ಕಾಂಗ್ರೆಸ್ಸಿನ ಸಂಕಲ್ಪ ಪತ್ರದಲ್ಲಿ ಮುಸಲ್ಮಾನರ ಓಲೈಕೆಗೆ ಪ್ರಾಧಾನ್ಯತೆ !

* ಉತ್ತರಪ್ರದೇಶ ವಿಧಾನಸಭೆ ಚುನಾವಣೆ 2022

* ಕಾಂಗ್ರೆಸ್ಸಿನ ಮುಸ್ಲಿಂ ಲೀಗ್ ನ ದಾರಿಯಲ್ಲಿ ಸಾಗುತ್ತಿರುವ ಕಾಂಗ್ರೆಸ್

* ದಂಗೆಗಳ ವಿರುದ್ಧ ನಡೆಸಲಾಗುವ ಖಟ್ಲೆಗಳನ್ನು ಹಿಂಪಡೆಯುವುದರೊಂದಿಗೆ ಮದರಸಾಗಳ ಆಧುನಿಕರಣ, ಪೊಲೀಸ್ ಖಾತೆಯಲ್ಲಿ ಮುಸಲ್ಮಾನರ ನೇಮಕಾತಿ ಮತ್ತು ‘ಮೊಬ್ ಲಿಂಚಿಂಗ್’ ನ (ಗುಂಪುಗಳಿಂದ ಮಾಡಲಾದ ಹತ್ಯೆ) ವಿರುದ್ಧ ಕಾನೂನನ್ನು ಸಿದ್ಧಪಡಿಸುವ ಆಶ್ವಾಸನೆ !

* ಭಾರತದ ಸ್ವಾತಂತ್ರ್ಯಾನಂತರದಿಂದ ಪೀಳಿಗೆಗಳಿಂದ ಪೀಳಿಗೆಗಳವರೆಗೆ ಮುಸಲ್ಮಾನರ ಓಲೈಕೆ ಮಾಡುವುದರಲ್ಲಿಯೇ ಧನ್ಯತೆಯನ್ನು ಕಾಣುವ ಕಾಂಗ್ರೆಸ್ಸಿನಿಂದ ಇನ್ನೇನು ಅಪೇಕ್ಷಿಸಬಹುದು ? ಓಲೈಕೆಯ ಧೋರಣೆಗಳಿಂದಾಗಿಯೇ ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಹಿಂದೂಗಳಿಗೆ ದ್ವಿತೀಯ ದರ್ಜೆಯ ವರ್ತನೆ ಸಿಗುತ್ತಿದೆ ಎಂಬುದನ್ನು ಗಮನದಲ್ಲಿಡಿ !

* ಕಾಂಗ್ರೆಸ್ಸಿನ ಹಿಂದೂ ವಿರೋಧಿ ಧೋರಣೆಗಳಿಂದಾಗಿಯೇ ಇಂದು ಅದು ಕೊನೆಯುಸಿರು ಎಳೆಯುತ್ತಿದೆ. ಕಾಂಗ್ರೆಸ್ಸಿನ ಅಳಿದುಳಿದ ರಾಜಕೀಯ ಶಕ್ತಿಯನ್ನು ಮುಗಿಸಲು ಹಿಂದೂಗಳ ಬಳಿ ಉತ್ತರಪ್ರದೇಶದ ಚುನಾವಣೆಯ ರೂಪದಲ್ಲಿ ಒಂದು ಉತ್ತಮ ಅವಕಾಶವಿದೆ. ಹಿಂದೂಗಳು ಜಾತಿ, ಸಂಪ್ರದಾಯ ಇತ್ಯಾದಿಗಳನ್ನು ಮರೆತು ವ್ಯಾಪಕ ಹಿಂದೂ ಸಂಘಟನೆಯ ಆವಿಷ್ಕಾರವನ್ನು ತೋರಿಸಬೇಕು ಎಂದು ಭಾರತದ ಇರುವ ಧರ್ಮ ಪ್ರೇಮಿ ಹಿಂದೂಗಳಿಗೆ ಅನಿಸುತ್ತದೆ !

ಲಕ್ಷ್ಮಣಪುರಿ – ಮೂರು ದಶಕಗಳಿಂದ ಉತ್ತರಪ್ರದೇಶದ ಅಧಿಕಾರದಿಂದ ದೂರ ಉಳಿದಿರುವ ಕಾಂಗ್ರೆಸ್ ಮುಸಲ್ಮಾನರ ಮತಗಳ ಆಧಾರದಲ್ಲಿ ಅಧಿಕಾರವನ್ನು ಪಡೆಯಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷವು 13 ಅಂಶಗಳ ಘೋಷಣಾ ಪತ್ರವನ್ನು ಘೋಷಿಸಿದ್ದು ಅದರಲ್ಲಿ ‘ರಾಷ್ಟ್ರೀಯ ಜನಸಂಖ್ಯಾ ನೋಂದಣಿ’ ಈ ಕಾನೂನಿನ ವಿರುದ್ಧ ಮತಾಂಧರು ನಡೆಸಿದ ದಂಗೆಗಳ ಖಟ್ಲೆಗಳನ್ನು ಹಿಂಪಡೆಯುವ ಬಗ್ಗೆ ಪ್ರಾಮುಖ್ಯತೆಯಿಂದ ಹೇಳಲಾಗಿದೆ. ಇದರೊಂದಿಗೆ ಗೋಹತ್ಯೆಯನ್ನು ಮಾಡುವವರ ವಿರುದ್ಧ ದಾಖಲಿಸಲಾದ ಖಟ್ಲೆಗಳನ್ನು ಹಿಂಪಡೆಯುವುದು ಹಾಗೆಯೇ ಮದರಸಾಗಳ ಆಧುನೀಕರಣ, ಮದರಸಾಗಳ ಶಿಕ್ಷಕರಿಗೆ ವೇತನ ನೀಡುವುದು, ಪೊಲೀಸ್ ಖಾತೆಯಲ್ಲಿ ಮುಸಲ್ಮಾನರ ನೇಮಕಾತಿ ಇತ್ಯಾದಿ ಆಶ್ವಾಸನೆಗಳನ್ನು ಸೇರಿಸಲಾಗಿದೆ.

ಇದರ ಹೊರತು ಪ್ರತಿಯೊಬ್ಬ ಮುಸಲ್ಮಾನ ವಿದ್ಯಾರ್ಥಿಗೆ ವಿದ್ಯಾರ್ಥಿ ವೇತನ, ಕಳೆದ 30 ವರ್ಷಗಳಲ್ಲಿ ವಕ್ಫ್ ಬೋರ್ಡನ ಸಂಪತ್ತಿನ ಸ್ವಾಧೀನತೆಯ ಬಗ್ಗೆ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದು, ಪ್ರತಿಯೊಂದು ಜಿಲ್ಲೆಯಲ್ಲಿ ಯೂನಾನಿ ವೈದ್ಯಕೀಯ ಮಹಾವಿದ್ಯಾಲಯವನ್ನು ತೆರೆಯುವುದು ಇತ್ಯಾದಿಗಳನ್ನು ಸೇರಿಸಲಾಗಿದೆ. ಯುನಾನಿ ಎಂಬ ಹೆಸರಿನ ವೈದ್ಯಕೀಯ ಉಪಚಾರ ಪದ್ಧತಿಯು ಅರಬಿ-ಇರಾನಿ ಪದ್ಧತಿಯಾಗಿದ್ದು ಇದನ್ನು ಪ್ರಮುಖವಾಗಿ ಮುಸಲ್ಮಾನ ದೇಶಗಳಲ್ಲಿ ಬಳಸಲಾಗುತ್ತದೆ.

1. 2022 ರಲ್ಲಿ ನಡೆಯಲಿರುವ ಉತ್ತರಪ್ರದೇಶ ವಿಧಾನಸಭೆಯ ಚುನಾವಣೆಯನ್ನು ಗಮನದಲ್ಲಿಟ್ಟು ಕಾಂಗ್ರೆಸ್ ಪಕ್ಷವು ದೊಡ್ಡಪ್ರಮಾಣದಲ್ಲಿ ಮುಸಲ್ಮಾನರ ಓಲೈಕೆಯ ಪ್ರಯತ್ನವನ್ನು ಆರಂಭಿಸಿದೆ. ಇದಕ್ಕಾಗಿ ಅವರು ಘೋಷಣಾ ಪತ್ರ ವನ್ನು ಘೋಷಿಸಿದ್ದಾರೆ. ಈ ಘೋಷಣಾ ಪತ್ರವನ್ನು ಪ್ರತಿಯೊಬ್ಬ ಮುಸಲ್ಮಾನರ ಮನೆಯವರೆಗೆ ತಲುಪಿಸುವ ಧ್ಯೇಯವನ್ನು ಇಡಲಾಗಿದೆ.

2. ಉತ್ತರಪ್ರದೇಶದಲ್ಲಿ ಶೇಕಡ 20ರಷ್ಟು ಮತದಾರರು ಮುಸಲ್ಮಾನರಾಗಿದ್ದಾರೆ. ಇದರ ಪರಿಣಾಮವು 143 ಮತದಾರರ ಸಂಘಗಳಲ್ಲಿ ಕಂಡುಬರುತ್ತದೆ. 36 ಮತದಾರ ಸಂಘಗಳಲ್ಲಿ ಮುಸಲ್ಮಾನರ ಹಿಡಿತವಿದೆ. ಇದನ್ನು ಗಮನದಲ್ಲಿಟ್ಟು ಕಾಂಗ್ರೆಸ್ಸಿನ ಇಮ್ರಾನ ಮಸೂದ ಇವರನ್ನು ಅಖಿಲ ಭಾರತೀಯ ಕಾಂಗ್ರೆಸ್ ಕಮಿಟಿಯ ರಾಷ್ಟ್ರೀಯ ಸಚಿವರನ್ನಾಗಿಸಲಾಗಿದೆ.

3. ಘೋಷಣಾ ಪತ್ರದ ಪ್ರತಿಯನ್ನು ಪ್ರತಿ ಶುಕ್ರವಾರ ನಮಾಜ್ ಪಠಣದ ನಂತರ ಮಸೀದಿಯ ಹೊರಗೆ ವಿತರಿಸಲಾಗುವುದು. ಇದರ ಜವಾಬ್ದಾರಿಯನ್ನು ಅಲ್ಪಸಂಖ್ಯಾತ ಮೋರ್ಚಾದ ಕಾರ್ಯಕರ್ತರಿಗೆ ವಹಿಸಲಾಗಿದೆ.

4. ಕಾಂಗ್ರೆಸ್ ತನ್ನ ಸಭೆಯಲ್ಲಿ ಮೌಲಾನಾ(ಇಸ್ಲಾಮೀ ಅಧ್ಯಯನಕಾರ) ಮತ್ತು ಉಲೇಮಾ (ಇಸ್ಲಾಮೀ ಧರ್ಮಜ್ಞಾನಿ) ಇವರನ್ನು ಸಹಭಾಗಿಯಾಗಿಸಲು ಆರಂಭಿಸಿದೆ. ಅವರು ನೀಡಿರುವ ಸೂಚನೆಗಳ ಆಧಾರದಲ್ಲಿ ಘೋಷಣಾ ಪತ್ರವನ್ನು ಘೋಷಿಸಲಾಗಿದೆ. ಕಾಂಗ್ರೆಸ್ಸಿನ ಒಲೈಕೆಯ ಧೋರಣೆಯ ಬಗ್ಗೆ ಭಾಜಪವು ‘ರಾಮಮಂದಿರವನ್ನು ವಿರೋಧಿಸುವುದರೊಂದಿಗೆ ಭಯೋತ್ಪಾದಕರಿಗಾಗಿ ಕಣ್ಣೀರು ಸುರಿಸುವ ಕಾಂಗ್ರೆಸ್ ಯಾವಾಗಲೂ ಓಲೈಕೆ ರಾಜಕಾರಣವನ್ನು ಮಾಡುತ್ತ ಬಂದಿದೆ’ ಎಂದು ಹೇಳಿದೆ