾ ಲಿಮಿಟೆಡ್’ ಎಂದು ನಾಮಕರಣ ಮಾಡಲಾಯಿತು. ೧೯೪೭ ರಲ್ಲಿ ಭಾರತ ಸರಕಾರವು ‘ಏರ್ ಇಂಡಿಯಾ ಲಿಮಿಟೆಡ್’ನ ಶೇ. ೪೯ ರಷ್ಟು ಭಾಗವನ್ನು ಖರೀದಿಸಿತು. ೧೯೫೩ ನೇ ಇಸವಿಯಲ್ಲಿ ‘ಏರ್ ಇಂಡಿಯಾ ಲಿಮಿಟೆಡ್’ನ ರಾಷ್ಟ್ರೀಕರಣವನ್ನು ಮಾಡಲಾಯಿತು. ಅನಂತರ ಈಗ ಇಷ್ಟು ವರ್ಷಗಳ ನಂತರ ‘ಟಾಟಾ ಗ್ರುಪ್’ ‘ಏರ್ ಇಂಡಿಯಾ’ವನ್ನು ಪುನಃ ತನ್ನ ವಶಕ್ಕೆ ತೆಗೆದುಕೊಳ್ಳುತ್ತಿದೆ. ‘ಬ್ಲೂಮ್‌ಬರ್ಗ್’ದಲ್ಲಿ ಪ್ರಕಟಗೊಂಡ ವಾರ್ತೆಗನುಸಾರ, ‘ಏರ್ ಇಂಡಿಯಾ’ಗಾಗಿ ‘ಟಾಟಾ ಗ್ರುಪ್’ ಮತ್ತು ‘ಸ್ಪೈಸ್‌ಜೆಟ್’ ಈ ಕಂಪನಿಗಳು ಬೆಲೆಯನ್ನು ಕಟ್ಟಿದ್ದರು. ೨೦೧೯- ೨೦ ರಲ್ಲಿ ‘ಏರ್ ಇಂಡಿಯಾ’ ಹೆಸರಿನಲ್ಲಿ ೩೮ ಸಾವಿರದ ೩೬೬.೩೯ ಕೋಟಿ ರೂಪಾಯಿಗಳಷ್ಟು ಸಾಲವಿತ್ತು. ಮಾರ್ಚ್ ೨೦೨೧ ರಲ್ಲಿ ‘ಏರ್ ಇಂಡಿಯಾ’ಗೆ ೧೦ ಸಾವಿರ ಕೋಟಿ ರೂಪಾಯಿಗಳಷ್ಟು ಆರ್ಥಿಕ ಹಾನಿಯನ್ನು ಸಹಿಸಬೇಕಾಗುವ ಸಾಧ್ಯತೆ ಇರುವುದಾಗಿ ಹೇಳಲಾಗುತ್ತಿದೆ. ಈ ಆರ್ಥಿಕ ಹಾನಿಯ ಭಾರವನ್ನು ‘ಟಾಟಾ ಗ್ರುಪ್’ ಹೊರಬೇಕಾಗಬಹುದು.